ಟ್ವೀಟರ್ ನಲ್ಲಿ ಟ್ರೆಂಡಿಂಗ್-ರಿಯಾ ಅಸಲಿ ಮುಖವಾಡ ಬಯಲು? ಸಿಬಿಐ ಕೈಯಲ್ಲಿ ಸುಶಾಂತ್ ಕೇಸ್

ಎಲ್ಲರೂ ನನ್ನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಆರೋಪ ಹೊರಿಸಿರುವುದಾಗಿ” ರಿಯಾ ದೂರಿದ್ದಾರೆ.

Team Udayavani, Aug 28, 2020, 1:45 PM IST

ಟ್ವೀಟರ್ ನಲ್ಲಿ ಟ್ರೆಂಡಿಂಗ್-ರಿಯಾ ಅಸಲಿ ಮುಖವಾಡ ಬಯಲು? ಸಿಬಿಐ ಕೈಯಲ್ಲಿ ಸುಶಾಂತ್ ಕೇಸ್

ಮುಂಬೈ/ನವದೆಹಲಿ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡ ಬಳಿಕ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಏತನ್ಮಧ್ಯೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಟಿವಿ ವಾಹಿನಿಗಳಿಗೆ ನೀಡಿದ್ದ ಸಂದರ್ಶನದಲ್ಲಿ ಹಲವಾರು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ರಿಯಾ ನಿಜವಾದ ಮುಖವಾಡ ಬಯಲಿಗೆ ಎಂಬ ಹ್ಯಾಶ್ ಟ್ಯಾಗ್ ಟ್ವೀಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

“ನಾನು ಅವರ (ಕೆಕೆ ಸಿಂಗ್) ಮಗನನ್ನು ತುಂಬಾ ಪ್ರೀತಿಸುತ್ತಿದ್ದೇನೆ. ಅಷ್ಟೇ ಅಲ್ಲ ನಾನು, ಸುಶಾಂತ್ ಪತಿ, ಪತ್ನಿಯಂತೆ ಜೀವಿಸಿದ್ದೇವು. ಆದರೆ ಸುಶಾಂತ್ ಸಾವಿನಿಂದ ನನಗೆ ತುಂಬಾ ನೋವಾಗಿತ್ತು. ಆದರೆ ಎಲ್ಲರೂ ನನ್ನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಆರೋಪ ಹೊರಿಸಿರುವುದಾಗಿ” ರಿಯಾ ದೂರಿದ್ದಾರೆ.

ನಾನು ಬಂಧನಕ್ಕೊಳಗಾಗುವ ಬಗ್ಗೆ ಚಿಂತಿಸುತ್ತಿಲ್ಲ. ನಾನು ಬಂಧನಕ್ಕೊಳಗಾಗುವ ಯಾವುದೇ ತಪ್ಪನ್ನು ಎಸಗಿಲ್ಲ. ನನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ. ಆಕೆ ಮಾನಸಿಕ ಒತ್ತಡಕ್ಕೊಳಗಾಗಿದ್ದಾರೆ. ನನ್ನ ತಂದೆಗೂ ಕಿರುಕುಳಕ್ಕೊಳಗಾಗಿದ್ದಾರೆ. ಮಾಧ್ಯಮಗಳಲ್ಲಿ ನನ್ನ ಬಗ್ಗೆ ಕಪೋಲ ಕಲ್ಪಿತ ಸುದ್ದಿಗಳು ಬಂದಿದ್ದವು. ಆದರೆ ನಾನು ಮತ್ತಷ್ಟು ಗಟ್ಟಿಯಾಗುತ್ತಾ ಹೋದೆ. ಯಾಕೆಂದರೆ ನಾನು ಸತ್ಯ ಹೇಳುತ್ತಿದ್ದ ಕಾರಣಕ್ಕಾಗಿ ಬದುಕಲೇಬೇಕಾಗಿದೆ.

