ಅಧಿಕಾರಿಗಳ ನಿರ್ಲಕ್ಷ್ಯ : ಮಗಳ ವಿದ್ಯಾಭ್ಯಾಸದ ದಾಖಲೆಗಾಗಿ ಮಳೆಯಲ್ಲೇ ತಂದೆಯ ಪ್ರತಿಭಟನೆ
Team Udayavani, Sep 3, 2020, 12:29 PM IST
ಮುಳಬಾಗಿಲು: ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಗಳ ಬಿಎಸ್‌ಸಿ ಕೃಷಿ ವ್ಯಾಸಂಗಕ್ಕೆ ಅಗತ್ಯ ವ್ಯವಸಾಯಗಾರರ ಪತ್ರ ಸಿಗದೆ ಶಿಕ್ಷಣದಿಂದ ವಂಚಿತಗೊಂಡಿದ್ದು, ಮನನೊಂದ ತಂದೆಯೊಬ್ಬ ಕಣ್ಣೀರು ಹಾಕುತ್ತ, ಮಳೆಯಲ್ಲಿಯೇ ವಿಷ ಸೇವಿಸುವುದಾಗಿ ಪ್ರತಿಭಟನೆ ನಡೆಸಿದ ದಾರುಣ ಘಟನೆ ನಗರದಲ್ಲಿ ನಡೆಯಿತು.
ನಗರದ ಮುತ್ಯಾಲಪೇಟೆ ಸ್ಟಾಂಪ್ ವೆಂಡರ್ ವೆಂಕಟಾಚಲಪತಿ ತನ್ನ ಪುತ್ರಿ ಚಂದನಳನ್ನು ಬಿಎಸ್ಸಿ ಕೃಷಿ ವ್ಯಾಸಂಗಕ್ಕೆ ಕಳುಹಿಸಬೇಕೆಂದು ವ್ಯವಸಾಯಗಾರರ ಪತ್ರಕ್ಕಾಗಿ ವಂಶವೃಕ್ಷ ಮತ್ತು ವಾಸಸ್ಥಳ ಪತ್ರಕ್ಕಾಗಿ ಆ.13 ರಂದು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರತಿನಿತ್ಯ
ಕಚೇರಿಗೆ ಅಲೆದಾಡಿದರೂ ಕೊನೆಗೆ ಉಪತಹಶೀಲ್ದಾರ್ ನಾಗಮಣಿ ಗುರುತಿನ ಚೀಟಿ ಲಗತ್ತಿಸಿಲ್ಲವೆಂದು ಸಬೂಬು ನೀಡಿ ಅರ್ಜಿ ಸೆ.1 ರಂದು ರದ್ದುಗೊಳಿಸಿದ್ದಾರೆ.
ನಿಗದಿತ ಕಾಲಾವಧಿಯಲ್ಲಿ ದಾಖಲೆಗಳ ಸಿಗದೇ ತನ್ನ ಮಗಳ ಬಿಎಸ್‌ಸಿ ಕೃಷಿ ವ್ಯಾಸಂಗದ ಕನಸು ನುಚ್ಚುನೂರಾಗಿದೆ. ಇದರಿಂದ ಬೇಸತ್ತ ತಂದೆಯು ತಹಶೀಲ್ದಾರ್ ರಾಜಶೇಖರ್ ಬಳಿ ತನ್ನ ಮನದಾಳ ತೋಡಿಕೊಂಡಾಗ ಮತ್ತೂಂದು ಅರ್ಜಿ ಸಲ್ಲಿಸಿ ಇತರೇ ತಾಂತ್ರಿಕ ಶಿಕ್ಷಣಕ್ಕಾದರೂ (ಸಿಇಟಿಗೆ) ಅನು ಕೂಲವಾದೀ ತೆಂದು ತಿಳಿಸಿ ಕೂಡಲೇ ಅರ್ಜಿಯಾನು ಸಾರ ದಾಖಲೆ ನೀಡು ವಂತೆ ಸ್ವತಃ ತಹಶೀಲ್ದಾರ್ ಅವರೇ ಉಪ ತಹಶೀಲ್ದಾರ್‌ಗೆ
ಸೂಚಿಸಿದ್ದರು.ವಂಶವೃಕ್ಷ ಮತ್ತು ವಾಸಸ್ಥಳ ಪತ್ರ ನೀಡಲು ಒಪ್ಪದೇ ಹೋದಾಗ ವಿದ್ಯಾರ್ಥಿನಿಯ ತಂದೆ ಅಳುತ್ತ, ಜೋರು ಮಳೆಯಲ್ಲಿಯೇ ಪ್ರತಿಭಟನೆ ನಡೆಸಿದರು. ಮುಖಂಡರು ರೊಚ್ಚಿಗೆದ್ದಿದ್ದರಿಂದ ದಾಖಲೆ ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.