ಬ್ಯಾಂಕ್ ಖಾತೆ ಬದಲಾವಣೆಗೆ ಗ್ರಾಹಕರ ಪರದಾಟ
ಹಣ ಪಡೆಯಲಾಗದ ಪರಿಸ್ಥಿತಿ ನಿರ್ಮಾಣ
Team Udayavani, Aug 31, 2020, 1:27 PM IST
ಭಾರತೀನಗರ: ಬ್ಯಾಂಕುಗಳ ವಿಲೀನದಿಂದ ಗ್ರಾಹಕರು ತಮ್ಮ ಖಾತೆಯ ಬದಲಾವಣೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬ್ಯಾಂಕಿನ ಶಾಖಾ ಕಚೇರಿಯ ಮುಂದೆ ಗ್ರಾಹಕರು ಸಾಲುಗಟ್ಟಿ ನಿಲ್ಲಿವಂತಾಗಿದೆ.
ಇದು ಇಲ್ಲಿನ ವಿಜಯ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡಾ) ಶಾಖಾ ಕಚೇರಿಯಲ್ಲಿ ದಿನನಿತ್ಯ ಗ್ರಾಹಕರು, ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಾಮಾಜಿಕ ಅಂತರವಿಲ್ಲದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ವಿಜಯ ಬ್ಯಾಂಕ್ 1977ರಲ್ಲಿ ಭಾರತೀನಗರದಲ್ಲಿ ಪ್ರಾರಂಭವಾದಿದ್ದು, ಇಲ್ಲಿಯವರೆಗೆ 48 ಸಾವಿರ ಖಾತೆದಾರರನ್ನು ಹೊಂದಿದೆ. ಸರ್ಕಾರಿ ಸೌಲಭ್ಯ ಪಡೆಯುವ 9 ಸಾವಿರ ಖಾತೆದಾರರಿದ್ದಾರೆ. ಆದರೆ, ಬ್ಯಾಂಕ್ ಆಫ್ ಬರೋಡಾ ಆದ ನಂತರ ಸಮಸ್ಯೆಗಳು ಗ್ರಾಹಕರಿಗೆ ಪ್ರಾರಂಭವಾಗಿದೆ.
ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ: ಬ್ಯಾಂಕ್ ಬದಲಾದಂತೆ ಸಾಫ್ಟ್ವೇರ್ ಬದಲಾಗಬೇಕು. ಆದರೆ, ಅದು ಆಗಲಿಲ್ಲ. ಕೆಲವರು ಎಟಿಎಂನಲ್ಲಿ ಹಣ ಪಡೆಯಲು ಹೋದರೆ ಬ್ಯಾಲೆನ್ಸ್ ಇಲ್ಲ ಎಂಬ ಸಂದೇಶ ಬರುತ್ತದೆ. ಮತ್ತೂಂದೆಡೆ ಖಾತೆದಾರರು ಬ್ಯಾಂಕ್ ತೆರಳಿದರೆ ಹಣ ತೆಗೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಖಾತೆದಾರರಿಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ವಿಜಯ ಬ್ಯಾಂಕ್ 2019ರಲ್ಲಿ ಬ್ಯಾಂಕ್ ಆಫ್ ಬರೋಡಾ ಜತೆ ವಿಲೀನವಾಯಿತು. ನಂತರ ದಿನಗಳಲ್ಲಿ ಖಾತೆದಾರರು ವ್ಯವಹಾರ ನಡೆಸುತ್ತಿದ್ದರು. ನಂತರ ಆಗಸ್ಟ್ 15ರಿಂದ ಖಾತೆಗಳೆಲ್ಲ ಸ್ಥಗಿತವಾಗಿದೆ. ಖಾತೆದಾರರು ವ್ಯವಹರಿಸಲಾಗದ ಪರಿಸ್ಥಿತಿ ನಿರ್ಮಾಣವಾಯಿತು.
ಬ್ಯಾಂಕ್ ಮುಂದೆ ಜನದಟ್ಟಣೆ: ವೃದ್ಧಾಪ್ಯ ವೇತನ ಪಡೆಯಲು ವೃದ್ಧರೆ ಹೆಚ್ಚಾಗಿ ಬರುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದು, ಬ್ಯಾಂಕ್ ಮುಂದೆ ಜನದಟ್ಟಣೆ ಕಂಡು ಬರುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ನಿಲ್ಲುವಂತೆ ಬ್ಯಾಂಕ್ ಸಿಬ್ಬಂದಿ ಸಲಹೆ ನೀಡಿದರೂ, ಖಾತೆದಾರರು ಮಾತ್ರ ಇದಕ್ಕೆ ಯಾವುದೇ ಕ್ಯಾರೆ ಎನ್ನುತ್ತಿಲ್ಲ. ಬ್ಯಾಂಕ್ ವೀಲಿನವಾದ ನಂತರ ಹೊಸ ತಂತ್ರಾಂಶದ ಬಗ್ಗೆ ಸಿಬ್ಬಂದಿ ಇನ್ನಷ್ಟು ತಿಳಿಯಬೇಕಾಗಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಬ್ಯಾಂಕ್ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.
