ಪಟಾಕಿ ವಹಿವಾಟಿಗೆ ಕುತ್ತು
ಸಿಡಿ ಮದ್ದು ಸಾಗಣೆ-ತಯಾರಿಕೆಗೆ ಹಲವು ಅಡ್ಡಿ
Team Udayavani, Aug 26, 2020, 3:23 PM IST
ಹುಬ್ಬಳ್ಳಿ: ಕೋವಿಡ್ ಕಾಟ ಸಿಡಿಮದ್ದು ತಯಾರಿಕೆ ಉದ್ಯಮಕ್ಕೂ ತಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಟಾಕಿಗಳ ತಯಾರಿಕೆ, ಸಾಗಾಟಕ್ಕೆ ಅಡ್ಡಿಯಾಗಿದ್ದರೆ, ಗಣೇಶೋತ್ಸವದಲ್ಲಿ ಸಾರ್ವಜನಿಕ ಸಂಭ್ರಮಾಚರಣೆ ಇಲ್ಲದೆ ಪಟಾಕಿ ಖರೀದಿಯೂ ಮಂಕಾಗಿದೆ.
ಹುಬ್ಬಳ್ಳಿಯಲ್ಲಿ ಪ್ರತಿ ವರ್ಷದ ಗಣೇಶೋತ್ಸವ ವೇಳೆ ಚಿತ್ತಾರದ ಸಿಡಿಮದ್ದುಗಳು ಆಕಾಶದೆತ್ತರಕ್ಕೆ ಹಾರಿ ಶಬ್ದ ಮಾಡುತ್ತಿದ್ದವು. ಈ ವರ್ಷ ಅದರ ಅಬ್ಬರ ಕಾಣದಾಗುತ್ತಿದೆ. ಸಿಡಿಮದ್ದುಗಳ ತಯಾರಿಕೆಗೆ ಹೆಸರುವಾಸಿಯಾಗಿರುವ ಶಿವಕಾಶಿಯಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿದ್ದರೂ ಸಿಡಿಮದ್ದುಗಳು ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಸಾಗಣೆಗೂ ಹಲವು ಅಡ್ಡಿಗಳುಂಟಾಗಿವೆ ಎನ್ನಲಾಗಿದೆ.
ಮಾರಾಟಕ್ಕೆ ಅವಕಾಶವಿಲ್ಲ: ಪ್ರತಿ ವರ್ಷ ಗಣೇಶೋತ್ಸವ ಹಾಗೂ ದೀಪಾವಳಿ ಸಮಯದಲ್ಲಿ ನೆಹರು ಮೈದಾನದಲ್ಲಿ ಪಟಾಕಿಗಳ ಮಾರಾಟಕ್ಕೆ ತಾತ್ಕಾಲಿಕ ಮಳಿಗೆ ಹಾಕಿಕೊಳ್ಳಲು ಜಿಲ್ಲಾಡಳಿತ ಅವಕಾಶ ಮಾಡಿಕೊಡುತ್ತಿತ್ತು. ಆದರೆ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸಿಡಿಮದ್ದು ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಇದರಿಂದ ಸಿಡಿಮದ್ದು ಮಾರಾಟಗಾರರು ತಮ್ಮ ತಮ್ಮ ಅಂಗಡಿಗಳಲ್ಲಿಯೇ ಸಣ್ಣ ಪ್ರಮಾಣದಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರತಿ ವರ್ಷ ಗಣೇಶೋತ್ಸವ ಸಮಯದಲ್ಲಿ 25 ದಿನಗಳವರೆಗೆ ಸಿಡಿಮದ್ದು ವಹಿವಾಟು ನಡೆಯುತ್ತಿತ್ತು. ಆದರೆ ಈ ವರ್ಷ 2-3 ದಿನಗಳಿಗೆ ಸೀಮಿತವಾಗಿದ್ದು, ಹೋಲ್‌ಸೇಲ್ ಸಿಡಿಮದ್ದು ಖರೀದಿಸುವವರು ಬರದೇ ಇರುವುದು ಹಾಗೂ ಶಿವಕಾಶಿಯಿಂದ ಬರುವ ಸರಕು ಸಹ ಕಡಿಮೆ ಪ್ರಮಾಣದಲ್ಲಿ ಬಂದಿದ್ದು ವ್ಯಾಪಾರದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಈ ವರ್ಷದ ಗಣೇಶೋತ್ಸವ ಸಂದರ್ಭದಲ್ಲಿ ಶೇ.30-40 ಮಾತ್ರ ಪಟಾಕಿ ವಹಿವಾಟು ನಡೆಯುತ್ತಿದೆಯಂತೆ.
