25 ದಿನಗಳಲ್ಲಿ ಶೇ.100ರಷ್ಟು ಗುಣ; ಕೇಂದ್ರ ಸರಕಾರದಿಂದಲೇ ಮಾಹಿತಿ ಪ್ರಕಟ
Team Udayavani, Aug 26, 2020, 5:20 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದಲ್ಲಿ ಸೋಂಕಿನಿಂದ ಗುಣ ಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಸೋಮವಾರದಿಂದ ಮಂಗಳವಾರಕ್ಕೆ ಒಂದೇ ದಿನ 66,550 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈ ಮೂಲಕ ದೇಶದ ಗುಣಮುಖ ಪ್ರಮಾಣ ಶೇ.75.92ಕ್ಕೇರಿದೆ. ಕಳೆದ 25 ದಿನಗಳಲ್ಲಿ ಗುಣಮುಖ ಪ್ರಮಾಣದಲ್ಲಿ ಶೇ.100ಕ್ಕೂ ಹೆಚ್ಚು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ಮಾಹಿತಿ ನೀಡಿದೆ. ಪ್ರಸ್ತುತ ದೇಶದಲ್ಲಿನ ಸಕ್ರಿಯ ಸೋಂಕಿತರ ಪ್ರಮಾಣ ಶೇ.22. 24ರಷ್ಟಿದೆ. ಈ ಸಂಖ್ಯೆಗೆ ಹೋಲಿಸಿದರೆ ಗುಣ ಮು ಖರ ಪ್ರಮಾಣ ಇದಕ್ಕಿಂತ 3.41 ಪಟ್ಟು ಹೆಚ್ಚಿದೆ.
ಪಾಸಿಟಿವ್ ಸಂಖ್ಯೆ ಕಡಿಮೆ: ದೇಶಾದ್ಯಂತ ಸೋಂಕು ಪತ್ತೆ ಪರೀಕ್ಷೆಯನ್ನು ವ್ಯಾಪಕವಾಗಿ ಹೆಚ್ಚಿಸ ಲಾಗಿದೆ. ಇದರ ಜತೆಗೆ ಸೋಂಕು ಪಾಸಿಟಿವ್ ಆಗುವ ಪ್ರಕರಣಗಳು ಕಡಿಮೆಯಾ ಗಿವೆ. ಸೋಮ ವಾರದಿಂದ ಮಂಗಳವಾರದ ಅವಧಿಯಲ್ಲಿ ಈ ಅಂಶ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಖಾತೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
60,975 ಪ್ರಕರಣ ಪತ್ತೆ: ಈ ನಡುವೆ, ದೇಶದಲ್ಲಿ ಸೋಮವಾರದಿಂದ ಮಂಗಳವಾರಕ್ಕೆ 24 ಗಂಟೆಗಳ ಅವಧಿಯಲ್ಲಿ 60,975 ಮಂದಿಗೆ ಸೋಂಕು ದೃಢಪಟ್ಟಿದೆ. 848 ಮಂದಿ ಮೃತಪಟ್ಟಿದ್ದಾರೆ. ಮರಣ ಪ್ರಮಾಣವು ಶೇ.1.84ಕ್ಕಿಳಿಕೆಯಾಗಿದೆ ಎಂದು ಭೂಷಣ್ ತಿಳಿಸಿದ್ದಾರೆ.
ರಷ್ಯಾ ಜತೆಗೆ ಮಾತುಕತೆ: ಸೋಂಕು ತಡೆಗೆ ರಷ್ಯಾ ಅಭಿವೃದ್ಧಿಪಡಿಸಿರುವ “ಸ್ಪುಟ್ನಿಕ್-5′ ಲಸಿಕೆಯನ್ನು ಖರೀದಿಸುವ ಬಗ್ಗೆ ಮಾತುಕತೆಗಳು ನಡೆದಿವೆ. ರಷ್ಯಾ ಜತೆಗೆ ಪ್ರಾಥಮಿಕ ಮಾಹಿತಿ ಹಂಚಿ ಕೊಳ್ಳಲಾಗಿದೆ ಎಂದು ಆರೋಗ್ಯ ಕಾರ್ಯ ದರ್ಶಿ ತಿಳಿಸಿದ್ದಾರೆ.
ಮಾಸ್ಕ್ ಧರಿಸದವರೇ ಕಾರಣ: ಐಸಿಎಂಆರ್
ಸೋಂಕು ದೇಶ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಲು ಮಾಸ್ಕ್ ಧರಿಸದೇ ಬೇಜವಾಬ್ದಾರಿ ಯುತವಾಗಿ ವರ್ತಿಸು ವವರೇ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ತಜ್ಞರು ಅಭಿ ಪ್ರಾಯಪಟ್ಟಿದ್ದಾರೆ. ಸೋಂಕು ವ್ಯಾಪಿಸಲು ಕಿರಿಯರು ಕಾರಣ, ಹಿರಿಯರು ಕಾರಣ ಎಂದು ನಾವು ಹೇಳುವುದಿಲ್ಲ. ಬದಲಿಗೆ, ಮಾಸ್ಕ್ ಧರಿಸದೇ ಸಾರ್ವಜನಿಕವಾಗಿ ಓಡಾಡುವವರು, ನಿರ್ಲಕ್ಷ್ಯ ವಹಿಸುವವರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ವ್ಯಾಪಿಸಿತು ಎಂದು ಐಸಿಎಂಆರ್ ಡಿಜಿ ಡಾ. ಬಲರಾಂ ಭಾರ್ಗವ ಹೇಳಿದ್ದಾರೆ. ಇದೇ ವೇಳೆ, ದೇಶದಲ್ಲಿ 3 ಲಸಿಕೆಗಳು ಮುಂಚೂಣಿಯಲ್ಲಿದ್ದು, ಮಾನವನ ಮೇಲಿನ ಪ್ರಯೋಗ ಪ್ರಕ್ರಿಯೆ ನಡೆಸಲಾಗುತ್ತಿವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.