ಹಸುರಿನ ತೆಕ್ಕೆಯಲ್ಲಿನ ಮಲೆನಾಡ ದಿನಚರಿಯೇ ಅದ್ಭುತ
Team Udayavani, Aug 31, 2020, 10:20 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನಮ್ಮೂರು ಮಲೆನಾಡು… ಸೌಂದರ್ಯದ ತರುನಾಡು… ಕಾಫಿಯ ತವರೂರು… ಶಿಲ್ಪಕ್ಕೆ ಬೇಲೂರು… ಈ ಹಾಡು ಎಷ್ಟು ಚಂದಾ ಅಲ್ವಾ?
ಹಾಡಿನಂತೆ ನಮ್ಮೂರೂ ಅಷ್ಟೆ ಚಂದ.
ಮಳೆಗಾಲದಲ್ಲಿ ಪ್ರಕೃತಿಯೆ ಹಸಿರು ಕಂಬಳಿ ಹೊದ್ದು ಮಲಗಿದಂತೆ ಕಾಣುತ್ತದೆ.
ಸಾಮಾನ್ಯವಾಗಿ ಮಳೆಗಾಲದ ಸಂದರ್ಭದಲ್ಲಿ ಜಾಸ್ತಿಯಾಗಿ ಓದಿನ ಸಲುವಾಗಿ ಬೇರೆ ಊರಿನಲ್ಲಿ ಇರುತ್ತಿದ್ದ ನನಗೆ ನಮ್ಮೂರಿನಲ್ಲಿ ಕಳೆಯಲು ಸಮಯವೇ ಸಿಗುತ್ತಿರಲಿಲ್ಲ.
ಆದರೆ ಈಗ ಮಳೆಗಾಲದಲ್ಲಿ ನಮ್ಮೂರನ್ನು ನೋಡಿ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ.
ಎಲ್ಲಿ ನೋಡಿದರು ಪ್ರಕೃತಿಯ ನವಿಲ ನರ್ತನ, ಪ್ರೀತಿಯ ಮಳೆಯ ಜಿನುಗು ಸಿಂಚನ. ನನ್ನೂರಿನ ಆ ಮಳೆ, ಕಾಫಿ ವಾಸನೆ, ಶೃಂಗೇರಿ ಶಾರದಾಂಬೆ ದೇವಸ್ಥಾನ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ , ಬಾಳೆತೋಟ ಹೀಗೆ…ನನ್ನೂರನ್ನು ವರ್ಣಿಸುವುದಕ್ಕೆ ಪದಗಳೆ ಸಿಗುತ್ತಿಲ್ಲ.
ಸದಾ ಹರಿಯೊ ನಮ್ ತುಂಗಾ ಭದ್ರಾ ಮತ್ತು ಹೇಮಾವತಿ ನಮ್ಮಲ್ಲಿ ಉತ್ಸಾಹ ತುಂಬುತ್ತವೆ. ತಿಂಡಿಯ ವಿಷಯಕ್ಕೆ ಬಂದರೆ ಕಡುಬು, ಪತ್ರೊಡೆ, ನೀರುದೋಸೆ ಬಹಳ ನಮ್ಮಲ್ಲಿ ಜನಪ್ರಿಯ.
ನಮ್ಮ ಚಿಕ್ಕಮಗಳೂರಿನ ಇನ್ನೊಂದು ವಿಶೇಷ ಗೊತ್ತಾ?ಇದನ್ನು ಎರಡನೇ ಸ್ವೀಜರ್‌ಲ್ಯಾಂಡ್ ಅಂತಾನೂ ಕರೆಯುತ್ತಾರೆ. ದೇಶಕ್ಕೆ ಪರಿಚಯವಾದ ಕಾಫಿ ಡೇ ನಮ್ಮೂರ ಹೆಮ್ಮೆಯ ಕೊಡುಗೆ. ಪ್ರತಿ ವರ್ಷ ಮಳೆಗಾಲದಲ್ಲಿ ಒಂದೆರಡು ದಿನ ಕಾಲೇಜಿಗೆ ರಜೆ ಹಾಕಿ ಗೆಳತಿಯರ ಜತೆ, ಮಳೆಯ ಮಜಾ ಅನುಭವಿಸುವುದು ನನಗೆ ಪ್ರಿಯವಾದ ಹವ್ಯಾಸ. ಚಿಕ್ಕವಳಿದ್ದಾಗಿನಿಂದ ಕಳೆದ ಮಳೆಗಾಲದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ದಿನಗಟ್ಟಲೆ ಸುರಿಯುವ ಮಳೆಯಲ್ಲಿ ಛತ್ರಿ ಇದ್ದರೂ ಬೇಕೆಂತಲೇ ನೆನೆಯುತ್ತಿದ್ದುದು, ಬಿಳಿ ಅಂಗಿಗೆ(ಯುನಿಫಾರ್ಮ್ )ಎಷ್ಟು ಸಾಧ್ಯವೋ ಅಷ್ಟು ಕೆಸರು ಮೆತ್ತಿಕೊಂಡು ಅಪ್ಪನಿಂದ ಬೈಗುಳ ತಿನ್ನುತ್ತಿದ್ದ ನೆನಪು ನಮ್ಮೂರಿನಂತೆ ಸದಾ ಹಸಿರು.
ತುಂಬಿದ ಹೊಳೆ ನೋಡಲು ಹೋಗಿ ಸ್ವಲ್ಪದರದಲ್ಲಿ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದು, ಬಿಕ್ಕೆ ಹಣ್ಣು, ಚಳ್ಳೆಹಣ್ಣು ಮೆಲ್ಲುತ್ತಿದ್ದುದು, ವಾರಗಟ್ಟಲೇ ಕರೆಂಟು ಇಲ್ಲದೆ ಕಳೆದ ದಿನಗಳು ಎಲ್ಲವೂ ಸ್ಮತಿ ಪಟಲದಲ್ಲಿ ಹಾದು ಹೋಗುತ್ತದೆ.
ಸುನೀತಾ ಎಚ್.ಎಸ್. ಚಿಕ್ಕಮಗಳೂರು, ಎಂ.ಪಿ.ಎಂ. ಕಾಲೇಜು, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.