ರಕ್ಷಾ ಸಾವು ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಮೊಂಬತ್ತಿ ಪ್ರತಿಭಟನೆ
Team Udayavani, Aug 31, 2020, 10:55 PM IST
ಕಾಪು: ಕಾಪುವಿನ ಗೃಹಿಣಿ ರಕ್ಷಾ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಕುರಿತಾಗಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಮೊಂಬತ್ತಿ ಪ್ರತಿಭಟನೆ ಇಂದು ನಡೆಯಿತು.
ತುಳುನಾಡ ಹಿಂದೂ ಸೇನೆಯ ಆಶ್ರಯದಲ್ಲಿ ಕಾಪು ಪೇಟಯಲ್ಲಿ ಸೋಮವಾರ ಸಾಯಂಕಾಲ ಈ ಪ್ರತಿಭಟನಾ ಸಭೆ ನಡೆಯಿತು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಎಸ್.ಸಿ.ಡಿ..ಸಿ.ಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ ಶೆಟ್ಟಿ, ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಮ್ ಕಾಪು, ತುಳುನಾಡ ಹಿಂದೂ ಸೇನೆಯ ಅಧ್ಯಕ್ಷ ನಿತಿನ್ ಕಾಪು, ಕಾರ್ಯದರ್ಶಿ ಯಾದವ ಪೂಜಾರಿ, ಚಿತ್ತನ್ ಮೂಳೂರು, ಶಿವಪ್ರಸಾದ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಕ್ಷಾ ಅವರ ಸಾವಿನ ತನಿಖೆಯು ಉನ್ನತ ಮಟ್ಟದಲ್ಲಿ ಆಗಲಿ ಎಂಬ ಆಗ್ರಹದೊಂದಿಗೆ ಮೊಂಬತ್ತಿ ಉರಿಸಿ, ಪ್ರಾರ್ಥನೆ ನಡೆಸಿದ ಪ್ರತಿಭಟನಾಕಾರರು ಈ ಗೃಹಿಣಿಯ ಸಾವಿಗೆ ನ್ಯಾಯ ಸಿಗುವಂತೆ ಮತ್ತು ಅವರ ಆತ್ಮಕ್ಕೆ ಚಿರಶಾಂತಿಯನ್ನು ಪ್ರಾರ್ಥಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.