ಉತ್ತಮ ಮಳೆ: ಸಮೃದ್ಧ ಬೆಳೆ ನಿರೀಕ್ಷೆ
Team Udayavani, Aug 31, 2020, 7:08 PM IST
ಸಾಂದರ್ಭಿಕ ಚಿತ್ರ
ಹೊನ್ನಾಳಿ: ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಆಗಿರುವುದರಿಂದ ಬಿತ್ತಿದ ಬೆಳೆ ಸಮೃದ್ಧವಾಗಿ ಬೆಳೆದಿದೆ. ಈಗ ಕಾಳು ಕಟ್ಟುವ ಸಮಯವಾಗಿದ್ದು, ರೈತರಲ್ಲಿ ಹರ್ಷ ಮೂಡಿದೆ.
ತಾಲೂಕಿನ ಬಹುತೇಕ ರೈತರು ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಇನ್ನುಳಿದಂತೆ ಹತ್ತಿ, ಶೇಂಗಾ, ರಾಗಿ, ನವಣೆ, ತೊಗರಿ, ಹೆಸರು, ಅಲಸಂದೆ, ಸೂರ್ಯಕಾಂತಿ ಮತ್ತಿತರ ಬೆಳೆಗಳನ್ನೂ ಬಿತ್ತನೆ ಮಾಡಿದ್ದಾರೆ. ಹಿರೇಗೋಣಿಗೆರೆ, ಕೋಣನತಲೆ, ಬೇಲಿ ಮಲ್ಲೂರು, ಕೋಟೆಮಲ್ಲೂರು ಮತ್ತಿತರ ಗ್ರಾಮಗಳ ಹೊಲಗಳಲ್ಲಿ ತಡವಾಗಿ ಮೆಕ್ಕೆಜೋಳದ ಬೆಳೆ ಬಿತ್ತನೆ ಮಾಡಿರುವ ಕಾರಣಕ್ಕೆ ಫಾಲ್ ಆರ್ಮಿ ವರ್ಮ್ ಎಂಬ ಕೀಟದ ಬಾಧೆ ಕಂಡುಬಂದಿದೆ. ಕೃಷಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಕೀಟ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ತುಂಗಾ ಎಡ ದಂಡೆ ನಾಲೆ ಮತ್ತು ಭದ್ರಾ ನಾಲೆಗಳ ನೀರನ್ನು ಅವಲಂಬಿಸಿ ತಾಲೂಕಿನಲ್ಲಿ ಅನೇಕ ರೈತರು ಭತ್ತ ನಾಟಿ ಮಾಡಿದ್ದಾರೆ.
ಅಲ್ಲದೆ ಈ ಬಾರಿ ತುಂಗಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ನಾಲೆಯ ಕೊನೆಯ ಭಾಗದ ಗದ್ದೆಗಳಿಗೂ ನೀರು ಸರಾಗವಾಗಿ ಹರಿಯುತ್ತಿದೆ. ಭದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ: ಉತ್ತಮ ಮುಂಗಾರು ಮಳೆಯ ಕಾರಣ ಭದ್ರಾ ಜಲಾಶಯ ಭರ್ತಿಯಾಗಲು ಮೂರು ಅಡಿ ಮಾತ್ರ ನೀರು ಬರಬೇಕಿದೆ. ಇದರಿಂದಾಗಿ ಈ ಜಲಾಶಯವನ್ನು ನಂಬಿರುವ ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಕಾಡಾ ಈಗಾಗಲೇ ಭದ್ರಾ ನಾಲೆಗಳಿಗೆ ನೀರು ಹರಿಸಲು ಪ್ರಾರಂಭಿಸಿದ್ದು, ಭದ್ರಾ ನಾಲೆ ವ್ಯಾಪ್ತಿಯ ರೈತರು ಕೂಡ ಭತ್ತ ನಾಟಿಯನ್ನು ಪೂರೈಸಿದ್ದಾರೆ. ಭದ್ರಾ ಜಲಾಶಯದಲ್ಲಿ 183 ಅಡಿಗಳಷ್ಟು ನೀರು ಸಂಗ್ರಹವಾಗಿ ರುವುದ ರಿಂದ ಈ ಬಾರಿಯ ಬೇಸಿಗೆ ಭತ್ತದ ಬೆಳೆಗೂ ತೊಂದರೆಯಿಲ್ಲ. ಅಂತೂ ಈ ಬಾರಿ ಮುಂ ಗಾರು ಮಳೆ ರೈತರ ಕೈ ಹಿಡಿದಿದ್ದು, ಮುಂದಿನ ದಿನಗಳಲ್ಲೂ ಇದೇ ರೀತಿ ಸಕಾಲಕ್ಕೆ ಮಳೆ ಸುರಿಯಲಿ ಎಂಬುದು ಅನ್ನದಾತರ ಆಶಯ.
ಬೆಳೆ ಬಿತ್ತನೆ ಮಾಡಿರುವ ಜಮೀನುಗಳಲ್ಲಿ ಫಾಲ್ ಆರ್ಮಿ ವರ್ಮ್ ಎಂಬ ಕೀಟದ ಬಾಧೆ ಕಂಡು ಬಂದಿದೆ. ರೈತರು ನಿರ್ಲಕ್ಷé ಮಾಡದೆ ತಕ್ಷಣ ಸಮೀಪದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಕೀಟ ಬಾಧೆ ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕು. –ಸಿ.ಟಿ. ಸುರೇಶ್, ಸಹಾಯಕ ಕೃಷಿ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.