ನಾನು ನನ್ನ ಇಡೀ ಜೀವನದಲ್ಲಿ ಯಾವುದೇ ಡ್ರಗ್ ಡೀಲರ್ ಜತೆ ಮಾತನಾಡಿಲ್ಲ. ಅಲ್ಲದೇ ಡ್ರಗ್ ಸೇವನೆಯೂ ಮಾಡಿಲ್ಲ. ನಾನು ರಕ್ತಪರೀಕ್ಷೆ ಮಾಡಿಸಿಕೊಳ್ಳಲು ಸದಾ ಸಿದ್ಧ. ಸುಶಾಂತ್ ಮಾರಿಜುವಾನಾ ಸೇವಿಸುತ್ತಿದ್ದು, ಆತನನ್ನು ಮಾದಕ ದ್ರವ್ಯ ಸೇವನೆಯಿಂದ ಹೊರತರಲು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ನನ್ನ ಕುಟುಂಬದ ಮಾನಸಿಕ ಆರೋಗ್ಯ ಹಾಳಾಗಿ ಹೋಗಿದೆ. ನನ್ನ ವಿರುದ್ಧದ ಆರೋಪಗಳೆಲ್ಲವೂ ಆಧಾರ ರಹಿತವಾದದ್ದು. ನಾನು ಸುಶಾಂತ್ ಸಿಂಗ್ ಅವರಿಂದ ಒಂದೇ ಒಂದು ರೂಪಾಯಿ ಹಣ ಪಡೆದಿಲ್ಲ. ಈ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಸುಶಾಂತ್ ಬ್ಯಾಂಕ್ ಖಾತೆ ದಾಖಲೆ ಪಬ್ಲಿಕ್ ಡೊಮೈನ್ ನಲ್ಲಿದೆ. ನಾವೆಲ್ಲ ಈ ಕಂಪನಿಯ ಸಮಾನ ಪಾಲುದಾರರು ಎಂದು ರಿಯಾ ವಿವರಿಸಿದ್ದಾರೆ.

ಜಾಹೀರಾತು ಚಿತ್ರೀಕರಣವೊಂದಕ್ಕೆ ಪ್ಯಾರಿಸ್ ಗೆ ನಾನು ಹೊರಟ ವಿಷಯ ತಿಳಿದ ಸುಶಾಂತ್ ತಾನೂ ಕೂಡಾ ಬರುವುದಾಗಿ ತಿಳಿಸಿದ್ದರು. ಆ ನಂತರ ನನ್ನ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ರದ್ದುಪಡಿಸಿ, ಫಸ್ಟ್ ಕ್ಲಾಸ್ ಟಿಕೆಟ್ ಕಾಯ್ದಿರಿಸಿದ್ದರು. ನಮ್ಮ ವಿದೇಶ ಪ್ರಯಾಣಕ್ಕೂ ಮುನ್ನ ಸುಶಾಂತ್ ವೈದ್ಯರ ಸಲಹೆ ಇಲ್ಲದೆ ಮೊಡಾಫಿನಿಲ್ ಮಾತ್ರೆಯನ್ನು ಸೇವಿಸಿದ್ದರು. ಬಳಿಕ ನಾವು ಪ್ಯಾರಿಸ್ ಗೆ ಹೋದ ಮೇಲೆ ಸುಮಾರು ಮೂರು ದಿನಗಳ ಕಾಲ ಸುಶಾಂತ್ ಕೋಣೆಯಿಂದ ಹೊರಬಂದಿರಲಿಲ್ಲವಾಗಿತ್ತು. ಸ್ವಿಟ್ಜರ್ ಲ್ಯಾಂಡ್ ನಲ್ಲಿ ಅವರು ಖುಷಿಯಾಗಿದ್ದರು. ಇಟಲಿಯಲ್ಲಿ ಅವರ ಆರೋಗ್ಯ ಹದಗೆಡುತ್ತಾ ಹೋಗಿತ್ತು. ಹೀಗೆ ನಾವು ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗಿದ್ದೇವು ಎಂದು ವಿವರಿಸಿದ್ದಾರೆ.

ನಿಜಕ್ಕೂ ಏನಾಯ್ತು ಎಂಬುದು ನನಗೆ ತಿಳಿಯಬೇಕು. ಘಟನೆ ನಡೆಯುವ ಒಂದು ವಾರದ ಮುನ್ನ ನಾನು ಹೊರಬಂದಿದ್ದೆ. ನಾನು ಇಂತಹ ಕೃತ್ಯ ಮಾಡಿಕೊಳ್ಳುವವನಲ್ಲ ಎಂದು ಸುಶಾಂತ್ ನನಗೆ ತಿಳಿಸಿದ್ದರು. ಬಿಹಾರ ಪೊಲೀಸರು ಎಫ್ ಐಆರ್ ದಾಖಲಿಸುವ ಮುನ್ನವೇ ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಮನವಿ ಮಾಡಿಕೊಂಡಿದ್ದೆ. ಇ.ಡಿ, ಮುಂಬೈ ಪೊಲೀಸರು ಈಗ ಸಿಬಿಐ ತನಿಖೆಯಿಂದ ನಾನು ಹೈರಾಣಗಿದ್ದೇನೆ. ನನಗೆ ಸತ್ಯ ಹೊರಬರಬೇಕಾಗಿದೆ, ಆದರೆ ನನ್ನ ಟಾರ್ಗೆಟ್ ಮಾಡಬೇಡಿ. ಯಾಕೆ ಯಾರೂ ಸುಶಾಂತ್ ಸಹೋದರಿ ಬಗ್ಗೆ ಮಾತನಾಡುತ್ತಿಲ್ಲ? ಕಳೆದ ವಾರ ಆತನ ಜತೆಯಲ್ಲಿ ಇದ್ದವರು ಯಾರು? ಒಂದು ವೇಳೆ ಸುಶಾಂತ್ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಯಾಕೆ ಆತನನ್ನು ಬಿಟ್ಟು ಆಕೆ ಹೊರಟು ಹೋಗಿದ್ದು ಎಂದು ರಿಯಾ ಪ್ರಶ್ನಿಸಿದ್ದಾರೆ.

