ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್; ಸೆರೆನಾಗೆ ಅಚ್ಚರಿಯ ಸೋಲುಣಿಸಿದ ಸಕ್ಕರಿ
Team Udayavani, Aug 26, 2020, 7:32 PM IST
ನ್ಯೂಯಾರ್ಕ್: “ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್’ ಟೆನಿಸ್ ಪಂದ್ಯಾವಳಿಯಲ್ಲಿ ಆತಿಥೇಯ ದೇಶದ ಸೆರೆನಾ ವಿಲಿಯಮ್ಸ್ ಆಟ ಮುಗಿದಿದೆ. ಮಂಗಳವಾರ ರಾತ್ರಿ ನಡೆದ 16ರ ಸುತ್ತಿನ ಸ್ಪರ್ಧೆಯಲ್ಲಿ ಅವರನ್ನು ಗ್ರೀಸ್ನ ಮರಿಯಾ ಸಕ್ಕರಿ 5-7, 7-6 (7-5), 6-1 ಅಂತರದಿಂದ ಮಣಿಸಿ ಅಚ್ಚರಿಯ ಫಲಿತಾಂಶ ದಾಖಲಿಸಿದರು. ಇದರಿಂದ ಸೆರೆನಾ ಅವರ ಯುಎಸ್ ಓಪನ್ ತಯಾರಿಗೆ ತುಸು ಹಿನ್ನಡೆಯಾಗಿದೆ.
ಕ್ವಾರ್ಟರ್ ಫೈನಲ್ನಲ್ಲಿ ಮರಿಯಾ ಸಕ್ಕರಿ ಅಮೆರಿಕದ ಜೊಹಾನಾ ಕೊಂಟಾ ಅವರನ್ನು ಎದುರಿಸಲಿದ್ದಾರೆ. ಉಳಿದ ಪಂದ್ಯಗಳಲ್ಲಿ ನವೋಮಿ ಒಸಾಕಾ-ಅನೆಟ್ ಕೊಂಟಾವೀಟ್; ವಿಕ್ಟೋರಿಯಾ ಅಜರೆಂಕಾ-ಓನ್ಸ್ ಜಾಬರ್; ಜೆಸ್ಸಿಕಾ ಪೆಗುಲಾ-ಎಲಿಸ್ ಮಾರ್ಟೆನ್ಸ್ ಮುಖಾಮುಖಿ ಆಗುವರು.
ಜೊಕೋ ಓಟ, ಮರ್ರೆ ಮನೆಗೆ
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆ್ಯಂಡಿ ಮರ್ರೆ ಪರಾಭವಗೊಂಡಿದ್ದಾರೆ. ಅಮೆರಿಕದ ಶ್ರೇಯಾಂಕ ರಹಿತ ಆಟಗಾರ ಟೆನ್ನಿಸ್ ಸ್ಯಾಂಡ್ಗ್ರೆನ್ ಅವರನ್ನು ಜೊಕೋವಿಕ್ 6-2, 6-4 ಅಂತರದಿಂದ ಮಣಿಸಿದರು. ಇದರೊಂದಿಗೆ 2020ರಲ್ಲಿ ಜೊಕೋ 20-0 ಅಜೇಯ ದಾಖಲೆ ಬರೆದಂತಾಯಿತು. ಅವರ ಮುಂದಿನ ಎದುರಾಳಿ ಜರ್ಮನಿಯ ಜಾನ್ ಲೆನಾರ್ಡ್ ಸ್ಟಫ್. ಬೆಲ್ಜಿಯಂನ ಡೇವಿಡ್ ಗೊಫಿನ್ ವಿರುದ್ಧ ಅವರು 6-4, 3-6, 6-4ರಿಂದ ಗೆದ್ದು ಬಂದರು.
ಇನ್ನೊಂದು ಕ್ವಾರ್ಟರ್ ಫೈನಲ್ ಹಣಾಹಣಿ ಹಾಲಿ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೇವ್ ಮತ್ತು ರಾಬರ್ಟೊ ಬಟಿಸ್ಟ ಅಗುಟ್ ನಡುವೆ ಸಾಗಲಿದೆ. 6 ಅಡಿ, 11 ಇಂಚು ಎತ್ತರ ಅಮೆರಿಕದ ಲಂಬೂ ಟೆನಿಸಿಗ ರೀಲಿ ಒಪೆಲ್ಕ ಮತ್ತು ಗ್ರೀಸ್ನ ಸ್ಟೆಫನಸ್ ಸಿಸಿಪಸ್ ಮತ್ತೂಂದು ಕ್ವಾರ್ಟರ್ ಫೈನಲ್ನಲ್ಲಿ ಎದುರಾಗಲಿದ್ದಾರೆ.
ಆ್ಯಂಡಿ ಮರ್ರೆ ಕೆನಡಾದ ಮಿಲೋಸ್ ರಾನಿಕ್ ಅವರಿಗೆ 6-2, 6-2ರ ಸುಲಭದ ತುತ್ತಾದರು. ರಾನಿಕ್ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಸರ್ಬಿಯಾದ ಫಿಲಿಪ್ ಕ್ರಾಜಿನೋವಿಕ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.