ಕಟ್‌ಬೆಲ್ತೂರಿನ ಬೆಳ್ಮಕ್ಕಿ ಕೆರೆ ಪುನಶ್ಚೇತನಕ್ಕೆ ಪಂಚಾಯತ್ ಯೋಜನೆ
ಮೂರು ದಶಕಗಳಿಂದ ಹೂಳೆತ್ತದೇ ಪಾಳು ಬಿದ್ದಿರುವ ಕೆರೆ ; 5 ಲ.ರೂ. ಅನುದಾನ ಮೀಸಲು
Team Udayavani, Aug 26, 2020, 3:51 AM IST
ಕಾಯಕಲ್ಪಕ್ಕೆ ಕಾದಿರುವ ಕಟ್‌ಬೆಲ್ತೂರಿನ ಬೆಳ್ಮಕ್ಕಿ ಕೆರೆ.
ಕುಂದಾಪುರ: ಕಳೆದ 3 ದಶಕದಿಂದ ಹೂಳೆತ್ತದೆ, ಯಾವುದೇ ರೀತಿಯ ಅಭಿವೃದ್ಧಿಗೊಳ್ಳದೇ ಒಂದು ರೀತಿಯಲ್ಲಿ ನಿಷ್ಪ್ರಯೋಜಕವಾಗಿರುವ ಕಟ್‌ಬೆಲ್ತೂರಿನ ಬೆಳ್ಮಕ್ಕಿ ಕೆರೆಯನ್ನು ಪುನಶ್ಚೇತನಗೊಳಿ ಸಲು ಕಟ್‌ಬೆಲ್ತೂರು ಗ್ರಾ.ಪಂ. ಯೋಜನೆ ಸಿದ್ಧಪಡಿಸಿದೆ. ಇದರಿಂದ ಭವಿಷ್ಯದಲ್ಲಿ ಈ ಭಾಗದ ಹತ್ತಾರು ಎಕರೆ ಕೃಷಿ ಭೂಮಿಗೂ ಅನುಕೂಲವಾಗಲಿದೆ. ಈ ಬೆಳ್ಮಕ್ಕಿ ಕೆರೆಯ ಅಭಿವೃದ್ಧಿ ನಿಟ್ಟಿನಲ್ಲಿ ಕಟ್‌ಬೆಲ್ತೂರು ಗ್ರಾ.ಪಂ. 2019-20ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 5 ಲಕ್ಷ ರೂ. ಅನುದಾನ ಮೀಸಲಿಟ್ಟಿದೆ.
ಕಟ್‌ಬೆಲ್ತೂರು ಗ್ರಾಮ ಪಂಚಾಯತ್ ಅಧೀನದ ಕೆರೆ ಇದಾಗಿದ್ದು, ಸುಮಾರು 30 ವರ್ಷಗಳಿಂದಲೂ ಈ ಕೆರೆಯ ಹೂಳೆತ್ತುವ ಕಾರ್ಯ ನಡೆದಿಲ್ಲ. ಇನ್ನು ಕೆರೆಯ ಪಕ್ಕದಲ್ಲೇ ರಸ್ತೆಯಿದ್ದರೂ, ಯಾವುದೇ ರೀತಿಯ ತಡೆಗೋಡೆಯಿಲ್ಲ. ಇದು ಹಿಂದೆ ತುಂಬಾ ಆಳ ವಾಗಿದ್ದು, ಈಗ ಹೂಳಿನಿಂದ ತುಂಬಿಕೊಂಡಿದೆ. ಹಿಂದೆ ಮುಂಗಾರು ಹಂಗಾಮಿನಲ್ಲಿ ಅಷ್ಟೇನು ಪ್ರಯೋಜನ ವಾಗಿರದಿದ್ದರೂ, ಹಿಂಗಾರು ಹಂಗಾಮಿನಲ್ಲಿ ಈ ಭಾಗದ ಕೃಷಿಕರಿಗೆ ಪ್ರಯೋಜನವಾಗುತ್ತಿತ್ತು.
8 ಕೆರೆ ಅಭಿವೃದ್ಧಿ
ಬೇಸಗೆ ಕಾಲದಲ್ಲಿ ಪ್ರತಿ ವರ್ಷ ನೀರಿನ ಸಮಸ್ಯೆ ಎದುರಿಸುತ್ತಿರುವ ಕಟ್ ಬೆಲೂ¤ರು ಗ್ರಾಮ ಪಂಚಾಯತ್ ಕಳೆದ 2-3 ವರ್ಷಗಳಿಂದ ತಮ್ಮ ಪಂಚಾಯತ್ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಮುಂದಾಗಿದೆ. ಕಳೆದೆರಡು ವರ್ಷಗಳಿಂದ ಭದ್ರಮಹಾಂಕಾಳಿ ದೇವಸ್ಥಾನ ಸಮೀಪದ ಕೆರೆ, ದಾಸನ ಕೆರೆ, ದೇವಲ್ಕುಂದದ ಸಿಹಿ ನೀರಿನ ಕೆರೆ, ಎರಡು ಮದಗ, ಪಂಚಾಯತ್ ಕಟ್ಟಡ ಸಮೀಪದ ಕೆರೆ ಸೇರಿದಂತೆ 8 ಕೆರೆಗಳನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪುನಶ್ಚೇತನಗೊಳಿಸುವಲ್ಲಿ ಯಶಸ್ವಿಯಾಗಿದೆ. ಇಂತಹ ಜಲ ಸ್ವಾವಲಂಬನೆಯಿಂದಾಗಿ ಪ್ರತಿ ವರ್ಷ ಟ್ಯಾಂಕರ್ ನೀರಿಗೆ ಮೊರೆ ಹೋಗುತ್ತಿದ್ದ ಪಂಚಾಯತ್ ಕಳೆದ ಬೇಸಿಗೆಯಲ್ಲಿ ಅಷ್ಟೊಂದು ಟ್ಯಾಂಕರ್ ನೀರಿನ ಅಗತ್ಯವೇ ಬಿದ್ದಿರಲಿಲ್ಲ.
ಬೆಳ್ಮಕ್ಕಿ ಕೆರೆಯನ್ನು ಹೂಳೆತ್ತಿ, ಅದರ ಎರಡು ಬದುಗಳು ಕುಸಿಯದಂತೆ ಕಲ್ಲುಗಳನ್ನು ಕಟ್ಟಿ, ರಸ್ತೆ ಬದಿಯೇ ಇರುವುದರಿಂದ ತಡೆಗೋಡೆಯನ್ನು ನಿರ್ಮಿಸಿದರೆ ತುಂಬಾ ಪ್ರಯೋಜನವಾಗಲಿದೆ ಎನ್ನುವುದು ಊರವರ ಬೇಡಿಕೆಯಾಗಿದೆ.
ಪುನಶ್ಚೇತನಕ್ಕೆ ಯೋಜನೆ
ನಮ್ಮ ಪಂಚಾಯತ್ ವ್ಯಾಪ್ತಿಯ ಬೆಳ್ಮಕ್ಕಿ ಕೆರೆಯನ್ನು ಪುನಶ್ಚೇತನಗೊಳಿಸಲು ಹಿಂದಿನ ಸಾಲಿನಲ್ಲಿಯೇ ಪಂಚಾಯತ್‌ನಿಂದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಹೂಳೆತ್ತುವ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆ ಇರುವುದರಿಂದ ಸರ್ವೇ ಮಾಡಿಸಿ, ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.
– ಅಶ್ವಿನಿ, ಪಿಡಿಒ, ಕಟ್‌ಬೆಲ್ತೂರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.