ಬಾಂದ್ರಾ – ಕುರ್ಲಾ ನಡುವೆ ಪ್ರಯಾಣ; ಯೂಲು ಇ- ಬೈಕ್ ಸೇವೆ ಆರಂಭ
ಪ್ರಸ್ತುತ ಬಾಂದ್ರಾ ರೈಲ್ವೇ ನಿಲ್ದಾಣ ಮತ್ತು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಸೇರಿ 9 ಒಂಬತ್ತು ಸ್ಥಳಗಳಲ್ಲಿ ಈ ಸೌಲಭ್ಯ
Team Udayavani, Sep 3, 2020, 1:56 PM IST
ಮುಂಬಯಿ ಸೆ. 2: ನವಿಮುಂಬಯಿಯಲ್ಲಿ ಯೂಲು ಇ-ಬೈಕ್‌ಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತ ಬಳಿಕ ಈಗ ಬಾಂದ್ರಾ ಮತ್ತು ಕುರ್ಲಾ ನಡುವೆಯ ಪ್ರಯಾಣಿಕರಿಗಾಗಿ ಮುಂಬಯಿ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ)ವು ಯುಲು ಇ- ಬೈಕ್ ಸೌಲಭ್ಯವನ್ನು ಪ್ರಾರಂಭಿಸಿದೆ.
ಸೋಮವಾರ ಎಂಎಂಆರ್‌ಡಿಎ ಆಯುಕ್ತ ಆರ್. ಎ. ರಾಜೀವ್ ಉಪಸ್ಥಿತಿಯಲ್ಲಿ ಈ ಸೌಲಭ್ಯವನ್ನು ಉದ್ಘಾಟಿಸಲಾಯಿತು. ಈ ವೇಳೆ ಮಾತನಾಡಿದ ಎಂಎಂಆರ್‌ಡಿಎ ಆಯುಕ್ತ ಆರ್. ಎ. ರಾಜೀವ್ ಅವರು, ಪ್ರತಿದಿನ ಸುಮಾರು ಮೂರು ಲಕ್ಷ ಪ್ರಯಾಣಿಕರು ಬಾಂದ್ರಾ ಮತ್ತು ಕುರ್ಲಾ ನಿಲ್ದಾಣಗಳಲ್ಲಿ
ಇಳಿಯುತ್ತಾರೆ. ಇವರಲ್ಲಿ ಸುಮಾರು ಶೇ.75 ಮಂದಿಯು ರಿಕ್ಷಾಗಳನ್ನು ಬಳಸಿಕೊಂಡು ಬಾಂದ್ರಾ-ಕುರ್ಲಾ ಸಂಕೀರ್ಣವನ್ನು ತಲುಪುತ್ತಾರೆ. ಅವರು ಈ ಬೈಕ್ ಸೌಲಭ್ಯದ ಲಾಭವನ್ನು ಪಡೆಯಬಹುದು ಎಂದಿದ್ದಾರೆ.
ಪ್ರಸ್ತುತ ಬಾಂದ್ರಾ ರೈಲ್ವೇ ನಿಲ್ದಾಣ ಮತ್ತು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಸೇರಿ 9 ಒಂಬತ್ತು ಸ್ಥಳಗಳಲ್ಲಿ ಈ ಸೌಲಭ್ಯಗಳನ್ನು ಪ್ರಾರಂಭಿಸಿದ್ದು, ಈವರೆಗೆ ಸುಮಾರು 100 ಇ-ಬೈಕ್‌ಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ 18 ಸ್ಥಳಗಳಲ್ಲಿ 500 ಇ-ಬೈಕ್‌ಗಳನ್ನು ಲಭ್ಯವಾಗುವಂತೆ ಮಾಡುವುದು ಇದರ
ಉದ್ದೇಶವಾಗಿದೆ.
ಪ್ರಸ್ತುತ ಕುರ್ಲಾ ರೈಲ್ವೇ ನಿಲ್ದಾಣದ ಬಳಿ ಇ-ಬೈಕ್ ನಿಲ್ದಾಣವಿಲ್ಲದಿದ್ದರೂ ಮುನ್ಸಿಪಲ್ ಕಾರ್ಪೊರೇಷನ್ ವತಿಯಿಂದ ಅಂತಹ ನಿಲ್ದಾಣವನ್ನು ಶೀಘ್ರದಲ್ಲೇ ನಿರ್ಮಿಸಲಾಗುವುದು. ಈ ಸೌಲಭ್ಯವು ಅಪ್ಲಿಕೇಶನ್ ಆಧಾರಿತವಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.