![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Sep 2, 2020, 6:17 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಕೋವಿಡ್-19 ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಆದಾಯದಲ್ಲಿ ಭಾರೀ ಇಳಿಕೆ ಆಗಿದೆ.
ಕಳೆದ ಆರ್ಥಿಕ ವರ್ಷದ ಮೊದಲ ಐದು ತಿಂಗಳಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಎಪ್ರಿಲ್‌ನಿಂದ ಆಗಸ್ಟ್‌ವರೆಗೆ ಒಟ್ಟು 1,551 ಕೋಟಿ ರೂ. ತೆರಿಗೆ ಆದಾಯ ಕಡಿತವಾಗಿದೆ.
ಕಳೆದ 2019-20ನೇ ಸಾಲಿನಲ್ಲಿ ಎಪ್ರಿಲ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಒಟ್ಟು 9,131 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು.
ಆದರೆ ಪ್ರಸಕ್ತ ವರ್ಷದಲ್ಲಿ ಎಪ್ರಿಲ್‌ನಲ್ಲಿ ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು.
ಆ ಬಳಿಕ ಎಂ.ಆರ್.ಪಿ. ದರದಲ್ಲಿ ಮದ್ಯ ಮಾರಾಟಕ್ಕಷ್ಟೇ ಅನುಮತಿ ನೀಡಲಾಗಿತ್ತು. ಆ ಬಳಿಕ ಮದ್ಯ ಮಾರಾಟ ಚೇತರಿಕೆಯಾಗಿ ಆದಾಯ ಸಂಗ್ರಹ ಪ್ರಮಾಣವೂ ವೃದ್ಧಿಸಲಾರಂಭಿಸಿತು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಜೂನ್‌ನಿಂದ ಅಬಕಾರಿ ತೆರಿಗೆ ಆದಾಯ ಪ್ರಮಾಣ ಹೆಚ್ಚಾಗುತ್ತಿದೆ. ಜೂನ್ ಮಾತ್ರವಲ್ಲದೆ, ಜುಲೈ, ಆಗಸ್ಟ್‌ನಲ್ಲೂ ಕ್ರಮವಾಗಿ ಹಿಂದಿನ ವರ್ಷಕ್ಕಿಂತಲೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಇದೀಗ ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಪಬ್, ತಾರಾ ಹೊಟೇಲ್ ಸೇರಿದಂತೆ ಇತರ ಅಬಕಾರಿ ಸನ್ನದುಗಳಲ್ಲಿ ಮದ್ಯ ಪೂರೈಕೆ ಎಂದಿನಂತೆ ಆರಂಭವಾಗಿರುವುದರಿಂದ ಮುಂದಿನ ತಿಂಗಳಲ್ಲೂ ತೆರಿಗೆ ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಗುರಿ ಸಾಧನೆ ಸವಾಲು
ಪ್ರಸಕ್ತ ವರ್ಷದಲ್ಲಿ 22,700 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹ ಗುರಿ ಇದೆ. ಆದರೆ ಐದು ತಿಂಗಳಲ್ಲಿ ಸಂಗ್ರಹವಾಗಿರುವುದು 7,580 ಕೋಟಿ ರೂ. ಮಾತ್ರ. ಉಳಿದ ಏಳು ತಿಂಗಳಲ್ಲಿ ಸುಮಾರು 15,120 ಕೋಟಿ ರೂ. ಆದಾಯ ಸಂಗ್ರಹ ಸವಾಲಾಗಲಿದ್ದು, ಕೋವಿಡ್ ಸಂದರ್ಭದಲ್ಲಿ ಗುರಿ ತಲುಪುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.