ನಗದು ವಹಿವಾಟಿಗೆ ಆದ್ಯತೆ: ಸಿಡಿಮದ್ದು ಮಾರಾಟದಲ್ಲಿ ಪ್ರತಿ ವರ್ಷ ಸಿಡಿಮದ್ದು ಖರೀದಿಸಿದ ನಂತರ ಹಣ ಮರುಪಾವತಿಗೆ ಕಾಲಾವಕಾಶ ನೀಡುತ್ತಿದ್ದರು. ಆದರೆ ಈ ವರ್ಷ ಶಿವಕಾಶಿಯಲ್ಲಿ ನಗದು ವಹಿವಾಟಿಗೆ ಆದ್ಯತೆ ನೀಡಿದ್ದು, ಸಣ್ಣ ವ್ಯಾಪಾರಿಗಳು ಸಿಡಿಮದ್ದು ಮಾರಾಟವೇ ಮಾಡುತ್ತಿಲ್ಲ. ಜತೆಗೆ ಹಣ ಇದ್ದರೆ ಮಾತ್ರ ಸಿಡಿಮದ್ದು ಎನ್ನುವಂತಾಗಿದೆ.ಜತೆಗೆ ನಮಗೆ ಬೇಕಾದ ಸರಕು ಸಿಗುತ್ತಿಲ್ಲ. ಇರುವ ಸರಕನ್ನೇ ತೆಗೆದುಕೊಂಡು ಹೋಗಬೇಕೆಂದು ಹೇಳುತ್ತಾರೆ.ಇದರಿಂದ ಗ್ರಾಹಕರಿಗೆ ಬೇಕಾದ ವಸ್ತುಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ವ್ಯಾಪಾರಿಗಳ ಅನಿಸಿಕೆ.
ಅದ್ದೂರಿ ಗಣೇಶೋತ್ಸವಕ್ಕೆ ಈ ವರ್ಷ ತೆರೆ ಬಿದ್ದಿದ್ದು, ಎಲ್ಲೆಡೆ ಗಣೇಶೋತ್ಸವವನ್ನು ಸರಳವಾಗಿ ಆಚರಿಸುತ್ತಿದ್ದು, ಒಂದೆಡೆ ಕೋವಿಡ್ ವೈರಸ್ ಇದ್ದರೆ ಮತ್ತೂಂದೆಡೆ ಮಳೆಯ ಕಾಟದಿಂದ ಈ ವರ್ಷದ ಗಣೇಶೋತ್ಸವಕ್ಕೆ ಕೊನೆಯ ಸಮಯದಲ್ಲಿ ಅವಕಾಶ ನೀಡಲಾಯಿತು. ಇದರಿಂದ ಕೇವಲ 40 ರಷ್ಟು ಮಾತ್ರ ಸಿಡಿಮದ್ದು ಖರೀದಿಗೆ ಬರುತ್ತಿರುವ ಜನರು ಬರುತ್ತಿದ್ದು, ಹೊರಗಡೆಯಿಂದ ಖರೀದಿಗೆ ಜನರು ಬಂದಿಲ್ಲ. ಇದರಿಂದ ಇರುವ ಸರಕಿನಲ್ಲಿಯೇ ಮಾರಾಟ ಮಾಡಲಾಗುತ್ತಿದೆ. -ಅಬ್ದುಲ್‌ರೆಹಮಾನ್ ಲಿಂಬುವಾಲೆ, ಸಿಡಿಮದ್ದು ಮಾರಾಟಗಾರರು.
ಪ್ರತಿ ವರ್ಷ ಜಿಲ್ಲಾಡಳಿತದಿಂದ ನೆಹರು ಮೈದಾನದಲ್ಲಿ ಸಿಡಿಮದ್ದು ಮಾರಾಟಕ್ಕೆ ಅವಕಾಶ ನೀಡುತ್ತಿದ್ದರು. ಆದರೆ ಈ ವರ್ಷ ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಅವಕಾಶ ನೀಡಿಲ್ಲ. ಇದಲ್ಲದೇ ಜನರು ಕೂಡಾ ಸಿಡಿಮದ್ದು ಖರೀದಿಸಲು ಬರುತ್ತಿಲ್ಲ. ಬಂದರೂ ಕೂಡಾ ಅಲ್ಪ ಪ್ರಮಾಣದಲ್ಲಿ ಸಿಡಿಮದ್ದು ಖರೀದಿಸುತ್ತಿದ್ದು, ಇದರಿಂದ 2020 ಸಂಪೂರ್ಣ ಹಾಳಾದ ವರ್ಷ ಎಂದರೂ ತಪ್ಪಾಗಲಾರದು. –ವಿಮಲ ತಾಳಿಕೋಟಿ, ಸಿಡಿಮದ್ದು ಮಾರಾಟಗಾರರು.
–ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.