ಗುರುವಾರ ಸಿಬಿಐ ಅಧಿಕಾರಿಗಳು ರಿಯಾ ಸಹೋದರ ಶೋವಿಕ್ ಚಕ್ರವರ್ತಿಯನ್ನು 14 ಗಂಟೆಗಳ ಕಾಲ ವಿಚಾರಣೆಗೆ ಗುರಿಪಡಿಸಿದ್ದರು.  ರಿಯಾ ಮತ್ತು ಸುಶಾಂತ್ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದರು. ಆದರೆ ಸುಶಾಂತ್ ಸಿಂಗ್ ಜೂನ್ 14ರಂದು ಬಾಂದ್ರಾ ನಿವಾಸದಲ್ಲಿ ನೇಣಿಗೆ ಶರಣಾಗುವ ಮೊದಲು ಜೂನ್ 8ರಂದೇ ರಿಯಾ ಸುಶಾಂತ್ ಫ್ಲ್ಯಾಟ್ ನಿಂದ ಹೊರಬಿದ್ದಿರುವುದಾಗಿ ವರದಿ ತಿಳಿಸಿದೆ.

ರಿಯಾ ಮುಖವಾಡ ಬಯಲಿಗೆ!

ಸುಶಾಂತ್ ಸಿಂಗ್ ಪ್ರಕರಣದಲ್ಲಿ ಮೊದಲಿಗೆ ರಿಯಾ ಹಾಗೂ ಮಹೇಶ್ ಭಟ್ ಜತೆಗಿನ ವಾಟ್ಸಪ್ ಚಾಟ್ ಗಳನ್ನು ಮಾಧ್ಯಮಗಳು ಹೊರಹಾಕಿದ್ದವು. ನಂತರ ಸಿಬಿಐ ಪ್ರಕರಣ ಕೈಗೆತ್ತಿಕೊಂಡ ಬಳಿಕ “ಮಾದಕ” ಜಾಲ”ದ ಸುಳಿವು ಸಿಕ್ಕಿದ್ದು, ಇಂಡಿಯಾ ಟುಡೇ ಡ್ರಗ್ಸ್ ಗೆ ಸಂಬಂಧಿಸಿದ ಚಾಟ್ಸ್ ಅನ್ನು ಬಹಿರಂಗಗೊಳಿಸಿತ್ತು. ಮಾಧ್ಯಮಗಳಲ್ಲಿ ಸುಶಾಂತ್ ಪ್ರಕರಣದ ಹಿಂದೆ ಮಾದಕ ದ್ರವ್ಯದ ನಂಟು ಹೊಂದಿರುವ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆಯೇ ರಿಯಾ ಚಕ್ರವರ್ತಿ ಪ್ರಮುಖ ಚಾನೆಲ್ ಗಳಿಗೆ ಸಂದರ್ಶನ ನೀಡಿದ್ದಳು!

ಅಷ್ಟೇ ಅಲ್ಲ ಸುಶಾಂತ್ ಡ್ರಗ್ ಅಡಿಕ್ಟ್ ಎಂಬ ವಿಷಯದ ಬಗ್ಗೆ 65 ದಿನಗಳವರೆಗೆ ಮುಂಬೈ ಪೊಲೀಸರು ಯಾಕೆ ಮಾಹಿತಿ ಹೊರಹಾಕಿಲ್ಲ? ರಿಯಾ ಕೂಡಾ ಎಲ್ಲಿಯೂ ಮಾದಕ ದ್ರವ್ಯ ಚಟದ ಬಗ್ಗೆಯಾಗಲಿ, ಆತನಿಗಿರುವ ಚಟವನ್ನು ಬಿಡಿಸಲು ಪ್ರಯತ್ನಪಟ್ಟಿದ್ದೆ ಎಂಬ ಮಾಹಿತಿ ಯಾವ ತನಿಖಾ ಏಜೆನ್ಸಿ ಮುಂದೆ ಬಾಯ್ಬಿಟ್ಟಿಲ್ಲವಾಗಿತ್ತು. ಈಗ ಸಾಮಾಜಿಕ ಜಾಲತಾಣದಲ್ಲಿ ರಿಯಾ ಮುಖವಾಡ ಬಯಲಾದ ಬಗ್ಗೆ ಹ್ಯಾಶ್ ಟ್ಯಾಗ್ ಮೂಲಕ ಟ್ರೆಂಡಿಂಗ್ ಮಾಡಿರುವುದಾಗಿ ವರದಿ ತಿಳಿಸಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.