ಕಾಮಗಾರಿ ಲೋಪವಾದ್ರೆ ಸಹಿಸಲ್ಲ
Team Udayavani, Aug 28, 2020, 4:27 PM IST
ಪಾತಪಾಳ್ಯ: ಬಾಗೇಪಲ್ಲಿ ಕ್ಷೇತ್ರದ ಮತದಾರರು ನನಗೆ ನೀಡಿರುವ ಅಶೀರ್ವಾದ ಹಾಗೂ ಜನತೆಯ ಪ್ರೀತಿ ವಿಶ್ವಾಸ ಎಂದಿಗೂ ಮರೆಯುವುದಿಲ್ಲ. ಸರ್ಕಾರದ ಅನುದಾನದಲ್ಲಿ ಯಾವುದೇ ಕಾಮಗಾರಿಯಲ್ಲಿ ಗುಣ ಮಟ್ಟಕ್ಕೆ ಲೋಪವಾದರೆ ಸಹಿಸುವುದಿಲ್ಲ ಎಂದು ಶಾಸಕ ಎಸ್.ಎನ್. ಸುಬ್ಟಾರೆಡ್ಡಿ ತಿಳಿಸಿದರು.
ಹೋಬಳಿಯ ಚಾಕವೇಲ್‌ನಲ್ಲಿ 2.2 ಕೋಟಿ ರೂ. ವೆಚ್ಚದ 5740 ಚದರಡಿ ಸ್ತೀರ್ಣದಲ್ಲಿ 18 ಕೊಠಡಿಗಳುಳ್ಳ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರ ವೇರಿಸಿ ಮಾತನಾಡಿದರು.
ಚಾಕವೇಲ್‌ನಲ್ಲಿ ಪ್ರಾಥಮಿಕ ಆರೋಗ್ಯವಿದ್ದು, ಅದನ್ನು ಮೆಲ್ದರ್ಜೆಗೆ ಏರಿಸಬೇಕೆಂದು ಗ್ರಾಮದ ಹಿರಿಯ ಮುಖಂಡರು, ಸ್ಥಳೀಯರು, ಸುತ್ತಮುತ್ತಲ ಗ್ರಾಮಸ್ಥರ ಬೇಡಿಕೆಯಾಗಿತ್ತು. ಅವರೆಲ್ಲರ ಆಸೆ ಸರ್ಕಾರ ಇಂದು ನೆರವೇರಿಸಿದೆ. ಇದರಿಂದ ದೂರದ ಊರು ಗಳಿಗೆ ಆರೋಗ್ಯ ತಪಾಸಣೆಗೆ ಹೋಗುವುದು ತಪ್ಪಿತ್ತದೆ ಎಂದು ಹೇಳಿದರು.
ಪುಲಗಲ್, ರಾಶ್ಚೆರವು, ಚಾಕವೇಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಬರುವ ಹಳ್ಳಿಗಳ ಜನರಿಗೆ ಅನುಕೂಲವಾಗುತ್ತದೆ. ನಾಗರಿಕರು ಅವಕಾಶ ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ತಹಶೀಲ್ದಾರ್ ನಾಗರಾಜ್, ಗ್ರಾ.ಪಂ. ಆಡಳಿತಾಧಿ ಕಾರಿ ನರಸಿಂಹಾರೆಡ್ಡಿ, ಪಿಡಿಒ ಅಬೂಬಕರ್ ಸಿದ್ದಿಕ್, ಟಿ.ಎಚ್.ಒ ಡಾ.ಸತ್ಯನಾರಾಯಣರೆಡ್ಡಿ, ವೈದ್ಯಾಧಿಕಾರಿ ಡಾ.ಕೆ.ಎನ್.ರಾಘವೇಂದ್ರ, ಆರ್.ಐ.ಬಿ.ಎಚ್ ಚಂದ್ರ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ವಿ.ಭಾಸ್ಕರರೆಡ್ಡಿ, ಮುಖಂಡರಾದ ಕೆ.ವಿ. ಶೇಖರರೆಡ್ಡಿ, ಮಂಜುನಾಥರೆಡ್ಡಿ, ಗ್ರಾಮದ ಹಿರಿಯ ಮುಖಂಡರು, ಸ್ಥಳೀಯರು ಮತ್ತಿತರರಿದ್ದರು.
