ಕೋವಿಡ್ – 19 ಕರ್ತವ್ಯಕ್ಕೆ ಅಡ್ಡಿ: ಪುರಸಭೆ ಸಿಬ್ಬಂದಿಯಿಂದ ದೂರು
Team Udayavani, Aug 30, 2020, 5:45 PM IST
ಕಾರ್ಕಳ: ಕೋವಿಡ್-19 ಕರ್ತವ್ಯಕ್ಕೆ ತೆರಳಿದ್ದ ವೇಳೆ ಸತ್ಯನಗರ ನಿವಾಸಿ ಪ್ರಶಾಂತ ದೇವಾಡಿಗ ಎಂಬವರು ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೈಹಿಕ ಹಲ್ಲೆ ನಡೆಸಿರುವುದಾಗಿ ಕಾರ್ಕಳ ಪುರಸಭೆಯ ಕರವಸೂಲಿ ಸಿಬಂದಿ ಚಂದ್ರಶೇಖರ ಅವರು ನಗರ ಠಾಣೆಗೆ ರವಿವಾರ ದೂರು ನೀಡಿದ್ದಾರೆ.
ದೂರಿನಲ್ಲಿ ಅವರು ಪುರಸಭೆಯಲ್ಲಿ ಕರ ವಸೂಲಿ ಕರ್ತವ್ಯ ನಿರ್ವಹಿಸುತ್ತಿರುವ ತಾನು ಮುಖ್ಯಾಧಿಕಾರಿಗಳ ಆದೇಶದಂತೆ ಪುರಸಭೆ ವ್ಯಾಪ್ತಿಯಲ್ಲಿ ಕೋವಿಡ್-19 ಕ್ವಾರಂಟೈನ್ ವಾಚ್ ಆಪ್ ಕೊರೊನಾ ಪಾಸಿಟಿವ್ ಪ್ರಕರಣ, ಹೊರರಾಜ್ಯದಿಂದ ಬಂದ ಸಾರ್ವಜನಿಕರು ಮತ್ತು ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳ ಹೋಂ ಕ್ವಾರಂಟೈನ್ ಮನೆಗಳಿಗೆ ಪ್ರತಿನಿತ್ಯ ಬೇಟಿ ನೀಡಿ ಪೊಟೋಗಳನ್ನು ತೆಗೆದು ಅಪ್ಲೋಡ್ ಮಾಡುತ್ತಿದ್ದೇನೆ.
ಆ.30ರಂದು ಬೆಳಗ್ಗೆ 9ರ ವೇಳೆಗೆ ಸತ್ಯನಾರಾಯಣ ನಗರದ ಕ್ವಾರಂಟೈನ್ನಲ್ಲಿರುವ ಪ್ರಶಾಂತ್ ದೇವಾಡಿಗ, ನಿರ್ಮಲ, ಲಕ್ಷ್ಮಿ ದೇವಾಡಿಗರ ಎಂಬವರ ಮನೆಗೆ ತೆರಳಿದಾಗ ಪ್ರಶಾಂತ ದೇವಾಡಿಗರು ಆಕ್ಷೇಪ ವ್ಯಕ್ತಪಡಿಸಿ, ನಿಮಗೆ ಮಾಡಲು ಬೇರೆ ಕೆಲಸ ಇಲ್ಲವೆ ಎಂಬಿತ್ಯಾದಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ದೂರು ಪಡೆದುಕೊಂಡ ನಗರ ಠಾಣೆ ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.