ಲಿಡಿಯನ್‌ ನಾದಸ್ವರಂ ‘ದಿ ವರ್ಲ್ಡ್ಸ್‌ ಬೆಸ್ಟ್‌ ʼ


Team Udayavani, Aug 28, 2020, 6:24 PM IST

Lydian, Nada

ಸತತ ಪ್ರಯತ್ನ, ಕಠಿನ ಪರಿಶ್ರಮಕ್ಕೆ ಸೋಲಾದದ್ದು ತೀರಾ ವಿರಳ.

ಸಾಧನೆ ಮಾಡಬೇಕೆಂಬ ಹಸಿವಿರುವ ವ್ಯಕ್ತಿ ತನ್ನ ಸಾಧನೆಗೆ ಅವಕಾಶಗಳಿಗಾಗಿ, ವಯಸ್ಸಿಗಾಗಿ ಕಾಯುವ ಆವಶ್ಯಕತೆ ಇಲ್ಲ. ಯಾಕೆಂದರೆ ಸಾಧನೆಗೆ ಇದಾವುದು ಮುಖ್ಯವಲ್ಲ.

ಗುರಿಯಡೆಗೆ ಚಿತ್ತ ನೆಟ್ಟು ಹಗಲಿರುಳು ಎನ್ನದೇ ಶ್ರಮಿಸಿದರೆ ಯಶಸ್ಸು, ಗೌರವ ಸನ್ಮಾನಗಳು ಹುಡುಕಿಕೊಂಡು ಬರುತ್ತವೆ ಎನ್ನುವುದಕ್ಕೆ 13ರ ಪೋರ ಲಿಡಿಯನ್‌ ನಾದಸ್ವರಂ ಒಂದು ಸ್ಪಷ್ಟ ನಿದರ್ಶನ.

ದಿನದ ಬಹುತೇಕ ಸಮಯವನ್ನು ಅಂರ್ಜಾಲ, ಮೋಬೈಲ್‌ನಲ್ಲೆ ಹಾಳುಮಾಡುವ ಈ ಜಮಾನದಲ್ಲೂ ಈ ಪೋರ ಪ್ರತಿದಿನ 6 ತಾಸು ಪಿಯಾನೋ ನುಡಿಸುವುದಕ್ಕೆಂದೇ ಮೀಸಲಿಡುತ್ತಾನೆ ಎಂದರೆ ನೀವು ನಂಬಲೇಬೇಕು.

ತನ್ನ ಈ ಸಮರ್ಪಣಾಭಾವದಿಂದ ಲಿಡಿಯನ್‌ ನಾದಸ್ವರಂ ಅಮೇರಿಕದ ದೋಡ್ಡ ರಿಯಾಲಿಟಿ ಶೋ ʼದಿ ವರ್ಲ್ಡ್ಸ್‌ ಬೆಸ್ಟ್‌’ (the world’s best) ನೀಡುವ ಪ್ರಶಸ್ತಿ ಪಡೆದಿದಾನೆ.

ಅಷ್ಟಕ್ಕೂ ಈತ ಪಡೆದಿರುವದು ಸಾಮಾನ್ಯ ಪ್ರಶಸ್ತಿ ಅಲ್ಲ ಈ ಪ್ರಶಸ್ತಿ ಮೊತ್ತ 1 ಮಿ. ಯುಎಸ್‌ ಡಾಲರ್‌ (7,46,79,450 ಭಾರತೀಯ ರೂ. ಗಳಲ್ಲಿ).

ಶೋ ಪ್ರವೇಶಿಸಿದಾಗ ನೀನು ಯಾವ ನಿರೀಕ್ಷ ಇಟ್ಟುಕೊಂಡು ಬಂದಿರುವೆ ಎಂಬ ತೀಪುಗಾರರರ ಮಾತಿಗೆ ಲಿಡಿಯನ್‌ ಉತ್ತರ ಹೀಗಿತ್ತು. ನಾನು ಇಲ್ಲಿಗೆ ಬರುವ ಮುನ್ನ ಫ್ಲೈಟ್‌ ಆಪ್‌ ಬಂಬಲ್ಬೀ ಅಭ್ಯಸಿಸಿದ್ದೇನೆ ಎಂದಿದ್ದ. ಅಸ್ತವ್ಯಸ್ಥವಾದ‌ ಮತ್ತು ವೇಗವಾಗಿ ಬದಲಾಗುವ ರಾಗ ಸಂಯೋಜನೆ ಅತ್ಯಂತ ಕಠಿನವಾದದ್ದು ಎಂದು ಬಂಬಲ್ಬೀ ಸಯೋಜನೆಕ ರಿಮಿಸ್ಕ್‌ ಕೊರ್ಸ್‌ಕೋವ್‌ ಅವರೇ ಒಮ್ಮೆ ಹೇಳಿಕೊಂಡಿದ್ದರು.

ಮೊದಲ ಸುತ್ತಿನಲ್ಲಿ ಬಂಬಲ್ಬೀ ಸಂಯೋಜನೆಯನ್ನು 160, 280 ಮತ್ತು 325 ಬಿಪಿಎಂ ಎಂಬ ಮೂರೂ ವೇಗದಲ್ಲೂ ನುಡಿಸಿ ಪ್ರೇಕ್ಷಕರೂ ಮತ್ತು ತೀರ್ಪುಗಾರರಾದ ಫೇತ್‌ ಹಿಲ್, ರುಪಾಲ್‌ ಚಾಲ್ಸ್‌ ಮತ್ತು ಡ್ರೂ ಬ್ಯಾರಿರ್ಮರ್‌ ಅವರಲ್ಲಿ ದಿಗ್ಭ್ರಮೆ ಮೂಡಿಸಿದ್ದ.

