ಕೊರಿಯರ್, ಗೊಂಬೆ, ಅಂಚೆಚೀಟಿಗಳಲ್ಲಿ ಮಾದಕ ವಸ್ತು ರವಾನೆ!
Team Udayavani, Aug 30, 2020, 7:00 AM IST
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿರುವ ಮಾದಕ ವಸ್ತು ಪ್ರಕರಣಕ್ಕೆ ಹೊಸ ಹೊಸ ತಿರುವು ಲಭಿಸುತ್ತಿದ್ದು, ಪ್ರಕರಣದ ಕಿಂಗ್‌ಪಿನ್ ಅನಿಕಾ ಕೊರಿಯರ್ ಮೂಲಕ, ಅಂಚೆ ಚೀಟಿಗಳ ಹಿಂದೆ ಎಲ್‌ಎಸ್‌ಡಿ ಅಂಟಿಸಿ, ಬೊಂಬೆಗಳಲ್ಲಿ ಇರಿಸಿ ರವಾನಿಸುತ್ತಿದ್ದಳು. ಪಾರ್ಟಿಗಳಿಗೆ ಉಡುಗೊರೆ ಬಾಕ್ಸ್‌ಗಳಲ್ಲಿ ಸರಬ ರಾಜು ಮಾಡಲಾಗುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.
ಇದೇವೇಳೆ ಸ್ಯಾಂಡಲ್ ವುಡ್‌ನ ಕೆಲವು ಸ್ಟಾರ್ ಗಳು ಮಾದಕ ವಸ್ತು ಸೇವನೆ ಮಾಡುತ್ತಿದ್ದುದು ಸತ್ಯ ಎಂಬ ಹೇಳಿಕೆ ನೀಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಮತ್ತೂಂದೆಡೆ ಪ್ರಕರಣದ ಕಿಂಗ್‌ಪಿನ್ ಅನಿಕಾ ಎನ್‌ಸಿಬಿ ಅಧಿಕಾರಿಗಳ ಎದುರು ಐದು ಪುಟಗಳ ಹೇಳಿಕೆ ದಾಖಲಿಸಿದ್ದು, ಹಲವು ಮಹತ್ವದ ವಿಷಯ ಗಳು ಅದರಲ್ಲಿವೆ ಎನ್ನಲಾಗಿದೆ.
ಸ್ಯಾಂಡಲ್‌ವುಡ್ ನಟ-ನಟಿಯರು ಮತ್ತು ಸಂಗೀತಗಾರರು ತನ್ನ ಗ್ರಾಹಕರು. ಅದು ಹೊರತು ಪಡಿಸಿ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಪ್ರತೀ ಎಂಡಿಎಂಎ (ಸಿಂಥೆಟಿಕ್ ಮಾದಕ ವಸ್ತು) ಮಾತ್ರೆಯನ್ನು 2ರಿಂದ 5 ಸಾವಿರ ರೂ.ಗೆ ಮಾರಾಟ ಮಾಡಿದ್ದೇನೆ. ಮುಖ್ಯವಾಗಿ ಲಾಕ್ ಡೌನ್ ಸಂದರ್ಭದಲ್ಲೇ ಹೆಚ್ಚು ವಹಿವಾಟು ನಡೆಸ ಲಾಗಿತ್ತು ಎಂದು ಆಕೆ ಹೇಳಿಕೆ ದಾಖಲಿಸಿದ್ದಾಗಿ ಮೂಲಗಳು ತಿಳಿಸಿವೆ.
ಸಂಕೇತಾಕ್ಷರಗಳ ಮೂಲಕ ದಂಧೆ
ಅನಿಕಾ ಕೋಡ್‌ವರ್ಡ್‌ಗಳ ಮೂಲಕ ದಂಧೆ ನಡೆಸುತ್ತಿದ್ದಳು. ತನ್ನ ಸಾಮಾಜಿಕ ಜಾಲತಾಣದ ಖಾತೆ ಹೆಸರು ಕೂಡ ಬಿ-ಮನಿ ಎಂದಿದೆ. ಅಮೀನಮ್ ಖಾನ್ ಮೊಹಮ್ಮದ್ ಮೂಲಕ ದಂಧೆ ನಡೆಸುತ್ತಿದ್ದ ಈಕೆಯ ಸಬ್‌ಡೀಲರ್ ಡುಗಯ್ ಡುಂಜೋ ತಲೆಮರೆಸಿಕೊಂಡಿದ್ದಾನೆ.
