ನಾನು, ಮಳೆ ಮತ್ತು ಕಾಯ್ಕಿಣಿ ಸರ್
Team Udayavani, Aug 31, 2020, 10:00 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚಿಕ್ಕದಿರುವಾಗಲೇ ನನಗೆ ಮಳೆ ಅಂದರೆ ಅದೇನೋ ಕೋಪ.
ಯಾಕಂದರೆ ಮನೆಯಲ್ಲಿ ಯಾರೂ ಕೂಡ ಮಳೆಯಲ್ಲಿ ನೆನೆಯೋಕೆ ಬಿಡ್ತಾ ಇರಲಿಲ್ಲ.
ನೆಗಡಿ – ಜ್ವರ ಬಂದರೆ ಅಂತ ಗಾಬರಿ ಅಮ್ಮನಿಗೆ.
ನಂದು ಸೆನ್ಸಿಟಿವ್ ಶರೀರ. ಮಳೆ- ಜಾಸ್ತಿ ಬಿಸಿಲು ನನ್ನ ದೇಹಕ್ಕೆ ಆಗುತ್ತಲೇ ಇರಲಿಲ್ಲ.
ಎಲ್ಲರೂ ಮಳೆಯಲಿ ಕುಣಿತಾ ಇದ್ರೆ, ನಾನು ಇದನ್ನು ನೋಡಿ ಪೆಚ್ಚು ಮೋರೆ ಹಾಕ್ತಿ¨ªೆ.ಯಾಕೋ ಈ ಘಟನೆಗಳಿಂದಾಗಿ ಮಳೆ ಅಂದರೆ ಕೋಪ ಬರ್ತಿತ್ತು.
ಮಳೆ ಮೇಲೆ ಎಷ್ಟು ಕೋಪ ಇತ್ತು ಅಂದರೆ ಮಳೆ ನೀರು ಆದಷ್ಟು ನನ್ನ ಸ್ಪರ್ಶಿಸಬಾರದು ಅಂತ ರೈನ್ ಕೋಟು ಹಾಕಿಕೊಂಡು ಹೋಗ್ತಿದ್ದೆ. ಬರಿ ಪಾದಗಳು ಅಷ್ಟೇ ಒದ್ದೆ ಆಗ್ತಿತ್ತು. ಹೀಗಿರುವಾಗ ಮುಂಗಾರು ಮಳೆ ಚಿತ್ರ ರಿಲೀಸ್ ಆಯ್ತು. ಅದರ ಹಾಡುಗಳು ಅದ್ಭುತವಾಗಿದ್ದವು. ಅದರ ಸಾಲುಗಳು ಯಾಕೋ ಮತ್ತೆ ಮತ್ತೆ ನೆನಪಾಗುತ್ತಿದ್ದವು. ಆದರೆ ಬರೆದವರು ಯಾರೂ ಎಂಬುದು ಮಾತ್ರ ನನಗೆ ಅಸ್ಪಷ್ಟ. ನಿಜ ಹೇಳಬೇಕೆಂದರೆ ಅದರ ಬಗ್ಗೆ ನಾನು ಅಷ್ಟೊಂದು ಗಮನ ಕೊಟ್ಟೆ ಇರಲಿಲ್ಲ.
ಆಗ ಇಂಟರ್ನೆಟ್ ಅಂತೂ ಇರಲಿಲ್ಲ. ಒಂದು ದಿನ ಟಿವಿಯಲ್ಲಿ ಹಾಡು ಪ್ರಸಾರ ಆದಾಗ ಸಾಹಿತಿ ಜಯಂತ್ ಕಾಯ್ಕಿಣಿ ಅಂತ ಇತ್ತು. ಒಂದೆರಡು ದಿನ ಅದ ಮೇಲೆ ಪೇಪರ್‌ನಲ್ಲಿ ಅವರ ಕಥೆನು ಬಂತು. ಅದೂ ಕೂಡ ಇಷ್ಟ ಆಯ್ತು.
ಇದೆಲ್ಲ ಆಗಿ ಒಂದು ತಿಂಗಳು ಆದ ಮೇಲೆ ಮಳೆಗಾಲ. ಹಾಡು ಇನ್ನೂ ಕಿವಿ ಮತ್ತು ಮನಸ್ಸಲ್ಲಿ ಗುಂಯ್ಯಿಡುತ್ತಿತ್ತು. ಮಳೆ ಅಂದ್ರೆ ಕೋಪ ಬರುತ್ತಿದ್ದ ಇದ್ದ ನನಗೆ ಒಂದು ಹಾಡು ಮನ ಪರಿವರ್ತನೆ ಮಾಡಿತ್ತು. ರೈನ್ ಕೋಟು ಬಿಟ್ಟು ಕೊಡೆ ಹಿಡಿದು ಶಾಲೆಗೆ ಹೋಗಿದ್ದೆ. ಅದೆಷ್ಟು ಖುಷಿ ಆಯ್ತು ಆದಿನ ಅಂತೂ ಬಣ್ಣಿಸೋಕೆ ಆಗಲ್ಲ.ಮಳೆಗೆ ಒದ್ದೆಯಾಗಿ ಚಳಿ ಆಗುತ್ತಿದ್ದರೂ ಏನೋ ಖುಷಿ, ಉತ್ಸಾಹ.
ಜ್ವರಾನು ಬಂದಿತ್ತು. ಆದ್ರೆ ಕೋಪ ಬರಲೇ ಇಲ್ಲ. ಈಗ ಮಳೆ ಅಂದ್ರೆ ನನ್ ಲವರ್ ಥರ. ತುಂಬ ತುಂಬ ಇಷ್ಟ. ಜತೆಗೆ ಕಾಯ್ಕಿಣಿ ಅಭಿಮಾನಿ ಕೂಡ ಆದೆ ನಾನು. ಅವರ ಹಾಡುಗಳಲ್ಲಿ ಹೆಚ್ಚಿನದು ಮಳೆ ಹಾಡುಗಳೇ. ಅದಕ್ಕೆ ಅವರು ಅಂದರೆ ಅಭಿಮಾನ,ಮಳೆ ಅಂದರೆ ಪ್ರೀತಿ. ಮಳೆ ಮೇಲೆ ಪ್ರೀತಿ ಹುಟ್ಟಿಸಿದ್ದು ಕಾಯ್ಕಿಣಿ ಸರ್‌ಗೆ ವಂದನೆಗಳು.
ತೇಜಸ್ವಿನಿ ಆರ್. ಕೆ., ಎಸ್‌ಡಿಎಂ ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.