![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 25, 2020, 10:54 AM IST
ನವದೆಹಲಿ: 1993ರ ಮುಂಬೈ ಸ್ಫೋಟದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಪ್ರತಿಷ್ಠಿತ ಕರಾಚಿ ಪ್ರದೇಶದಲ್ಲಿನ ಬಂಗಲೆಯಲ್ಲಿ ವಾಸವಾಗಿದ್ದು, ಈ ಹಿಂದೆ ಮುಂಬೈನ ಬಾಲಿವುಡ್ ಮೇಲೆ ಹಿಡಿತ ಸಾಧಿಸಿದಂತೆ ಇದೀಗ ಪಾಕಿಸ್ತಾನಿ ಸಿನಿಮಾ ರಂಗದ ಹಲವಾರು ನಟಿಯರ ಜತೆ ಸಂಪರ್ಕ ಹೊಂದಿರುವ ಬಗ್ಗೆ ಡಿಎನ್ ಎ ಎಕ್ಸ್ ಕ್ಲೂಸಿವ್ ವರದಿ ಮೂಲಕ ಬಹಿರಂಗಪಡಿಸಿದೆ.
ಬಾಲಿವುಡ್ ಮತ್ತು ಭೂಗತ ಲೋಕದ ನಡುವಿನ ಸಂಬಂಧದ ಬಗ್ಗೆ ಈಗಾಗಲೇ ನೀವು ಹಲವು ಬಾರಿ ಓದಿರುತ್ತೀರಿ. ಒಂದಾನೊಂದು ಕಾಲದಲ್ಲಿ (1990) ದಾವೂದ್ ಇಬ್ರಾಹಿಂ ಬಾಲಿವುಡ್ ನ ಹಲವು ಸಿನಿಮಾಗಳಿಗೆ ಹಣ ಹೂಡುತ್ತಿದ್ದ. ಅಷ್ಟೇ ಅಲ್ಲ ಬಾಲಿವುಡ್ ನ ಹಲವು ನಟರು ದಾವೂದ್ ಮನೆಯಲ್ಲಿ ನಡೆಯುತ್ತಿದ್ದ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ಇದೀಗ ಬಾಲಿವುಡ್ ಹಿಡಿತ ಬಿಟ್ಟ ನಂತರವೂ ದಾವೂದ್ ಪಾಕಿಸ್ತಾನದಲ್ಲಿಯೂ ಸಿನಿಮಾ ಕ್ಷೇತ್ರದ ಮೇಲಿನ ವ್ಯಾಮೋಹ ಬಿಟ್ಟಿಲ್ಲ ಎಂದು ವರದಿ ವಿವರಿಸಿದೆ.
ಪಾಕ್ ಸಿನಿಮಾ ಇಂಡಸ್ಟ್ರಿ ಜತೆಗಿನ ದಾವೂದ್ ಸಂಬಂಧ ಬೆಳಕಿಗೆ ಬಂದಿದ್ದು, 2019ರಲ್ಲಿ! ದೊಡ್ಡ ಹೆಸರು ಮಾಡದ, ಸಣ್ಣ, ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪಾಕ್ ನಟಿಗೆ ದೇಶದ ಅತ್ಯುನ್ನತ ಗೌರವವಾದ “ತಾಮ್ಗಾ ಎ ಇಮ್ತಿಯಾಜ್” ಅನ್ನು ಕೊಟ್ಟು ಗೌರವಿಸಲಾಗಿತ್ತು. ಈ ನಟಿಯ ಹೆಸರು ಮೇಹ್ ವಿಶ್ ಹಯಾತ್ (37ವರ್ಷ)!
ಕುತೂಹಲದ ಸಂಗತಿ ಏನೆಂದರೆ ಕೆಲವು ವರ್ಷದ ಹಿಂದೆ ಈಕೆಯ ಮುಖದ ಪರಿಚಯ ಯಾರಿಗೂ ಇರಲಿಲ್ಲವಾಗಿತ್ತು. ಆದರೆ ಇದೀಗ ಪಾಕ್ ಮಾಧ್ಯಮ ಮತ್ತು ಗ್ಲ್ಯಾಮರ್ ಇಂಡಸ್ಟ್ರಿಗೆ ಹಯಾತ್ ಜನಪ್ರಿಯ ನಟಿಯಾಗಿಬಿಟ್ಟಿದ್ದಾಳೆ!
