ಕೋವಿಡ್ ಕಳವಳ- ಸೆ.01: 9058 ಹೊಸ ಪ್ರಕರಣ ; 5159 ಡಿಸ್ಚಾರ್ಜ್ ; 135 ಸಾವು

03 ಲಕ್ಷಕ್ಕೇರಿತು ಒಟ್ಟು ಪ್ರಕರಣಗಳ ಸಂಖ್ಯೆ ; 2.5 ಲಕ್ಷ ಸೋಂಕಿತರು ಚೇತರಿಕೆ ; ರಾಜ್ಯದಲ್ಲಿ ಇನ್ನು ಎಷ್ಟಿವೆ ಗೊತ್ತ Covid 19 Active Cases?

Team Udayavani, Sep 1, 2020, 8:12 PM IST

ಕೋವಿಡ್ ಕಳವಳ- ಸೆ.01: 9058 ಹೊಸ ಪ್ರಕರಣ ; 5159 ಡಿಸ್ಚಾರ್ಜ್ ; 135 ಸಾವು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬೆಂಗಳೂರು: ಸೋಮವಾರ ಸಾಯಂಕಾಲದಿಂದ ಮಂಗಳವಾರ ಸಾಯಂಕಾಲದವರೆಗಿನ ಕೋವಿಡ್ 19 ಸೋಂಕು ಪ್ರಕರಣಗಳ ವರದಿಯ ಪ್ರಕಾರ, ಈ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 9058 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ.

ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 5159 ಸೋಂಕಿತರು ಗುಣಮುಖರಾಗಿದ್ದಾರೆ. ಮತ್ತು ಈ ಅವಧಿಯಲ್ಲಿ 135 ಸೋಂಕಿತರು ಮೃತಪಟ್ಟಿದ್ದಾರೆ.

ಇದೀಗ ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ ಮೂರುವರೆ ಲಕ್ಷಕ್ಕೇರಿದೆ. ನಮ್ಮಲ್ಲಿ ಸದ್ಯಕ್ಕೆ ಒಟ್ಟು 3,51,481 ಸೋಂಕು ಪ್ರಕರಣಗಳು ದಾಖಲಾಗಿವೆ. ಈ ನಡುವೆ ಸೋಂಕಿತರ ಚೇತರಿಕೆ ಸಂಖ್ಯೆಯೂ 2.5ಲಕ್ಷಕ್ಕೆ ತಲುಪಿರುವುದು ಆಶಾದಾಯಕ ವಿಷಯವಾಗಿದೆ. ರಾಜ್ಯದಲ್ಲಿ ಇದೀಗ ಒಟ್ಟು 2,54,626 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕೇರುವ ಸಾಧ್ಯತೆಗಳು ಕಳವಳ ಮೂಡಿಸಿವೆ. ನಮ್ಮಲ್ಲಿ ಇದೀಗ ಒಟ್ಟು 90,999 ಸಕ್ರಿಯ ಸೋಂಕು ಪ್ರಕರಣಗಳಿವೆ.

ಹಾಗೂ ರಾಜ್ಯದಲ್ಲಿ ಕೋವಿಡ್ 19 ಸೊಂಕು ಸಂಬಂಧಿ ಒಟ್ಟು 5837 ಸಾವಿನ ಪ್ರಕರಣಗಳು ದಾಖಲಾಗಿವೆ ಹಾಗೂ 19 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 762 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಈ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 2967 ಕೋವಿಡ್ 19 ಸೊಂಕು ಪ್ರಕರಣಗಳು ವರದಿಯಾಗುವ ಮೂಲಕ ಸೋಂಕು ಪ್ರಕರಣಗಳಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

ಇನ್ನುಳಿದಂತೆ, ಮೈಸೂರು (737), ಬಳ್ಳಾರಿ (393), ದಾವಣಗೆರೆ (289), ಹಾಸನ (461), ಶಿವಮೊಗ್ಗ (233), ಬೆಳಗಾವಿ (316), ದಕ್ಷಿಣ ಕನ್ನಡ (352), ರಾಯಚೂರು (245), ಧಾರವಾಡ (199), ಕಲಬುರಗಿ (220), ಚಿಕ್ಕಮಗಳೂರು (210), ಉಡುಪಿ (161), ಮಂಡ್ಯ (197), ಚಿತ್ರದುರ್ಗ (164), ಉತ್ತರ ಕನ್ನಡ (114), ಕೊಪ್ಪಳ (195), ತುಮಕೂರು (327), ವಿಜಯಪುರ (67), ಬಾಗಲಕೋಟೆ (136), ಹಾವೇರಿ (153), ಗದಗ (194), ಬೆಂಗಳೂರು ಗ್ರಾಮಾಂತರ (145), ಚಿಕ್ಕಬಳ್ಳಾಪುರ (106), ಕೋಲಾರ (64), ರಾಮನಗರ (105), ಯಾದಗಿರಿ (142), ಬೀದರ್ (63), ಚಾಮರಾಜನಗರ (49) ಮತ್ತು ಕೊಡಗು (54) ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಇಂದು ಮೂರಂಕಿ ಹಾಗೂ ಎರಡಂಕಿಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಇಂದು ರಾಜ್ಯದಲ್ಲಿ ಒಟ್ಟು 51,987 Rapid ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ ಹಾಗೂ RT PCR ಮತ್ತು ಇನ್ನಿತರೇ ವಿಧಾನಗಳ ಮೂಲಕ 31,686 ಸೋಂಕು ಪತ್ತೆ ಪರೀಕ್ಷೆಗಳನ್ನು ಈ ಅವಧಿಯಲ್ಲಿ ನಡೆಸಲಾಗಿದೆ. ಈ ಮೂಲಕ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು 83,670 ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ.

ರಾಜ್ಯದಲ್ಲಿ ಇದುವರೆಗೆ ಒಟ್ಟು 8,92,942 Rapid ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ. ಇದನ್ನು ಹೊರತಾಗಿಸಿ ರಾಜ್ಯಾದ್ಯಂತ 20,86,535 ಜನರಿಗೆ RT PCR ಮತ್ತು ಇನ್ನಿತರೇ ವಿಧಾನಗಳ ಮೂಲಕ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ. ಮತ್ತು ಈ ಎಲ್ಲಾ ವಿಧಾನಗಳ ಮೂಲಕ ರಾಜ್ಯದಲ್ಲಿ ಇಂದಿನವರೆಗೆ ಒಟ್ಟು 29,79,477 ಜನರಿಗೆ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ.

ಟಾಪ್ ನ್ಯೂಸ್

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.