ಕಾವಡಿ: ಪ್ರಕೃತಿ ವಂದನಾ ಕಾರ್ಯಕ್ರಮ
Team Udayavani, Sep 1, 2020, 7:05 PM IST
ಶೃಂಗೇರಿ: ಇಂದಿನ ಪೀಳಿಗೆ ಪರಿಸರ ಸಂರಕ್ಷಿಸುವ ಹಾಗೂ ಪೋಷಿಸುವತ್ತ ಗಮನ ಹರಿಸಬೇಕು ಎಂದು ಕೃಷಿಕ ಹೆಗ್ಗದ್ದೆ ನಂಜುಂಡ ಭಟ್ಟ ಹೇಳಿದರು.
ಅಡ್ಡಗದ್ದೆ ಗ್ರಾಪಂನ ಕಾವಡಿ ಗ್ರಾಮದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಪರಿಸರದಲ್ಲಿ ಸೋಮವಾರ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಪ್ರತಿಷ್ಠಾನ, ಆರೆಸ್ಸೆಸ್ ವತಿಯಿಂದ ಏರ್ಪಡಿಸಿದ್ದ ಪ್ರಕೃತಿ ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮ ಪೂರ್ವಜರು ಪರಿಸರ ಉಳಿಸಲು ಮೊದಲ ಆದ್ಯತೆ ನೀಡುತ್ತಿದ್ದರು. ಇಂದು ನಾವು ಪ್ರಕೃತಿಯನ್ನು ಬಳಸುತ್ತಿದ್ದೇವೆ ಹೊರತು ಇದನ್ನು ಉಳಿಸಲು ಗಮನ ಹರಿಸುತ್ತಿಲ್ಲ.ನಾಗರ ಪಂಚಮಿ, ಗೋಪೂಜಾ,ತುಳಸಿ ಹಬ್ಬದಂತಹ ಹಿಂದೂ ಹಬ್ಬದ ಆಚರಣೆಗಳು ಪರಿಸರ ಸಂರಕ್ಷಣೆಗೆ ಪೂರಕವಾಗಿವೆ ಎಂದರು.
ಜ್ಞಾನಭಾರತೀ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶಂಕರನಾರಾಯಣ ಮಾತನಾಡಿ,ಪರಿಸರ ಮತ್ತು ಪ್ರಾಣಿಗಳ ರಕ್ಷಣೆ ಬಗ್ಗೆ ನಮ್ಮ ಪ್ರಾಚೀನ ಮೌಲ್ಯವನ್ನು ಸಮಾಜಕ್ಕೆ ನೆನಪಿಸುವುದು, ಮನುಷ್ಯ ತನ್ನ ದಿನ ನಿತ್ಯದ ಜೀವನದಲ್ಲಿ ಪಂಚಭೂತಗಳಾದ ಪೃಥ್ವಿ, ಜಲ,ಅಗ್ನಿ, ವಾಯು ಮತ್ತು ಆಕಾಶದ ರಕ್ಷಣೆ ವಂದನಾ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ವೃಕ್ಷಕ್ಕೆ ತಿಲಕವಿಟ್ಟು, ಅಕ್ಷತೆ ಹಾಕಿ ಪವಿತ್ರ ದಾರ ಕಟ್ಟಿದರು. ಕೆಲವಳ್ಳಿ ನೂತನ್, ರಮೇಶ್ ಭಟ್, ಪ್ರದೀಪ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.