ಹೈಫೈ ಡ್ರಗ್ಸ್ ಜಾಲ…ಸ್ಯಾಂಡಲ್ ವುಡ್ ನಟ ಜಗ್ಗೇಶ್ ಸರಣಿ ಟ್ವೀಟ್ ಮೂಲಕ ಹೇಳಿದ್ದೇನು?
ಹೇಳದೆ ಕೇಳದೆ ಲಿಫ್ಟು ಬಳಸದೆ 12 ಮಹಡಿ ಇಳಿದು ಓಡಿದೆವು. ಇಂದಿಗೂ ನನಗೆ ಯಾರು ಕರೆ ಮಾಡದಂತೆ ಮೊಬೈಲ್ ವರ್ಜಿಸಿದೆ!
Team Udayavani, Aug 29, 2020, 6:10 PM IST
ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಡ್ರಗ್ಸ್ ಜಾಲ ತಳಕು ಹಾಕಿಕೊಂಡ ಬೆನ್ನಲ್ಲೇ ಸ್ಯಾಂಡಲ್ ವುಡ್ ನಲ್ಲಿಯೂ ಬಿಸಿ, ಬಿಸಿ ಚರ್ಚೆ ನಡೆಯತೊಡಗಿದೆ. ಏತನ್ಮಧ್ಯೆ ನವರಸ ನಾಯಕ ಜಗ್ಗೇಶ್ ಕೂಡಾ ಈ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯ ರಾಜಧಾನಿಯಲ್ಲಿನ ಡ್ರಗ್ಸ್ ಕರಾಳ ಮುಖದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅಲ್ಲದೇ ತಪ್ಪು ಮಾಡಿದವರನ್ನು ಬೆತ್ತಲೆ ಮಾಡಿ, ಆಗಲಾದರೂ ಜನಕ್ಕೆ ಅರಿವಾಗಲಿ ಎಂದು ತಿಳಿಸಿದ್ದಾರೆ.
“2017ರಲ್ಲಿ ಬಲವಂತದಿಂದ ಒಬ್ಬ (?) ರಾಜಕಾರಣಿ ಪಾರ್ಟಿಗೆ ಹೋಗಿದ್ದೆ. ಅರ್ಧಗಂಟೆಗೆ ಆ ಜಾಗ ಅಲ್ಲಿದ್ದವರ ಆರ್ಭಟ, ಬಂದು ಸೇರಿದ ಅರ್ಧ ಉಡುಗೆ ಸುಂದರಿಯರು! ಅದನ್ನು ಕಂಡು ನಾನು ನನ್ನ ಆತ್ಮೀಯ ಯುವನಟಗೆ…! ಹೇಳದೆ ಕೇಳದೆ ಲಿಫ್ಟು ಬಳಸದೆ 12 ಮಹಡಿ ಇಳಿದು ಓಡಿದೆವು. ಅದೆ ಕಡೆ ಇಂದಿಗೂ ನನಗೆ ಯಾರು ಕರೆ ಮಾಡದಂತೆ ಮೊಬೈಲ್ ವರ್ಜಿಸಿದೆ! ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು…ಎಂದು ಜಗ್ಗೇಶ್ ಟ್ವೀಟ್ ಆಕ್ರೋಶ ಹೊರಹಾಕಿದ್ದಾರೆ.
ಸರಿಯಾಗಿ ಬಾಳಿಬದುಕುವ ನಿರ್ದಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ!
ನಾನು ನನ್ನಿಷ್ಟ! ನನ್ನ ಬದುಕು ಎನ್ನುವರ ಮಠಕ್ಕೆ ಸೇರಿಸಿದರು
ನಶೆ ಹಾದರದ ಬಿಸಿ ಹೆಂಚಿನಮೇಲೆ ಸ್ವಲ್ಪ ಕಾಲಬದುಕಿ
ವಿಕೃತ ಆನಂದ ಅನುಭವಿಸಿ ಸೀದುಹೋಗುತ್ತಾರೆ!
