ಕ್ವಾರಂಟೈನ್ ಮುಗಿಸಿ ಅಭ್ಯಾಸಕ್ಕಿಳಿದ ಪಂಜಾಬ್, ರಾಜಸ್ಥಾನ್ ಕ್ರಿಕೆಟಿಗರು
Team Udayavani, Aug 26, 2020, 6:40 PM IST
ದುಬಾೖ: ಕಳೆದ ವಾರವೇ ಯುಎಇಗೆ ಬಂದಿಳಿದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ಕ್ರಿಕೆಟಿಗರು 6 ದಿನಗಳ ಕ್ವಾರಂಟೈನ್ ಮುಗಿಸಿ ಮೊದಲ ಸುತ್ತಿನ ಅಭ್ಯಾಸ ನಡೆಸಿದರು. ದುಬಾೖಯಲ್ಲಿರುವ ಇತ್ತಂಡಗಳ ಆಟಗಾರರು ಬುಧವಾರ ಸಂಜೆ ಐಸಿಸಿ ಗ್ರೌಂಡ್‌ನಲ್ಲಿ ದೈಹಿಕ ಕಸರತ್ತಿಗೆ ಸಂಬಂಧಿಸಿದ ವ್ಯಾಯಾಮ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಕ್ವಾರಂಟೈನ್ ಅವಧಿಯಲ್ಲಿ ಕ್ರಿಕೆಟಿಗರಿಗೆ, ತಂಡದ ಸಹಾಯಕ ಸಿಬಂದಿ ಮತ್ತು ಅಧಿಕಾರಿಗಳಿಗೆ 3 ಸುತ್ತಿನ ಕೋವಿಡ್-19 ಟೆಸ್ಟ್ ನಡೆಸಲಾಗಿತ್ತು. ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಈ 6 ದಿನಗಳ ಕಾಲ ಯಾವ ಕ್ರಿಕೆಟಿಗರೂ ತಮ್ಮ ಕೊಠಡಿಯಿಂದ ಹೊರಗೆ ಕಾಲಿಟ್ಟಿರಲಿಲ್ಲ.
ಮಿಲ್ಲರ್ ವಿಳಂಬ ಆಗಮನ
ಮಂಗಳವಾರವಷ್ಟೇ ಆಗಮಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಡೇವಿಡ್ ಮಿಲ್ಲರ್ ಮಾತ್ರ ಅಭ್ಯಾಸದಿಂದ ಹೊರಗುಳಿದರು. ಅವರು 6 ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರೈಸಬೇಕಿದೆ. ಕಳೆದ ವರ್ಷ ಪಂಜಾಬ್ ತಂಡದಲ್ಲಿದ್ದ ಮಿಲ್ಲರ್ ಈ ಬಾರಿ ರಾಜಸ್ಥಾನ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತೋರ್ವ ಕ್ರಿಕೆಟಿಗ, ಪಂಜಾಬ್ ತಂಡದ ಸದಸ್ಯ ಹಾರ್ಡಸ್ ವಿಲ್‌ಜೊನ್ ಕೂಡ 6 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ.
ಆರ್‌ಸಿಬಿ, ಮುಂಬೈ ಮತ್ತು ಚೆನ್ನೈ ಕ್ರಿಕೆಟಿಗರ ಕ್ವಾರಂಟೈನ್ ಅವಧಿ ಗುರುವಾರಕ್ಕೆ ಕೊನೆಗೊಳ್ಳಲಿದ್ದು, ಅನಂತರ ಅಭ್ಯಾಸಕ್ಕೆ ಇಳಿಯಲಿದ್ದಾರೆ. ಈ ತಂಡಗಳ ಆಟಗಾರರು ಶುಕ್ರವಾರ ಯುಎಇಗೆ ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.