…………………………………………………………………………………………………………………………………………………
ಕಲಿಕೆಗೆ ಕೋವಿಡ್ ಅಡ್ಡಿ ಆಗದಿರಲಿ : ಕೋಲಾರ: ಕೋವಿಡ್ ಆತಂಕದಲ್ಲಿ ಎದುರಾಗಿರವ ಶೈಕ್ಷಣಿಕ ಹಿನ್ನೆಡೆಗೆ ಅವಕಾಶ ನೀಡದೇ ಕಲಿಕೆಗೆ ಅನುಕೂಲವಾಗುವ ರೀತಿಯಲ್ಲಿ ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಶ್ನೆಕೋಠಿ ತಯಾರಿಸಿ ಎಂದು ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ ಸಲಹೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ವತಿ ಯಿಂದ ತಾಲೂಕಿನ ಕೆಂಬೋಡಿಯ ಜನತಾಪ್ರೌಢಶಾಲೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಎಸ್ಸೆಸ್ಸೆಲ್ಸಿ ಪಠ್ಯವಿಷಯದ ವಿಷಯವಾರು ಮತ್ತುಅಧ್ಯಾಯವಾರು ಪ್ರಶ್ನೆಕೋಠಿ ತಯಾರಿಕಾ ಕಾರ್ಯಾಗಾರ ಉದ್ಘಾಟಿಸಿ, ಸಂಪ ನ್ಮೂಲ ಶಿಕ್ಷಕರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕೋವಿಡ್ ಸಂಕಷ್ಟದಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದು, ಅದೇ ಮಾದರಿಯಲ್ಲಿ ಇಂದು ವಿದ್ಯಾಗಮ ಯೋಜನೆ ಮೂಲಕ ಮಕ್ಕಳಲ್ಲಿನಿರಂತರ ಕಲಿಕೆಗೆ ಮಾರ್ಗತೋರಬೇಕು ಎಂದರು.
ಪ್ರಶ್ನೆಪತ್ರಿಕೆ ತಯಾರಿಗೆ ಮಾರ್ಗ ದರ್ಶನ: ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಸಂಪ ನ್ಮೂಲ ಶಿಕ್ಷಕರಿಗೆ ಪ್ರಶ್ನೆಕೋಠಿ ತಯಾರಿಕೆಕುರಿತು ಮಾರ್ಗದರ್ಶನ ನೀಡಿ, ಎಸ್ಸೆಸ್ಸೆಲ್ಸಿ ಬೋರ್ಡ್ ಪ್ರಶ್ನೆಪತ್ರಿಕೆ ಮಾದರಿಯಲ್ಲೇ ಪ್ರಶ್ನೆಕೋಠಿ ಸಿದ್ಧಗೊಳಿಸಿ, ಮಕ್ಕಳ ಜ್ಞಾನ, ಕೌಶಲ್ಯ ಹಾಗೂ ಅನ್ವಯಿಕ ಪ್ರಶ್ನೆಗಳನ್ನು ಒಳಗೊಂಡಿರಬೇಕು ಎಂದರು.
ಕಾರ್ಯಾಗಾರದಲ್ಲಿ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಶಾಲಾವಾರು, ವಿಷಯವಾರು ಫಲಿತಾಂಶದ ಮಾಹಿತಿ ಪಡೆದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್, ವಿಷಯ ಪರಿವೀಕ್ಷಕ ಗಾಯತ್ರಿ, ಕೃಷ್ಣಪ್ಪ, ಶಶಿವಧನ, ಬಿ.ವೆಂಕ ಟೇಶಪ್ಪ, ಇಸಿಒಗಳಾದ ಮಹಮದ್ ಸಿರಾಜುದ್ದೀನ್, ಅನ್ವರುಲ್ಲಾ ಹಸನ್, ಜನತಾ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ. ಎಸ್.ರವಿ,ಮಲ್ಲಿಕಾರ್ಜುನ್, ರಾಜಣ್ಣ, ಸಂಪನ್ಮೂಲ ಶಿಕ್ಷಕರಾದ ಬಿ.ಕೆ.ನಾಗರಾಜ್, ಬಿ.ಎ.ಕವಿತಾ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.