‘ದೇಶದ ಪ್ರಜ್ವಲಿತ ರತ್ನಗಳಲ್ಲಿ ಒಬ್ಬರು’ – ಪ್ರಣಬ್ ದಾದಾಗೆ ಅಮುಲ್ ಶ್ರದ್ಧಾಂಜಲಿ
Team Udayavani, Sep 1, 2020, 7:42 PM IST
ಹೊಸದಿಲ್ಲಿ: ಸೋಮವಾರ ನಿಧನ ಹೊಂದಿದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜೀ ರಾಷ್ಟ್ರಪತಿ ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ಅಂತ್ಯಕ್ರಿಯೆ ಇಂದು ನಡೆದಿದೆ.
ಇತ್ತ ಪ್ರಣಬ್ ದಾ ಅವರ ನಿಧನಕ್ಕೆ ರಾಜಕೀಯ ರಂಗ ಮಾತ್ರವಲ್ಲದೇ ಎಲ್ಲಾ ರಂಗಗಳ ಗಣ್ಯರು ಮತ್ತು ಇತರರು ಕಂಬನಿ ಮಿಡಿದಿದ್ದಾರೆ.
ಭಾರತೀಯ ರಾಜಕೀಯ ಇತಿಹಾಸದ ಒಂದು ಬಹುದೊಡ್ಡ ಭಾಗವಾಗಿ ಪ್ರಣಬ್ ಅವರು ತಮ್ಮ ಛಾಪನ್ನು ಉಳಿಸಿ ಹೋಗಿದ್ದಾರೆ.
ಇತ್ತ ಪ್ರಣಬ್ ಅವರ ನಿಧನಕ್ಕೆ ದೇಶದ ಅತೀ ದೊಡ್ಡ ಡೈರಿ ಸಂಸ್ಥೆ ಅಮುಲ್ ವಿಭಿನ್ನವಾಗಿ ಕಂಬನಿ ಮಿಡಿದಿದೆ.
ತನ್ನ ಅಧಿಕೃತ ಇನ್ ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ಖಾತೆಗಳಲ್ಲಿ ಈ ಕರಿತಾದ ಫೊಟೋ ಒಂದನ್ನು ಪ್ರಕಟಿಸಿರುವ ಅಮುಲ್, ಅಗಲಿದ ಹಿರಿಯ ರಾಜಕಾರಣಿಗೆ ಗೌರವಯುತ ಅಂತಿಮ ನಮನವನ್ನು ಸಲ್ಲಿಸಿದೆ.
#Amul Topical: Tribute to a great politician, President and a statesman. pic.twitter.com/Aprtog3jbA
— Amul.coop (@Amul_Coop) September 1, 2020
ಅಮುಲ್ ಇಂದು ಪೋಸ್ಟ್ ಮಾಡಿರುವ ಈ ಫೊಟೋದಲ್ಲಿ ಪ್ರಣಬ್ ಅವರು ನಿಭಾಯಿಸಿದ ಮೂರು ಪ್ರಮುಖ ಹುದ್ದೆಗಳ ರೇಖಾ ಚಿತ್ರವನ್ನು ಬಿಡಿಸಲಾಗಿದ್ದು, ಹಿನ್ನಲೆಯಲ್ಲಿ ಸಂಸತ್ ಭವನ ಮತ್ತು ‘ಭಾರತ ರತ್ನ’ದ ಚಿತ್ರವಿದೆ . ಮತ್ತು ‘ಭಾರತ ಪ್ರಜ್ವಲಿತ ರತ್ನಗಳಲ್ಲಿ ಒಬ್ಬರಾದ ನಿಮಗೆ ವಿದಾಯ..’ ಎಂದು ಬರೆಯಲಾಗಿದೆ. ಮತ್ತು ಕೆಳಗೆ ‘ಪ್ರಣಬ್ ಮುಖರ್ಜಿ 1935 – 2020’ ಎಂದು ಬರೆದು ಈ ಮಹಾನ್ ನಾಯಕನಿಗೆ ಭಾವಪೂರ್ಣ ಅಂತಿಮ ನಮನವನ್ನು ಸಲ್ಲಿಸಲಾಗಿದೆ.
ಅಮುಲ್ ತನ್ನ ಅಧಿಕೃತ ತಾಣಗಳಲ್ಲಿ ಇದನ್ನು ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಇದಕ್ಕೆ ಪುರಕವಾಗಿ ಸ್ಪಂದಿಸಿ ತಮ್ಮ ಶ್ರದ್ಧಾಂಜಲಿ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಈ ಪೋಸ್ಟ್ 8000+ ಲೈಕ್ಸ್ ಗಳನ್ನು ಪಡೆದುಕೊಂಡಿದ್ದು 924 ಬಾರಿ ರಿಟ್ವೀಟ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.