ಸಾರ್ವಜನಿಕರು ಬ್ಯಾಂಕ್ ಮುಂದೆ ಸರದಿ ಸಾಲು ನಿಲ್ಲತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಬ್ಯಾಂಕ್ ಅಧಿಕಾರಿಗಳು ವಿಫಲರಾಗಿದ್ದಾರೆ. ಕೋವಿಡ್ ಹೆಚ್ಚಾಗುತ್ತಿದ್ದು, ಒಂದೆಡೆ ಹೆಚ್ಚು ಜನ ಸೇರಲು ನಿಷೇಧಿಸಿದೆ. ಇದನ್ನು ಖಾತೆದಾರರು ಅರಿತುಕೊಳ್ಳಬೇಕಾಗಿದೆ. ಈ ಬಗ್ಗೆ ಬಾಂಕ್ ಅಧಿಕಾರಿಗಳು ಕ್ರಮ ವಹಿಸಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸಾಮಾಜಿಕ ಅಂತರವಿಲ್ಲ : ಈ ಬಗ್ಗೆ ವಿಚಾರಿಸಲು ಬ್ಯಾಂಕ್ ತೆರಳಿದ ಖಾತೆದಾರರಿಗೆ ಮತ್ತೂಮ್ಮೆ ಆಧಾರ್, ಪಾನ್ ಕಾರ್ಡ್ ನೀಡಿ ಖಾತೆಯನ್ನು ಚಾಲನೆ ಮಾಡಿಸಿಕೊಳ್ಳುವಂತೆ ತಿಳಿಸಿದ್ದರಿಂದ ದಿನ ನಿತ್ಯ ಬ್ಯಾಂಕ್ ಮುಂದೆ ಜನವೋ ಜನ ಯಾವುದೇ ಸಾಮಾಜಿಕ ಅಂತರವಿಲ್ಲದೆ ಮುಗಿ ಬಿಳುತಿದ್ದರು. ವಿವಿಧ ಯೋಜನೆಯ ಹಣ ಪಡೆಯಲು ಖಾತೆದಾರರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಬ್ಯಾಂಕ್ ಸಮೀಪದ ಅಂಗಡಿಗಳಿಗೂ ತೊಂದರೆಯಾಗುತಿದ್ದರೂ, ಬ್ಯಾಂಕ್ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತಿದೆ.
ವಿಜಯ ಬ್ಯಾಂಕ್- ಬ್ಯಾಂಕ್ ಆಫ್ ಬರೋಡಾಗೆ ವಿಲೀನವಾದ ಮೇಲೆ ಗ್ರಾಹಕರಿಗೆ ಸಮಸ್ಯೆಯಾಗಿದೆ. ನಮ್ಮ ಸಿಬ್ಬಂದಿ ವೇಗವಾಗಿ ಎಲ್ಲಾ ಗ್ರಾಹಕರಿಗೂ ಖಾತೆ ಬದಲಾವಣೆ ಬಗ್ಗೆ ಮಾಹಿತಿ ನೀಡಿ, ಸಮಸ್ಯೆ ಪರಿಹರಿಸುತ್ತಿದ್ದಾರೆ. ಗ್ರಾಹಕರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಸರ್ಕಾರಿ ಯೋಜನೆ ಪಡೆಯುವ ಖಾತೆದಾರರ ಮನೆ ಬಳಿಯೇ ಹಣ ನೀಡುವ ವ್ಯವಸ್ಥೆ ಮಾಡಿದ್ದೇವೆ. ಆದರು ಸಹ ಹಣ ಬಂದಿದೆಯೇ ಎಂದು ಪಾಸ್‌ಬುಕ್ ಹಿಡಿದು ಬರುತ್ತಾರೆ. –ಡಿ.ಎನ್.ಗಿರೀಶ್, ಬ್ಯಾಂಕ್ ಶಾಖೆಯ ಹಿರಿಯ ಪ್ರಬಂಧಕ, ವಿಜಯ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡಾ)
ಕಳೆದ 15 ದಿನದಿಂದ ನೂರಾರು ಮಂದಿ ಗ್ರಾಹಕರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಪ್ರತಿಯೊಬ್ಬರಿಗೂ ಹಣ ಅಗತ್ಯವಿದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಇತರರಿಗೂ ಆತಂಕ ಉಂಟುಮಾಡಿದೆ. ಪ್ರಸ್ತುತ ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು. –ವಿನಯ್, ಮೆಳ್ಳಹಳ್ಳಿ ಗ್ರಾಹಕ
–ಅಣ್ಣೂರು ಸತೀಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.