ಸೋಂಕಿತರ ಪ್ರಮಾಣ 1.21 ಲಕ್ಷಕ್ಕೆ ಏರಿಕೆ
Team Udayavani, Aug 29, 2020, 12:59 PM IST
ಬೆಂಗಳೂರು: ನಗರದಲ್ಲಿ ಶುಕ್ರವಾರ 2,721 ಕೋವಿಡ್ ಸೋಂಕಿನ ಪ್ರಕರಣಗಳು ದೃಢ ಪಟ್ಟಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 1,21,449 ಕ್ಕೆ ಏರಿಕೆಯಾಗಿದೆ.
ಅಲ್ಲದೆ ಹೊಸದಾಗಿ 41 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದು ಈವರೆಗೂ 1,887,2 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಜತೆಗೆ 2,148 ಮಂದಿ ಚೇತರಿಸಿಕೊಂಡು ವಿವಿಧ ಆಸ್ಪತ್ರೆ ಗಳಿಂದ ಬಿಡುಗಡೆಯಾಗಿದ್ದು, ಒಟ್ಟಾರೆ 83,041ಕ್ಕೆ ಅಧಿಕಗೊಂಡಿದೆ. ಇದರ ಜತೆಗೆ ನಗರದಲ್ಲೀಗ 36,521 ಸಕ್ರಿಯ ಪ್ರಕರಣಗಳಿದ್ದು, ಇವರೆಲ್ಲರೂ ವಿವಿಧ ಆಸ್ಪತ್ರೆಗ ಳಲ್ಲಿ ಆರೈಕೆ ಮಾಡಿಕೊಳ್ಳು ತ್ತಿದ್ದಾರೆ. ಹಾಗೆಯೇ 312 ಮಂದಿ ತೀವ್ರ ನಿಗಾ ಘಟಕಗಳಿಗೆ ದಾಖಲಾಗಿ ದ್ದಾರೆ. ಹೊಸದಾಗಿ ಸಾವಿಗೀಡಾದವರಲ್ಲಿ 31ರಿಂದ 50 ವರ್ಷದೊಳಗಿನವರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಸಾವಿಗೀಡಾಗುವವರ ಸರಾಸರಿ ಶೇ.1.55ರಷ್ಟಿದೆ. ಬಿಡುಗಡೆ ಪ್ರಮಾಣ ಹೆಚ್ಚಳ: ನಗರದಲ್ಲಿ ಗುಣಮುಖರಾಗುವ ಪ್ರಮಾಣ ಶೇ. 68.13ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ರಾಜ ರಾಜೇಶ್ವರಿ ನಗರದಲ್ಲಿ ಶೇ.10, ಬೊಮ್ಮನಹಳ್ಳಿಯಲ್ಲಿ ಶೇ.16,ದಾಸರ ಹಳ್ಳಿಯಲ್ಲಿ ಶೇ.7 ದಕ್ಷಿಣದಲ್ಲಿ ಶೇ.17, ಮಹದೇವಪುರದಲ್ಲಿ ಶೇ.7 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ.
24,308 ಮಂದಿಗೆ ಪರೀಕ್ಷೆ: ನಗರದ ಲ್ಲೀಗ ಒಟ್ಟು ಪಾಸಿಟಿವ್ ರೇಟ್ ಶೇ.15.41 ರಷ್ಟು ಇದ್ದು, ಆಕ್ಟೀವ್ ರೇಟ್ ಶೇ.30.07 ರಷ್ಟಿದೆ. ಅಲ್ಲದೆ ನಿನ್ನೆ 24,308 ಜನರನ್ನು ಪರೀಕ್ಷೆ ಗೆಒಳಪಡಿ ಸಲಾಗಿದ್ದು ಇದುವರೆಗೂ 7,87,888 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಹಾಗೆಯೇ ಒಟ್ಟು 40,563 ಕಂಟೈ ನ್ಮೆಂಟ್ ವಲಯ ವಿದ್ದು ಇದರಲ್ಲಿ 15,723 ಸಕ್ರಿಯ ಕಂಟೈನ್ಮೆಂಟ್ ವಲಯಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ಹೊಸ ಸೇರ್ಪಡೆ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.