ವಾಜಪೇಯಿ ಮೃಗಾಲಯಕ್ಕೆ ಬಂತು ಬಿಳಿ ಹುಲಿ-ತೋಳ
ಸೆ.1ರಂದು ಹೊಸ ಅತಿಥಿಗಳ ವೀಕ್ಷಣೆಗೆ ಅವಕಾಶ?
Team Udayavani, Aug 29, 2020, 8:23 PM IST
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಬಳಿ ನೂತನವಾಗಿ ತಲೆ ಎತ್ತಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಅಪರೂಪದ ಅತಿಥಿಗಳು ಬಂದಿದ್ದಾರೆ.
ತಾಲೂಕಿನ ಕಮಲಾಪುರ ಬಿಳಿಕಲ್ಲು ಅರಣ್ಯ ಪ್ರದೇಶದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ 7 ವರ್ಷದ ಅರ್ಜುನ್ ಎಂಬ ಬಿಳಿ ಹುಲಿ ಹಾಗೂ ಎಂಟು ಬಿಳಿ ತೋಳಗಳ ಆಗಮನವಾಗಿದೆ. ಉತ್ತರ ಕರ್ನಾಟಕ ಜನತೆ ಇನ್ನು ಮುಂದೆ ಬಿಳಿ ಹುಲಿಯನ್ನು ವೀಕ್ಷಣೆ ಮಾಡಲು ಮೈಸೂರು ಮೃಗಾಲಯಕ್ಕೆ ಹೋಗಬೇಕಿಲ್ಲ. ತಾಲೂಕಿನ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿಯೇ ಕಣ್ತುಂಬಿಕೊಳ್ಳಬಹುದಾಗಿದೆ. ಸದ್ಯ ಮೃಗಾಲಯದಲ್ಲಿ ಪಟ್ಟೆ ಹುಲಿ, ಜಿರಾಫೆ, ಕಾಡುಕೋಣ, ಸಿಂಹ ಸೇರಿದಂತೆನಾನಾ ಪ್ರಾಣಿಗಳ ಜೊತೆಯಲ್ಲಿ ಹೊಸದಾಗಿ ಬಂದಿರುವಬಿಳಿ ಹುಲಿ ಹಾಗೂ ಬಿಳಿ ತೋಳಗಳನ್ನು ವೀಕ್ಷಣೆ ಮಾಡುವ ಅವಕಾಶ ಪ್ರವಾಸಿಗರಿಗೆ ದೊರೆತಿದೆ.
ಹೊಸದಾಗಿ ಮೃಗಾಲಯಕ್ಕೆ ಹುಲಿ ಬಂದಿರುವುದರಿಂದ ನಿಗಾವಹಿಸಿದ್ದು, ಸದ್ಯ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶವನ್ನು ನೀಡಿಲ್ಲ. ಹುಲಿ ಇಲ್ಲಿನ ವಾತಾವರಣಕ್ಕೆ ಹೊಂದಿದ ಬಳಿಕವಷ್ಟೆ ವೀಕ್ಷಣೆ ಪ್ರವಾಸಿಗರ ವೀಕ್ಷಣೆ ಅವಕಾಶ ನೀಡುವ ಸಾಧ್ಯತೆಯಿದೆ. ಎಲ್ಲವೂ ಅಂದುಕೊಂಡಂತಾದರೆ ಇದೇ ಸೆ.1ರಂದು ಪ್ರಾಣಿ ಪ್ರೀಯರಿಗೆ ನೋಡಲು ಅವಕಾಶ ಮಾಡಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಉತ್ತರ ಕರ್ನಾಟಕದ ಕಮಲಾಪುರ ಹಾಗೂ ಬಿಂಕದಕಟ್ಟಿಯಲ್ಲಿ ಮೃಗಾಲಯವಿದೆ. ಆದರೆ, ಅಲ್ಲಿ ಬಿಳಿ ಹುಲಿಯ ಭಾಗ್ಯವಿಲ್ಲ. ಕೆಲ ಪ್ರಾಣಿಗಳನ್ನು ನೋಡಬಹುದಾಗಿದೆ. ರಾಜ್ಯದಲ್ಲಿ ಒಟ್ಟು 9 ಪ್ರಾಣಿ ಮೃಗಾಲಯಗಳಿವೆ. ಈ ಪೈಕಿ ಮೈಸೂರು ಮೃಗಾಲಯದಲ್ಲಿ ಮಾತ್ರ ಬಿಳಿ ಹುಲಿಯನ್ನು ಕಾಣಬಹುದಾಗಿತ್ತು. ಆದರೆ, ಕ್ರಾಸ್ ಬ್ರಿಡ್ ಮಾಡಿದ 7 ವರ್ಷದ ಗಂಡು ಬಿಳಿ ಹುಲಿಯನ್ನು ಇಲ್ಲಿನ ಪ್ರಾಣಿ ಮೃಗಾಲಯದಲ್ಲಿಯೂ ನೋಡಬಹುದು. ಸದ್ಯ ಮೃಗಾಲಯದಲ್ಲಿ ಪಟ್ಟೆ ಹುಲಿ, ಜಿರಾಫೆ, ಕಾಡುಕೋಣ, ಸಿಂಹ ಸೇರಿದಂತೆ ವಿವಿಧ ಪ್ರಾಣಿಗಳ ಜೊತೆಯಲ್ಲಿ ಇದೀಗ ಸ್ಥಳೀಯ ಮಟ್ಟದಲ್ಲಿ ಇಂತಹ ಅಪರೂಪದ ಪ್ರಾಣಿಗಳನ್ನು ನೋಡುವ ಅವಕಾಶ ಲಭ್ಯವಾಗಿರುವುದು ಪ್ರವಾಸಿಗರಿಗೆ ಸಂತಸ ತಂದಿದೆ.
ಬಿಳಿ ಹುಲಿ ಈ ಮುಂಚೆ ಮೈಸೂರು ಮೃಗಾಯಲದಲ್ಲಿತ್ತು. ಈಗ ಬಳ್ಳಾರಿ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗಿದೆ. ಕೆಲ ದಿನಗಳ ಕಾಲ ಹುಲಿಯ ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು. ಈಗ ಹುಲಿ ನಿಧಾನಕ್ಕೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ. -ಮಂಜುನಾಥ, ಸಹಾಯಕ ಅರಣ್ಯಾಧಿಕಾರಿ, ವಾಜಪೇಯಿ ಮೃಗಾಲಯ, ಕಮಲಾಪುರ
-ಪಿ.ಸತ್ಯನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.