ನೀರಿನ ಸದ್ಬಳಕೆ; ವಾಲ್ಮಿಯಿಂದ ಆನ್‌ಲೈನ್ ತರಬೇತಿ
Team Udayavani, Aug 31, 2020, 3:35 PM IST
ಹುಬ್ಬಳ್ಳಿ: ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಕುರಿತು ರಾಜ್ಯದ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ವಾಲ್ಮಿಯಿಂದ ಆನ್ ಲೈನ್ ತರಬೇತಿ ನಡೆಯಿತು.
ರಾಜ್ಯದ ವಿವಿಧ ಕಡೆಯ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳು, ರೈತರು, ಜಲಸಂಪನ್ಮೂಲ ಇಲಾಖೆ ಇಂಜನಿಯರ್ ಗಳಿಗೆ ನೀರು ಸದ್ಬಳಕೆ, ಸಂಘಗಳ ಬಲವರ್ಧನೆ ಕುರಿತಾಗಿ ಧಾರವಾಡದ ವಾಲ್ಮಿಯಲ್ಲಿ ತರಬೇತಿ ನೀಡಲಾಗುತ್ತಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ತರಬೇತಿ ಸಾಧ್ಯವಾಗದ್ದರಿಂದ ವಾಲಿ¾ ಆನ್‌ಲೈನ್ ತರಬೇತಿಯ ಪ್ರಾಯೋಗಿಕ ಯತ್ನವನ್ನು ಕೈಗೊಂಡಿತು.
ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಆನ್‌ಲೈನ್ ತರಬೇತಿಗೆ ಚಾಲನೆ ನೀಡಿದರು. ಕಾಡಾ ನಿರ್ದೇಶಕ ಬಿ.ಜಿ. ಗುರುಪಾದಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ವಿವಿಧ ಕಡೆಯ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳು ಆನ್ ಲೈನ್ ಮೂಲಕ ತರಬೇತಿ ಮಾಹಿತಿ ಪಡೆದರು. ವಾಲ್ಮಿ ಅಧಿಕಾರಿಗಳು ಸಂಘಗಳ ಪದಾಧಿಕಾರಿಗಳು, ರೈತರಿಗೆ ಆನ್‌ಲೈನ್ ತರಬೇತಿಯಲ್ಲಿ ಪಾಲ್ಗೊಳ್ಳುವಿಕೆ ಹೇಗೆ, ಮೊಬೈಲ್‌ಗಳ ಬಳಕೆ ಇತ್ಯಾದಿ ಕುರಿತಾಗಿ ಅಗತ್ಯ ಮಾಹಿತಿ ನೀಡಿ ತಯಾರುಗೊಳಿಸಿದ್ದರು.
ವಾಲ್ಮಿ ಅಧಿಕಾರಿಗಳಾದ ಬಸವರಾಜ ಬಂಡಿವಡ್ಡರ, ಸುರೇಶ ಕುಲಕರ್ಣಿ ವಿಷಯ ಮಂಡಿಸಿದರು. ಕಾಡಾ ಅಧಿಕಾರಿ ಬಾಲರೆಡ್ಡಿ, ಮಹಾದೇವಗೌಡ, ನಾಗರತ್ನ, ಮಲಪ್ರಭಾ ಮಹಾಮಂಡಳದ ಶ್ರೀ ದಮ್ಮಾಳಿ ಸೇರಿದಂತೆ 30ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಪ್ರದೀಪ ದೇವರಮನಿ ಕಾರ್ಯಕ್ರಮ ಸಂಯೋಜಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.