ಕಸ್ತೂರಿ ನಿವಾಸ ಟೈಟಲ್ ಬದಲು
ದಿನಕಳೆಯುವುದರೊಳಗೆ ಶೀರ್ಷಿಕೆ ಬದಲಾಗಲು ಕಾರಣವೇನು?
Team Udayavani, Aug 31, 2020, 2:56 PM IST
ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಸಿನಿಮಾಗಳ ಟೈಟಲ್‌ಗಳನ್ನು ಮರುಬಳಕೆ ಮಾಡಿಕೊಂಡು ಆಗಾಗ್ಗೆ ಹೊಸ ಸಿನಿಮಾಗಳು ಬರುತ್ತಲೇ ಇರುತ್ತವೆ. ಆದರೆ ಹೀಗೆ ಬಂದ ಹಲವು ಬಹುತೇಕ ಸಿನಿಮಾಗಳು ಹಿಂದಿನ ಚಿತ್ರಗಳಂತೆ ದೊಡ್ಡ ಪ್ರಮಾಣದಲ್ಲಿ ಹಿಟ್ ಆಗಿಲ್ಲ ಎನ್ನುವುದು ವಾಸ್ತವ ಸತ್ಯ. ಆದರೂ, ಹಿಂದಿನ ಸಿನಿಮಾಗಳ ಟೈಟಲ್ ಪ್ರಭಾವವೋ, ಅಥವಾ ಅವುಗಳ ಜನಪ್ರಿಯತೆಯೋ, ಅದೇ ಹಿಟ್ ಟೈಟಲ್ ಇಟ್ಟುಕೊಂಡು ಬರುತ್ತಿರುವ ಸಿನಿಮಾಗಳಂತೂ ನಿಂತಿಲ್ಲ. ಇತ್ತೀಚೆಗೆ ಅಂಥದ್ದೇ ಒಂದು ಹಿಟ್ ಸಿನಿಮಾ “ಕಸ್ತೂರಿ ನಿವಾಸ’ ಟೈಟಲ್ ಇಟ್ಟುಕೊಂಡು ಹೊಸ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿತ್ತು.
ಕನ್ನಡದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಹಿರಿಯ ನಿರ್ದೇಶಕ ದಿನೇಶ್ ಬಾಬು “ಕಸ್ತೂರಿ ನಿವಾಸ’ ಟೈಟಲನ್ನು ತಮ್ಮ ಹೊಸ ಚಿತ್ರಕ್ಕೆ ಇಟ್ಟಿದ್ದರು. ಬಾಬು ಅವರ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಆಗುತ್ತಿದ್ದಂತೆ, ಸಹಜವಾಗಿಯೇ ಅದರ ಬಗ್ಗೆ ಚಿತ್ರರಂಗದಲ್ಲಿ ಒಂದಷ್ಟು ಪ್ರತಿಕ್ರಿಯೆಗಳು ವ್ಯಕ್ತವಾದವು. ಹಿರಿಯ ನಿರ್ದೇಶಕ ಕೆ.ಎಸ್ ಭಗವಾನ್ “ಕಸ್ತೂರಿ ನಿವಾಸ’ ಟೈಟಲ್ ಮರುಬಳಕೆ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದರು. ಇನ್ನು ಕೆಲವರು ದಿನೇಶ್ ಬಾಬು ಅವರಂಥ ಹಿರಿಯ ನಿರ್ದೇಶಕರು ಈ ಟೈಟಲ್ ಬಳಸುತ್ತಿರುವುದು ಸರಿ ಎಂದೂ ಹೇಳಿದ್ದರು. ಆದರೆ ಅದೇನಾಯಿತೋ.., ಏನೋ, ದಿನೇಶ್ ಬಾಬು ದಿನ ಕಳೆಯುವುದರೊಳಗೆ ತಮ್ಮ ಹೊಸ ಚಿತ್ರಕ್ಕೆ ಇಟ್ಟಿದ್ದ “ಕಸ್ತೂರಿ ನಿವಾಸ’ ಟೈಟಲ್ ಬದಲಾಯಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಬಗ್ಗೆ ಮಾತನಾಡುವ ದಿನೇಶ್ ಬಾಬು, “ಕಥೆಗೆ ಸರಿಯಾಗಿ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ನಮ್ಮ ಹೊಸ ಸಿನಿಮಾಕ್ಕೆ “ಕಸ್ತೂರಿ ನಿವಾಸ’ ಅಂಥ ಟೈಟಲ್ ಇಟ್ಟಿದ್ದೆವು. ಆದ್ರೆ ಟೈಟಲ್ ಅನೌನ್ಸ್ ಆದ ನಂತರ ನನಗೆ ಮತ್ತು ನಮ್ಮ ಚಿತ್ರತಂಡಕ್ಕೆ ಅನೇಕರು ಪೋನ್ ಮಾಡಿ ಈ ಟೈಟಲ್ ಮರುಬಳಕೆ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಕೆಲವರು “ಕಸ್ತೂರಿ ನಿವಾಸ’ ಕನ್ನಡ ಚಿತ್ರರಂಗದಲ್ಲಿ ಕ್ಲಾಸಿಕ್ ಸಿನಿಮಾವಾಗಿದ್ದರಿಂದ, ಅದಕ್ಕೆ ಅಪಚಾರ ಮಾಡಬೇಡಿ ಎಂದೂ ಹೇಳುತ್ತಿದ್ದಾರೆ. ಹೀಗಾಗಿ ಈಗ ಸಿನಿಮಾದ ಟೈಟಲ್ ಬದಲಾಯಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಇಂಥ ಗೊಂದಲಗಳನ್ನು ಮಾಡಿಕೊಳ್ಳಲು ನಮಗೂ ಇಷ್ಟವಿಲ್ಲ. ಬಹುಶಃ ಚಿತ್ರದ ಕಥೆಗೆ ಸೂಕ್ತವೆನಿಸುವಂತ “ಕಸ್ತೂರಿ’ ಎಂದಷ್ಟೇ ಟೈಟಲ್ ಇಡುವ ಬಗ್ಗೆಯೂ ಯೋಚಿಸುತ್ತಿದ್ದೇವೆ’ ಎನ್ನುತ್ತಾರೆ.
ಇನ್ನು ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ ಇದಾಗಿದ್ದು, ಚಿತ್ರದಲ್ಲಿ ರಚಿತಾ ರಾಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿ ದ್ದಾರೆ. ಉಳಿದಂತೆ ಸ್ಕಂದ ಅಶೋಕ್, ಶ್ರುತಿ ಪ್ರಕಾಶ್ ಮುಂತಾ ದವರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಒಟ್ಟಾರೆ, ಡಾ. ರಾಜಕುಮಾರ್ ಅವರ ಜನಪ್ರಿಯ ಚಿತ್ರಗಳ ಹೆಸರುಗಳನ್ನು ಮರು ಬಳಕೆ ಮಾಡಬಾರದು ಮತ್ತು ಆ ಹೆಸರಿನ ಮೂಲ ಚಿತ್ರಕ್ಕೆ ಅಪಚಾರ ಎಸೆಗಬಾರದು ಎಂಬ ಮಾತುಗಳು ಚಿತ್ರರಂಗದಲ್ಲಿ ಬಲವಾಗಿ ಕೇಳಿಬರುತ್ತಿದ್ದಂತೆ, ಅದಕ್ಕೆ ಸ್ಪಂದಿಸಿರುವ ಚಿತ್ರತಂಡ “ಕಸ್ತೂರಿ ನಿವಾಸ’ ಟೈಟಲ್ ಬದಲಾಯಿಸಿ, ಆರಂಭದಲ್ಲಿಯೇ ಎದ್ದಿದ್ದ ಅಪಸ್ವರಕ್ಕೆ ಫುಲ್ ಸ್ಟಾಪ್ ಇಟ್ಟಿದೆ. ಸದ್ಯ ಮುಹೂರ್ತ ಆಚರಿಸಿಕೊಂಡು ಹೊಸಚಿತ್ರಕ್ಕೆ ಚಾಲನೆ ನೀಡಿರುವ ಚಿತ್ರತಂಡ, ಸೆಪ್ಟೆಂಬರ್ ಕೊನೆಯ ವಾರದಿಂದ ಶೂಟಿಂಗ್ ಪ್ರಾರಂಭಿಸುವ ಯೋಚನೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.