ಪಾಕಿಸ್ತಾನದ ಅತ್ಯುನ್ನತ ಗೌರವವಾದ ತಾಮ್ಗಾ ಎ ಇಮ್ತಿಯಾಜ್ ಪ್ರಶಸ್ತಿಯನ್ನು ಮೇಹ್ ವಿಶ್ ಗೆ ಕೊಡಲು ನಿರ್ಧರಿಸಿದ ಪಾಕಿಸ್ತಾನ ಸರ್ಕಾರದ ವಿರುದ್ಧ ಹಲವು ಜನರು ಆಕ್ರೋಶ ವ್ಯಕ್ತಪಡಿಸಿ ಪ್ರಶ್ನಿಸಿದ್ದರು. ಮೇಹ್ ವಿಶ್ ಗೆ ಇಂತಹ ದೊಡ್ಡ ಗೌರವದ ಪ್ರಶಸ್ತಿ ನೀಡಿರುವ ಬಗ್ಗೆ ಪಾಕಿಸ್ತಾನ ಸಿನಿಮಾ ಇಂಡಸ್ಟ್ರಿ ಅಚ್ಚರಿ ವ್ಯಕ್ತಪಡಿಸಿರುವುದಾಗಿ ವೆಬ್ ಪೋರ್ಟಲ್ ವರದಿ ಮಾಡಿತ್ತು.
ಪಾಕ್ ವೆಬ್ ಪೋರ್ಟಲ್ ವರದಿ ಪ್ರಕಾರ, ಮೇಹ್ ವಿಶ್ ಗೆ ನಿಜಕ್ಕೂ ಸಿನಿಮಾ ಕ್ಷೇತ್ರದಲ್ಲಿ ಮಾಡಿರುವ ಕೆಲಸವನ್ನು ಗುರುತಿಸಿ ತಾಮ್ಗಾ ಎ ಇಮ್ತಿಯಾಜ್ ನಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತೇ ಅಥವಾ ಆಡಳಿತಾರೂಢ ಪಾಕಿಸ್ತಾನ ತೆಹ್ರೀಕ್ ಎ ಇನ್ಸಾಫ್ ಪಕ್ಷಕ್ಕೆ ತುಂಬಾ ನಿಕಟವರ್ತಿಯಾದ ಕರಾಚಿ ಮೂಲದ ಪ್ರಭಾವಿ ವ್ಯಕ್ತಿ ಜತೆ ಸಂಬಂಧ ಹೊಂದಿದ್ದಕ್ಕಾಗಿ ಕೊಡಲಾಗಿದೆಯೇ ಎಂದು ಪ್ರಶ್ನಿಸಿತ್ತು!
ಈ ಸುದ್ದಿ ಬಹಿರಂಗವಾದ ನಂತರ ಮೇಹ್ ವಿಶ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾಗಿದ್ದಳು. ಅಲ್ಲದೇ ಇದು ತನ್ನ ವಿರುದ್ಧದ ಸಂಚು ಎಂದು ಮೇಹ್ ವಿಶ್ ಆಕ್ರೋಶ ವ್ಯಕ್ತಪಡಿಸಿದ್ದಳು.
ದಾವೂದ್ ಪ್ರೇಯಸಿಯಾದ ಹಿನ್ನೆಲೆಯಲ್ಲಿ ಈಕೆಗೆ ಪಾಕ್ ಸರ್ಕಾರ ಪ್ರತಿಷ್ಠಿತ ಪ್ರಶಸ್ತಿ ನೀಡಿರುವುದಾಗಿ ವರದಿ ವಿವರಿಸಿದೆ. ದಾವೂದ್ ಪಾಕಿಸ್ತಾನದ ನಟಿ ಮೇಹ್ ವಿಶ್ ಜತೆ ನಿರಂತರವಾಗಿ ಸಂಪರ್ಕದಲ್ಲಿರುವುದಾಗಿ ವರದಿ ವಿವರಿಸಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.