10 ಸಾವಿರ ಉದ್ಯೋಗ ಸೃಷ್ಟಿ ಗುರಿ : ಪಂಜರ ಮೀನು ಕೃಷಿ ಕಾರ್ಯಾಗಾರದಲ್ಲಿ ಸಚಿವ ಕೋಟ
Team Udayavani, Aug 30, 2020, 12:22 PM IST
ಮಂಗಳೂರು: ಪಂಜರ ಮೀನು ಕೃಷಿಯ ಮೂಲಕ ರಾಜ್ಯದ 10 ಸಾವಿರ ಮಂದಿಗೆ ಸ್ವಾವಲಂಬಿ ಉದ್ಯೋಗ ಕಲ್ಪಿಸುವುದು ನಮ್ಮ ಗುರಿ ಎಂದು ಮೀನುಗಾರಿಕಾ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಪಂಜರ ಮೀನು ಕೃಷಿ ಕೈಗೊಳ್ಳುವ ಬಗ್ಗೆ ಮೀನುಗಾರಿಕಾ ಇಲಾಖೆಯ ಆಶ್ರಯದಲ್ಲಿ ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ 100 ತರಬೇತಿಗಳನ್ನು ಆಯೋಜಿಸಲಾಗುವುದು ಎಂದರು.
ಪಂಜರ ಮೀನು ಕೃಷಿ ಪೂರ್ವಭಾವಿ ಸಿದ್ಧತೆಗೆಂದು ಕಿಸಾನ್ ಕಾರ್ಡ್ ಮೂಲಕ ಬ್ಯಾಂಕ್‌ನಿಂದ 3 ಲಕ್ಷ ರೂ. ವರೆಗೆ ಸಾಲ ಒದಗಿಸಲಾಗುತ್ತದೆ. ಆರ್ಥಿಕ ಸಹಾಯದ ನಿಟ್ಟಿನಲ್ಲಿ ಲೀಡ್ ಬ್ಯಾಂಕ್ ಮುಖ್ಯಸ್ಥರ ಜತೆ ಚರ್ಚಿಸಿ ದ್ದೇವೆ ಎಂದರು.
ಪ್ರಥಮ ಸ್ಥಾನದ ಗುರಿ
ಮೀನುಗಾರರ ಆದಾಯ ದ್ವಿಗುಣ ಗೊಳಿ ಸುವುದು ರಾಜ್ಯ ಸರಕಾರದ ಪ್ರಮುಖ ಗುರಿ. ಸಿಹಿ ನೀರಿನ ಸಿಗಡಿ ಕೃಷಿಗೆ ಮೀನು ಗಾರಿಕಾ ಇಲಾಖೆಯಿಂದ ಆದ್ಯತೆ ನೀಡಲಾಗುವುದು. ಕಡಲ ಮೀನುಗಾರಿಕೆ ಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ನಾಲ್ಕನೇ ಸ್ಥಾನ ದಲ್ಲಿದೆ. ಅದೇ ರೀತಿ ಒಳನಾಡು ಮೀನು ಗಾರಿಕೆಯಲ್ಲಿ 9ನೇ ಸ್ಥಾನ ದಲ್ಲಿದೆ. ಮೀನು ಉತ್ಪಾದನೆಯಲ್ಲಿ ದೇಶ ದಲ್ಲೇ ಪ್ರಥಮ ಸ್ಥಾನ ನಮ್ಮ ಗುರಿ ಯಾಗಿದೆ. ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಲಾಗಿದೆ. ಗರಿಷ್ಠ ಪ್ರಮಾಣದ ಹಣ ಬಿಡುಗಡೆ ನಿರೀಕ್ಷೆ ಇದೆ ಎಂದು ಹೇಳಿದರು.
ಮೀನುಗಾರಿಕೆ ನಿರ್ದೇಶಕ ರಾಮಾ ಚಾರ್ಯ ಪ್ರಸ್ತಾವನೆಗೈದು, ಕಡಲ ಮೀನುಗಾರಿಕೆಯಲ್ಲಿ ಕರಾವಳಿ ಭಾಗದಿಂದ 4 ಲಕ್ಷ ಟನ್ ಮೀನು ಉತ್ಪಾದನೆಯಾಗುತ್ತದೆ. ಮೀನು ಗಾರರ ಆರ್ಥಿಕ ಸ್ಥಿತಿ ಸುಧಾರಣೆಗೆ ಪಂಜರ ಮೀನು ಕೃಷಿ ಸಹಕಾರಿಯಾಗಲಿದೆ ಎಂದರು.
ಮೀನುಗಾರಿಕಾ ಇಲಾಖೆ ಕಾರ್ಯ ಕ್ರಮಗಳ ಕೈಪಿಡಿ, ಪಂಜರ ಕೃಷಿ ಬಗ್ಗೆ ಕರಪತ್ರವನ್ನು ಅತಿಥಿಗಳು ಬಿಡುಗಡೆ ಮಾಡಿದರು. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಡಿ ಪ್ರಮಾಣ ಪತ್ರ ವಿತರಿಸ ಲಾಯಿತು. ಮೀನು ಮರಿ ವಿತರಣೆ ನಡೆಯಿತು. ಮೀನುಗಾರಿಕೆಗೆ ತೆರಳಿ ದಾಗ ಸೋಮೇಶ್ವರ ಕಡಲ ತೀರದಲ್ಲಿ ಮೃತಪಟ್ಟಿದ್ದ ನಾರಾಯಣ ಉಚ್ಚಿಲ ಅವರ ಪುತ್ರಿ ರಂಜಿತಾಗೆ ರಾಜ್ಯ ಸರಕಾರದಿಂದ 3 ಲಕ್ಷ ರೂ. ಪರಿಹಾರಧನದ ಚೆಕ್ ವಿತರಿಸಲಾಯಿತು.
ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ| ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಪ್ರತಾಪ ಸಿಂಹ ನಾಯಕ್, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್, ಮೀನು ಗಾರಿಕಾ ಇಲಾಖೆ ಉಪನಿರ್ದೇಶಕ ಪಿ. ಪಾರ್ಶ್ವನಾಥ್ ಉಪಸ್ಥಿತರಿದ್ದರು.
ಸೆ. 1ರಿಂದ ಮೀನುಗಾರಿಕೆ
ರಾಜ್ಯ ಕರಾವಳಿಯಲ್ಲಿ ಸಾಮಾನ್ಯ ವಾಗಿ ಆ. 1ರಂದು ಆರಂಭವಾಗುವ ಮೀನುಗಾರಿಕೆ ಕೊರೊನಾದಿಂದಾಗಿ ಈ ಬಾರಿ ಒಂದು ತಿಂಗಳು ತಡವಾಗಿ ಸೆ. 1ರಂದು ಆರಂಭವಾಗುತ್ತಿದೆ. ಆರೋಗ್ಯ ಮತ್ತು ಕೊರೊನಾ ನಿಯಮಾವಳಿಗಳ ಪಾಲನೆಗೆ ಆದ್ಯತೆ ನೀಡಲಾಗುವುದು ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.