ಏಕ್ ಮಾರ್ ದೋ ತಕಡ
ತಪ್ಪುಮಾಡಿದವರ ಬೆತ್ತಲೆ ಮಾಡಿ!ಆಗಲಾದರು ಜನಕ್ಕೆ ಅರಿವಾಗಲಿ!— ನವರಸನಾಯಕ ಜಗ್ಗೇಶ್ (@Jaggesh2) August 29, 2020
ಇನ್ನೊಂದು ಟ್ವೀಟ್ ನಲ್ಲಿ, ಸರಿಯಾಗಿ ಬಾಳಿ ಬದುಕುವ ನಿರ್ಧಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ! ನಾನು ನನ್ನಿಷ್ಠ. ನನ್ನ ಬದುಕು ಎನ್ನುವರು ಮಠಕ್ಕೆ ಸೇರಿಸಿದರು. ನಶೆ ಹಾದರದ ಬಿಸಿ ಹೆಂಚಿನ ಮೇಲೆ ಸ್ವಲ್ಪಕಾಲ ಬದುಕಿ ವಿಕೃಯ ಆನಂದ ಅನುಭವಿಸಿ ಸೀದುಹೋಗುತ್ತಾರೆ! ಏಕ್ ಮಾರ್ ದೋ ತುಕಡಾ…ತಪ್ಪು ಮಾಡಿದವರ ಬೆತ್ತಲೆ ಮಾಡಿ! ಆಗಲಾದರು ಜನಕ್ಕೆ ಅರಿವಾಗಲಿ! ಎಂದು ಹೇಳಿದ್ದಾರೆ.
ಬಲವಂತಕ್ಕೆ 2017 ಒಬ್ಬ ರಾಜಕಾರಣಿ #party ಗೆ ಹೋಗಿದ್ದೆ!ಅರ್ಧಘಂಟೆಗೆ ಆ ಜಾಗ ಅಲ್ಲಿದ್ದವರ ಆರ್ಭಟ!ಬಂದುಸೇರಿದ ಅರ್ಧಉಡುಗೆ ಸುಂದರಿಯರು!ಅದಕಂಡು ನಾನು ನನ್ನ ಆತ್ಮೀಯ ಯುವನಟ
ಗ….!ಹೇಳದೆಕೇಳದೆ ಲಿಫ್ಟು ಬಳಸದೆ 12ಮಹಡಿ ಇಳಿದು ಓಡಿದೆವು!ಅದೆಕಡೆ ಇಂದಿಗು ನನಗೆ ಯಾರು ಕರೆಮಾಡದಂತೆ ಮೊಬೈಲ್ ವರ್ಜಿಸಿದೆ!
ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು! pic.twitter.com/v8ePtIwXHX— ನವರಸನಾಯಕ ಜಗ್ಗೇಶ್ (@Jaggesh2) August 29, 2020
“ನಾನು ಈ ಕಾಲಘಟ್ಟದ ವೇಸ್ಟ್ ಬಾಡಿ! ಕಾರಣ ನನ್ನ ಯೋಗ್ಯತೆ ರಾಗಿಮುದ್ದೆ ಬಸ್ಸಾರು ಗಿರಾಕಿ ಎಂದು! ಹಣ ಇಟ್ಕೊಂಡು ಏನ್ಮಾಡ್ತೀರ? ಸತ್ತ ಮೇಲೆ ಯಾವುದು ಬರಲ್ಲಾ ಎಂಜಾಯ್ ಮಾಡಿ ಬಾಸ್! ಅನ್ನುತ್ತಾರೆ ಪರವಾಗಿಲ್ಲಾ ನನ್ನ ನಲ್ಮೆಯ ಶ್ರೀಕೃಷ್ಣನ ಗೀತೆಯಂತೆ ರಾಯರ ಆದರ್ಶದಂತೆ ಬದುಕಿ ಸಾಯುವೆ! ಸತ್ತರು ಹಣ ಅಧಿಕಾರ ಹಾದರದ ಹಿಂದೆ ಹೋಗೆನು! ನನಗೆ ಬಣ್ಣದ ಬದುಕೆ ಸ್ವರ್ಗ ಎಂದು ಜಗ್ಗೇಶ್ ಸರಣಿ ಟ್ವೀಟ್ ಮಾಡಿದ್ದಾರೆ.
ಶ್ರೇಷ್ಠ ಮನುಜನ್ಮ!ಅದುನಶ್ವರ ಸತ್ಯ!ಆದರು ಆ ನಶ್ವರದೇಹ ನಶಿಸುವಮುನ್ನ ಸಾರ್ಥಕಪಡಿಸಿ ಬದುಕಬೇಕು!ನಶೆ ಹಾದರದ ಹಿಂದೆ ಬರಿ ಸಿನಿಮ ಅಲ್ಲಾ ಸಮಾಜವೆ ಆಕರ್ಷಶಿತ ಆಗುತ್ತಿದೆ! ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೆ ಅವರ ಹೆಜ್ಜೆ ತಪ್ಪುದಾರಿ ತುಳಿಯದು!ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೆ ನಶೆಹಾದರದ ದಾಸರು!ಉಪ್ಪುತಿಂದವ ನೀರುಕುಡಿಯುವ! pic.twitter.com/6M97EZ7UP0
— ನವರಸನಾಯಕ ಜಗ್ಗೇಶ್ (@Jaggesh2) August 29, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.