ನಕ್ಷತ್ರಪುಂಜದಿಂದ ಹೊಮ್ಮಿದ ಬೆಳಕು : ಆ್ಯಸ್ಟ್ರೋಸ್ಯಾಟ್‌ನಿಂದ ಅಪರೂಪದ ಆವಿಷ್ಕಾರ
Team Udayavani, Aug 26, 2020, 7:00 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾರತದ ಮೊದಲ ಬಹು-ತರಂಗಾಂತರ ಉಪಗ್ರಹವಾದ ಆ್ಯಸ್ಟ್ರೋಸ್ಯಾಟ್, ಭೂಮಿಯಿಂದ 9.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ತಾರಾಪುಂಜವೊಂದರಲ್ಲಿ ಅತಿನೇರಳೆ ಕಿರಣಗಳು ಹೊರಹೊಮ್ಮುತ್ತಿರುವುದನ್ನು ಪತ್ತೆಹಚ್ಚಿದೆ. ಈ ಮೂಲಕ ಚೆನ್ನೈಯ ಇಂಟರ್-ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರಾನಮಿ ಆ್ಯಂಡ್ ಆ್ಯಸ್ಟ್ರೋಫಿಸಿಕ್ಸ್ (ಐಯುಸಿಎಎ) ಹೊಸ ಮೈಲುಗಲ್ಲು ಸಾಧಿಸಿದೆ.
ಬೆಳಕಿನ ಪುಂಜ
ಎಯುಡಿಎಫ್ಎಸ್01 ಎಂಬ ನಕ್ಷತ್ರಪುಂಜದಿಂದ ಭಾರೀ ಪ್ರಮಾಣದಲ್ಲಿ ಅತಿನೇರಳೆ ಕಿರಣಗಳು ಹೊರಹೊಮ್ಮುತ್ತಿರುವುದನ್ನು ಈ ಉಪಗ್ರಹ ಪತ್ತೆಹಚ್ಚಿದೆ. ಈ ನಕ್ಷತ್ರಪುಂಜವು ಭೂಮಿಯಿಂದ 9.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಐಯುಸಿಎಎ ಸಂಸ್ಥೆಯ ಸಹಾಯಕ ಪ್ರೊಫೆಸರ್ ಡಾ| ಕನಕ್ ಸಾಹಾ ನೇತೃತ್ವದ ತಂಡವು ಈ ಸಾಧನೆ ಮಾಡಿದ್ದು, ತಂಡದಲ್ಲಿ ಭಾರತ, ಫ್ರಾನ್ಸ್, ಸ್ವಿಜರ್ಲೆಂಡ್, ಯುಎಸ್‌ಎ, ಜಪಾನ್ ಮತ್ತು ನೆದರ್ಲೆಂಡ್‌ನ ವಿಜ್ಞಾನಿಗಳಿದ್ದಾರೆ.
2 ವರ್ಷ ಬೇಕಾಯಿತು
2016ರ ಅಕ್ಟೋಬರ್ ತಿಂಗಳಲ್ಲೇ ವಿಜ್ಞಾನಿಗಳ ತಂಡವು ಇದನ್ನು ಪತ್ತೆ ಹಚ್ಚಿತಾದರೂ ಈ ಕಿರಣಗಳು ಹೊರಬರುತ್ತಿರುವುದು ಅದೇ ನಕ್ಷತ್ರಪುಂಜದಿಂದ ಎಂಬುದನ್ನು ಸಾಬೀತುಪಡಿಸಲು 2 ವರ್ಷಗಳು ಹಿಡಿದವು. ಭೂಮಿಯ ವಾತಾವರಣವು ಅತಿನೇರಳೆ ವಿಕಿರಣಗಳನ್ನು ಹೀರಿಕೊಳ್ಳುವ ಕಾರಣ, ಬಾಹ್ಯಾಕಾಶದಿಂದಲೇ ಅದನ್ನು ಅವಲೋಕಿಸುವ ಅಗತ್ಯವಿತ್ತು. ಅಲ್ಲದೆ, ಈ ಹಿಂದೆ ನಾಸಾದ ಹಬಲ್ ಟೆಲಿಸ್ಕೋಪ್ ಕೂಡ ಇದೇ ತಾರಾಪುಂಜದಿಂದ ವಿಕಿರಣ ಹೊರಸೂಸುತ್ತದೆಯೇ ಎಂಬುದನ್ನು ತಿಳಿಯಲು ಪ್ರಯತ್ನಿಸಿ, ವಿಫಲವಾಗಿತ್ತು.
ಹೀಗಾಗಿ, ಆ್ಯಸ್ಟ್ರೋಸ್ಯಾಟ್ ಇಂಥದ್ದೊಂದು ಸಾಧನೆ ಮಾಡಿದೆ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಲು ಸ್ವಲ್ಪ ಸಮಯ ತಗಲಿತು ಎಂದು ಸಾಹಾ ಹೇಳಿದ್ದಾರೆ.
– ಆ್ಯಸ್ಟ್ರೋಸ್ಯಾಟ್ ಭಾರತದ ಮೊದಲ ಬಹು-ತರಂಗಾಂತರ ಉಪಗ್ರಹ
– ಇದರಲ್ಲಿ 5 ವಿಶಿಷ್ಟವಾದ ಎಕ್ಸ್‌ರೇ ಮತ್ತು ಅಲ್ಟ್ರಾವಯಲೆಟ್ ದೂರದರ್ಶಕಗಳಿವೆ
– ತಾರಾಪುಂಜದಿಂದ ಹೊರಸೂಸುವ ಅತಿನೇರಳೆ ಕಿರಣಗಳನ್ನು ಇದು ಪತ್ತೆಹಚ್ಚಿದೆ
– ಭೂಮಿಯಿಂದ 9.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಈ ನಕ್ಷತ್ರಪುಂಜ
– 2016ರ ಅಕ್ಟೋಬರ್‌ನಲ್ಲಿ ನಡೆದಿತ್ತು ಬೆಳವಣಿಗೆ. 28 ಗಂಟೆಗಳಿಗೂ ಹೆಚ್ಚು ಕಾಲ ಅತಿನೇರಳೆ ಕಿರಣ ಹೊರಸೂಸುತ್ತಿದ್ದ ತಾರಾಪುಂಜ.
ಈ ಬ್ರಹ್ಮಾಂಡದ ಕಗ್ಗತ್ತಲ ಯುಗ ಅಂತ್ಯವಾದದ್ದು ಯಾವಾಗ ಮತ್ತು ಅಲ್ಲಿ ಬೆಳಕಿನ ಕಿರಣ ಮೂಡಿದ್ದು ಯಾವಾಗ ಎಂಬುದರ ಸುಳಿವು ನೀಡುವಲ್ಲಿ ಈ ಆವಿಷ್ಕಾರವು ನೆರವಾಗಲಿದೆ. ಬೆಳಕಿನ ಆರಂಭಿಕ ಮೂಲವನ್ನು ಪತ್ತೆಹಚ್ಚುವುದು ಕಷ್ಟವಾದರೂ ಇಂಥದ್ದೊಂದು ಮಹತ್ವದ ಸಾಧನೆ ಮಾಡಿದವರನ್ನು ಅಭಿನಂದಿಸುತ್ತೇನೆ.
– ಡಾ| ಸೋಮಕ್ ರಾಯ್ ಚೌಧರಿ, ಐಯುಸಿಎಎ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.