ಅನಿಕಾ ಹಿನ್ನೆಲೆ
ತಮಿಳುನಾಡು ಮೂಲದ ಅನಿಕಾ, ಹೊಟೇಲ್ ಮ್ಯಾನೇಜ್‌ಮೆಂಟ್ ಪದವಿ ಯಲ್ಲಿ ಅನುತ್ತೀರ್ಣಗೊಂಡಿದ್ದು, ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ದೊಡ್ಡಗುಬ್ಬಿಯಲ್ಲಿ ವಾಸವಾಗಿದ್ದಳು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆಗೆ ಆ್ಯಂಡಿ ಎಂಬ ನೈಜೀರಿಯಾ ಪ್ರಜೆ ಪರಿಚಯವಾಗಿದ್ದ. ವಿದೇಶದಿಂದ ಬಟ್ಟೆ ರಫ್ತು ವ್ಯವಹಾರ ನಡೆಸುತ್ತಿದ್ದ ಈತ, ಅನಿಕಾ ಳನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ. ಈತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಲ್ಲಿ ಜೈಲು ಸೇರಿದ್ದಾನೆ. ಬಳಿಕ ಕಿರುತೆರೆಯಲ್ಲಿ ನಟಿಯಾಗಿದ್ದ ಆಕೆ, ನಿಧಾನವಾಗಿ ಸಿನೆಮಾ ಕಲಾವಿದರ ಪರಿಚಯ ಬೆಳೆಸಿಕೊಂಡಿದ್ದಳು. ಮನೆ ಸಮೀಪ ವಾಸವಾಗಿದ್ದ ನೈಜೀರಿಯಾ ಪ್ರಜೆಗಳ ಜತೆ ಓಡನಾಟ ಹೊಂದಿದ್ದªಳು.
ಇಂದ್ರಜಿತ್‌ಗೆ ನೋಟಿಸ್
ನಟ-ನಟಿಯರು ಮತ್ತು ಸಂಗೀತಗಾರರಿಗೆ ಮಾದಕ ವಸ್ತು ಮಾರಾಟ ಸಂಬಂಧ ನಟ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಚಂದನ ವನದ ಕೆಲವು ಸ್ಟಾರ್‌ಗಳು ಮಾದಕ ವಸ್ತು ಸೇವನೆ ಮಾಡುತ್ತಿ ರುವುದು ನಿಜ ಎಂದು ಇಂದ್ರಜಿತ್ ಮಾಧ್ಯಮ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಪ್ರಕರಣ ಸಂಬಂಧ ತಮಗೆ ಗೊತ್ತಿರುವ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಡ್ರಗ್ಸ್ ವಿರುದ್ಧ ಪೊಲೀಸರು ನಡೆಸುತ್ತಿರುವ ಹೋರಾಟಕ್ಕೆ ಸಹಕರಿಸಿ ಎಂದು ಕೋರಿದ್ದಾರೆ.
ನಟಿಯರಿಂದಲೇ ಹೆಚ್ಚು ಬೇಡಿಕೆ
ಲೌಕ್ ಡೌನ್ ಸಂದರ್ಭ ನಟರಿಗಿಂತ ನಟಿಯರೇ ಹೆಚ್ಚು ಮಾದಕ ವಸ್ತು ಸೇವಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಈ ಚಟ ಅಂಟಿಸಿಕೊಂಡವರಲ್ಲಿ ಹೆಚ್ಚಿನವರು ಕ್ಲಾಸ್ -1 ಮಾದಕ ವಸ್ತುಗಳಿಗಾಗಿ ಬೇಡಿಕೆ ಇರಿಸುತ್ತಿದ್ದರು.
ಸಾಮಾನ್ಯವಾಗಿ ನಟಿಯರು ವೈನ್ ಸೇವಿಸುತ್ತಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ಇಲ್ಲದ್ದರಿಂದ ಮಾದಕ ವಸ್ತುಗಳಿಗೇ ಶರಣಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.