ಶೋದಲ್ಲಿ ನಡೆದ ಸ್ಪರ್ಧೆಯಲ್ಲಿ ಲಿಡಿಯನ್‌ ತನ್ನ ಪ್ರತಿಸ್ಪರ್ಧ ದ.ಕೊರಿಯದ  ʼಪ್ಲೆ„ಯಿಂಗ್‌ ಟೆಕ್ವಂಡೋ ಮಾಸ್ಟರ್‌’ ಕುಕ್ಕಿವೊನ್‌ ಅವರನ್ನು ಹಿಂದಿಕ್ಕೆ, 84 ಪಾಂಯಿಂಟ್ಸ್‌ ಪಡೆದು ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಈ ಮೂಲಕ ಜಗತ್ತಿನೆದುರು ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಬ್ಯಾಟಲ್‌ ರೌಂಡ್‌ ಎಂದೇ ಕರೆಯುವ ಎರಡನೇ ಸುತ್ತಿನಲ್ಲಿ ಲಿಡಿಯನ್‌ “ಟರ್ಕಿಶ್‌ ಮಾರ್ಚ್‌’ ನುಡಿಸಿ ತನ್ನ ಅಸಾಧಾರಣ ಪ್ರತಿಭೆಯ ಮೂಲಕ ನೆರದಿದ್ದವರನ್ನು ಬೆಕ್ಕಸ ಬೆರಗಾಗಿಸಿದ್ದ.

ಲಿಡಿಯನ್‌ ಸಂಗೀತ ಮಾಂತ್ರಿಕ ಎ.ಆರ್‌. ರೆಹಮಾನ್‌ ಅವರ ಕೆ.ಎಮ್‌. ಮ್ಯೂಸಿಕ್‌ ಕನ್ಸರ್‌ವೆಂಟ್ರಿಯಲ್ಲಿ ಪೂರ್ಣ ಪ್ರಮಾಣದ ಸ್ಕಾಲರ್‌ಶಿಪ್‌ನೊಂದಿಗೆ ಸಂಗೀತಾಭ್ಯಾಸ ನಡೆಸುತ್ತಿದ್ದಾನೆ. ಈ ಸಾಧನೆ ಬಗ್ಗೆ ತಿಳಿದ ಎ.ಆರ್‌. ರೆಹಮಾನ್‌ ಅವರು ಚೆನ್ನೈಯ ಸಾಲಿಗ್ರಾಮಂನಲ್ಲಿರುವ ಲಿಡಿಯನ್‌ ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ.

ಲಿಡಿಯನ್‌ ತಂದೆ ಸ್ವತಃ ಸಂಗೀತಗಾರರಾಗಿದ್ದು ಮಗನ ಈ ಸಾಧನೆಗೆ ಬೆನ್ನುಲುಬಾಗಿದ್ದಾರೆ. ಹೆಚ್ಚಿನ ಸಮಯವನ್ನು ಯೂಟ್ಯೂಬ್‌ನಲ್ಲಿ ಸಂಗೀತ ಕೇಳುವುದಕ್ಕೆ ಮೀಸಲಿಡುವ ಈತನಿಗೆ ಟಿವಿ ವೀಕ್ಷಣೆಗಿಂತ ಯೂಟ್ಯೂಬ್‌ನಲ್ಲಿ ಹಾಲಿವುಡ್‌ ಚಿತ್ರಗಳ ವೀಕ್ಷಣೆಯೇ ಹೆಚ್ಚು ಇಷ್ಟವಂತೆ. ಆಗಾಗ ಹೊಸ ಬಗೆಯ ಸಂಗೀತ ಸಂಯೋಜನೆಯ ಪ್ರಯೋಗಕ್ಕೆ ತನ್ನು ಒಡ್ಡಿಕೊಳ್ಳುತ್ತಾನೆ. ಇತ್ತೀಚೆಗೆ ಹಾಲಿವುಡ್‌ ಚಿತ್ರವೊಂದನ್ನು ವೀಕ್ಷೀಸುವಾಗ ಅದರ ಸೌಂಡ್‌ ಮ್ಯೂಟ್‌ ಮಾಡಿ ನನ್ನದೇ ಸ್ವಂತ ಸಂಯೋಜನೆ ನೀಡಿದೆ. ತುಂಬ ಮಜವಾಗಿತ್ತು ಎಂದು ಲಿಡಿಯನ್‌ ಹೇಳಿಕೊಂಡಿದ್ದ.

ಸದ್ಯ ಸೌಂಡ್‌ ಮಿಕ್ಸಿಂಗ್‌, ತನ್ನದೇ ಸಂತ ಆಲ್ಬಂವೊಂದನ್ನು ಬಿಡುಗಡೆ ಮಾಡುವ ತಯಾರಿಯಲ್ಲಿ ತೊಡಗಿದ್ದಾನೆ. ಅಲ್ಲದೇ ಹಾಲಿವುಡ್‌ನ‌ಲ್ಲಿ ಸಂಗೀತ ಸಂಯೋಜಕನಾಗುವ ತನ್ನ ಕನಸನ್ನು ಸಾಕಾರಗೊಳಿಸುವತ್ತ ಹೆಜ್ಜೆ ಹಾಕುತ್ತಿದ್ದಾನೆ.

 ಶಿವಾನಂದ ಎಚ್‌. 

 

 

ಟಾಪ್ ನ್ಯೂಸ್

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

1

Pushpa 2: ಕಿಸಿಕ್‌ ಎಂದು ಕುಣಿದ ಶ್ರೀಲೀಲಾ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.