ಪಾಕ್‌ಗೆ ರಹಸ್ಯ ಮಾಹಿತಿ ರವಾನೆ: ಐಎಸ್‌ಐ ಏಜೆಂಟ್ ಬಂಧನ
ಐಎಸ್‌ಐ ಹ್ಯಾಂಡ್ಲರ್‌ಗಳೊಂದಿಗೆ ನಂಟು ಹೊಂದಿದ್ದ ಮತ್ತು 2 ಬಾರಿ ಪಾಕ್‌ಗೆ ಭೇಟಿ ನೀಡಿದ್ದ.
Team Udayavani, Sep 1, 2020, 9:35 AM IST
ಅಹಮದಾಬಾದ್: ಗುಜರಾತ್‌ನ ಪಶ್ಚಿಮ ಕಛ್ ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಸೋಮವಾರ ಪಾಕ್ ಐಎಸ್‌ಐ ಏಜೆಂಟ್‌ವೊಬ್ಬನನ್ನು ಬಂಧಿಸಿದೆ. ಮುಂದ್ರಾ ಡಾಕ್‌ಯಾರ್ಡ್ ನಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ರಜಾಕ್‌ಭಾಯಿ ಕಂಭಾರ್ ಎಂಬಾತನೇ ಬಂಧಿತ ಐಎಸ್‌ಐ ಏಜೆಂಟ್ ಎಂದು ಹೇಳಲಾಗಿದೆ.
ಉತ್ತರಪ್ರದೇಶದಲ್ಲಿ ಜ.19ರಂದು ದಾಖಲಾದ ಪ್ರಕರಣ ಸಂಬಂಧ ಈತನನ್ನು ಬಂಧಿಸಲಾಗಿದೆ. ಈ ಹಿಂದೆಯೇ ಬಂಧಿತ ನಾಗಿದ್ದ ಮೊಹಮ್ಮದ್ ರಶೀದ್ ಎಂಬಾತ ಐಎಸ್‌ಐ ಹ್ಯಾಂಡ್ಲರ್‌ಗಳೊಂದಿಗೆ ನಂಟು ಹೊಂದಿದ್ದ ಮತ್ತು 2 ಬಾರಿ ಪಾಕ್‌ಗೆ ಭೇಟಿ ನೀಡಿದ್ದ. ಭಾರತದಲ್ಲಿರುವ ಸೂಕ್ಷ¾ವಾಗಿರುವ ಪ್ರದೇಶಗಳ ಫೋಟೋಗಳನ್ನು ಮತ್ತು ಸಶಸ್ತ್ರ ಪಡೆಗಳ ಚಲನವಲನಗಳ ಮಾಹಿತಿಯನ್ನು ಐಎಸ್‌ಐ ಹ್ಯಾಂಡ್ಲರ್‌ಗಳಿಗೆ ರವಾನಿಸಿದ್ದ.
ಈ ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಿದಾಗ ರಶೀದ್‌ಗೂ ಸೋಮವಾರ ಬಂಧಿತನಾದ ಕಂಭಾರ್‌ಗೂ ನಂಟಿರು ವುದು ತಿಳಿದುಬಂದಿತ್ತು. ಐಎಸ್‌ಐ ಏಜೆಂಟ್ ಆಗಿ ಕೆಲ ಸ ಮಾಡುತ್ತಿದ್ದ ಕಂಭಾರ್ ಪೇಟಿಎಂ ಮೂಲಕ 5 ಸಾವಿರ ರೂ.ಗಳನ್ನು ರಿಜ್ವಾನ್ ಎಂಬಾತನಿಗೆ ವರ್ಗಾಯಿಸಿದ್ದ.
ರಿಜ್ವಾನ್ ಅದನ್ನು ಪ್ರಮುಖ ಆರೋಪಿ ರಶೀದ್ ಖಾತೆಗೆ ಹಾಕಿದ್ದ. ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಗಳನ್ನು ನೀಡಿದ್ದಕ್ಕೆ ಪ್ರತಿಯಾಗಿ ಈ ಮೊತ್ತವನ್ನು ಪಾವತಿಸಲಾಗಿತ್ತು ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.