ಸೋಂಕು ಪ್ರಕರಣ ಕಡಿತ: ಬೀಜಿಂಗ್ ಸೋಂಕು ಮುಕ್ತ: ನಿರ್ಬಂಧ ಸಡಿಲಿಕೆ
Team Udayavani, Aug 25, 2020, 5:28 AM IST
ಬೀಜಿಂಗ್: ಬಾಸ್ಕೆಟ್ ಬಾಲ್ ಕ್ರೀಡಾಂಗಣವನ್ನು ಸ್ಯಾನಿಟೈಸ್ ಮಾಡುತ್ತಿರುವ ಸಿಬಂದಿ.
ಬೀಜಿಂಗ್: ಕಳೆದ 13 ದಿನಗಳಿಂದ ದೇಶದಲ್ಲಿ ಹೊಸ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗದ ಕಾರಣ ಇಲ್ಲಿನ ಆರೋಗ್ಯ ಇಲಾಖೆ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ರೂಪಿಸಿದ್ದ ಮಾರ್ಗಸೂಚಿಯಲ್ಲಿನ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿದೆ.
ಅನ್‌ಲಾಕ್ ಬಳಿಕ ಸತತ ಎರಡನೇ ಬಾರಿಗೆ ಬೀಜಿಂಗ್‌ನಲ್ಲಿ ನಿಯಮ ಸಡಿಲಿಕೆ ಮಾಡುತ್ತಿದ್ದು, ಈ ಬಾರಿ ಕೋವಿಡ್ ಸುರಕ್ಷತಾ ಮಾರ್ಗಸೂಚಿಗಳನ್ನು ಸಡಿಲಗೊಳಿಸಲಾಗಿದೆ. ಆದರೆ ಸೋಂಕು ಪ್ರಕರಣಗಳು ಇಳಿಕೆಯಾದ ಹಿನ್ನೆಲೆಯಲ್ಲಿ ಮಾರ್ಗಸೂಚಿಯ ನಿರ್ಬಂಧಗಳನ್ನು ಸಡಿಲಗೊಳಿಸಿದ್ದರೂ, ಬೀಜಿಂಗ್‌ನ ಕೆಲವು ಭಾಗಗಳಲ್ಲಿ ನಾಗರಿಕರು ಹಳೆಯ ಸುರಕ್ಷತಾ ಕ್ರಮಗಳನ್ನೇ ಅನುಸರಿಸುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಕೆಲವರು, “ಮಾಸ್ಕ್ ಧರಿಸುತ್ತಿರುವುದು ಮನದಲ್ಲೊಂದು ಸುರಕ್ಷತಾ ಭಾವನೆ ಮೂಡುತ್ತಿದೆ’ ಎಂದು ಹೇಳಿದ್ದರೆ, ಇನ್ನೂ ಕೆಲವರು “ಸುತ್ತಲಿನ ಜನರು ಬಳಸುತ್ತಿರುವುದರಿಂದ, ನಾವೂ ಬಳಸಬೇಕೆಂಬ ಒತ್ತಡದಿಂದಲೂ, ಮಾಸ್ಕ್ ಧರಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಇನ್ನು ಇಲ್ಲಿನ ಕಾವೊ ಎಂಬ ವ್ಯಕ್ತಿ ನಿಯಮ ಸಡಿಲಿಕೆ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದು, ನಾನು ಯಾವಾಗ ಬೇಕಾದರೂ ಮಾಸ್ಕ ಇಲ್ಲದೇ ಓಡಾಡ ಬಲ್ಲೆ. ಆದರೆ, ನನ್ನ ಸುತ್ತಲಿನವರು ಅದನ್ನು ಒಪ್ಪಿಕೊಳ್ಳುತ್ತಾರೆಯೇ..? ಎಂದು ಪ್ರಶ್ನಿಸಿದ್ದು, ನಾನು ಮಾಸ್ಕ್ ಧರಿಸದಿದ್ದರೆ ಸುತ್ತಲಿನವರು ಭೀತಿಗೊಳ್ಳಗುತ್ತಾರೆ, ಜತೆಗೆ ನಮ್ಮ ವಿರುದ್ಧ ಅಸಹನೆಯನ್ನು ಹೊರ ಹಾಕುತ್ತಾರೆ. ಅದಕ್ಕಾಗಿ ನಾನು ಹೆದರಿಕೊಂಡು ಮಾಸ್ಕ್ ಹಾಕಿಕೊಳ್ಳುತ್ತೇನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.