ಕುದುರೆಮುಖ ಉದ್ಯಾನವನಕ್ಕೆ ಸಿಬಂದಿ ಕೊರತೆ ಬೇಗುದಿ!
ಒಟ್ಟು 24 ಸಿಬಂದಿ ಕೊರತೆ; ನಿರ್ವಹಣೆ ಕಷ್ಟ
Team Udayavani, Sep 4, 2020, 5:33 AM IST
ಕಾರ್ಕಳ: ವಿಸ್ತೀರ್ಣದಲ್ಲಿ 600 ಚದರ ಕಿ.ಮೀ. ವಿಸ್ತಾರ ಹೊಂದಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ದಟ್ಟ ಕಾಡು, ಅಳಿವಿನಂಚಿನ ಜೀವಿಗಳಿಗೆ ಹೆಸರಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೂ ಇಲ್ಲಿಗೆ ಬರುತ್ತಾರೆ. ಈ ವೈವಿಧ್ಯಮಯ ಉದ್ಯಾನವನದ ಸಂರಕ್ಷಣೆ ನಿಯಂತ್ರಣವೇ ಈಗ ಇಲಾಖೆಗೆ ದೊಡ್ಡ ಸವಾಲಾಗಿದೆ.
ವ್ಯಾಪ್ತಿ ದೊಡ್ಡದು: ಕಡಿಮೆ ಸಿಬಂದಿ
ಉದ್ಯಾನವನ ವ್ಯಾಪ್ತಿಯ ರಸ್ತೆ, ಚಾರಣಿಗರ ನಿಯಂತ್ರಣದೊಂದಿಗೆ ಉದ್ಯಾನವನ ಸಂರಕ್ಷಣೆ, ಬೇಟೆಗಾರರ ಪತ್ತೆ, ತಪಾಸಣೆ ಇತ್ಯಾದಿಗಳಿಗೆ ಸಾಕಷ್ಟು ಸಂಖ್ಯೆಯ ಸಿಬಂದಿಯಿಲ್ಲ. ಲೆಕ್ಕ ಪ್ರಕಾರ ಪ್ರತಿ 10 ಚ.ಕಿ.ಮೀ ಪ್ರದೇಶಕ್ಕೆ ಒಬ್ಬ ಸಿಬಂದಿ ಇರಬೇಕು. ಆದರಿಲ್ಲಿ 30.40 ಚ.ಕಿ.ಮೀ. ಒಬ್ಬರಂತೆ ಸಿಬಂದಿ ಇದ್ದಾರೆ. 60 ಹುದ್ದೆಗಳ ಪೈಕಿ 24 ಹುದ್ದೆಗಳು ಖಾಲಿಯಿವೆೆ. ಸಿಬಂದಿ ಕಡಿಮೆ ಇರುವುದರಿಂದ ಕೆಲಸ ಹೊರೆಯಾಗುತ್ತಿದೆ. ಇದಕ್ಕಾಗಿ ಎರವಲು ಪಡೆದು ನಿಭಾಯಿಸಬೇಕಿದೆ.
ಕುದುರೆಮುಖ ದ.ಕ. ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಕೆರೆಕಟ್ಟೆ, ಕಾರ್ಕಳ, ಕುದುರೆಮುಖ, ಬೆಳ್ತಂಗಡಿ ಎಂದು ನಾಲ್ಕು ವಿಭಾಗಗಳಿದ್ದು 3 ಕಡೆ ಚೆಕ್‌ಪೋಸ್ಟ್ ಗಳಿವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗೆ ರಾಷ್ಟ್ರೀಯ ಹೆದ್ದಾರಿ- 169 ಮತ್ತು ಕಳಸ ಮುಖ್ಯರಸ್ತೆ ಹಾದು ಹೋಗಿದೆ. 3 ರಸ್ತೆಗಳಲ್ಲಿ ಅರಣ್ಯ ಇಲಾಖೆ ತಪಾಸಣ ಕೇಂದ್ರಗಳಿವೆ. ಕಾರ್ಕಳ ತಾ| ಮಾಳ, ಶೃಂಗೇರಿ ತಾ.ನ ತನಿಕೋಡು, ಕಳಸ ತಾ.ನ ಬಸ್ರಿಕಲ್ಲು ಈ ಮೂರು ಕಡೆ ಅರಣ್ಯ ತಪಾಸಣ ಚೆಕ್‌ಪೋಸ್ಟ್‌ಗಳಿವೆ.
ಗಮನವಿಡುವುದು ಕಷ್ಟ
ಲಾಕ್‌ಡೌನ್ ವೇಳೆ ಪ್ರವಾಸಕ್ಕೆ ನಿರ್ಬಂಧವಿತ್ತು. ಈಗಲೂ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿಲ್ಲ. ಆದರೂ ಪ್ರವಾಸಿಗರು ಜಲಪಾತ, ಪ್ರಕೃತಿ ವೀಕ್ಷಣೆಗೆ ಭೇಟಿ ನೀಡುತ್ತಿದ್ದಾರೆ. ರಜಾದಿನಗಳು, ವಾರಾಂತ್ಯದ ದಿನಗಳಲ್ಲಿ ಹೆಚ್ಚು ಜನ ಬರುತ್ತಿರುತ್ತಾರೆ. ಸಿಬಂದಿ ಕೊರತೆಯಿಂದ ಇವರ ಬಗ್ಗೆ ಗಮನಹರಿಸಲು ಇಲಾಖೆಗೆ ಕಷ್ಟವಾಗುತ್ತಿದೆ.
ದಂಡ ವಸೂಲಿ
ಪ್ರವಾಸಿಗರ ಸಂಖ್ಯೆ, ಚಾರಣಿಗರ ಸಂಖ್ಯೆ ಹೆಚ್ಚಿರುವುದರಿಂದ ನಿಯಮ ಉಲ್ಲಂಘನೆ ಪ್ರಕರಣಗಳೂ ಇಲ್ಲಿ ಹೆಚ್ಚು. ಇವರನ್ನು ಗಮನಿಸಲು, ನಿಯಮ ಮೀರಿದಲ್ಲಿ ದಂಡ ವಿಧಿಸಲು ಸಿಬಂದಿ ಇಲ್ಲ. ಆದರೂ 2019-20ರ ಸಾಲಿನಲ್ಲಿ 87 ಪ್ರಕರಣಗಳಲ್ಲಿ 1,00,220 ರೂ. ವಸೂಲಿಯಾಗಿದೆ.
ಮನವಿ ಮಾಡಿದ್ದೇವೆ
ವಿಭಾಗದಲ್ಲಿ ಸಿಬಂದಿ ಕೊರತೆ ಶೇ.45ರಷ್ಟು ಇದೆ. ಅದರಲ್ಲಿ ಗಾರ್ಡ್ ವಿಭಾಗದ ಸಿಬಂದಿ ಕೊರತೆ ಹೆಚ್ಚಿದೆ. ಸಿಬಂದಿ ನೇಮಕಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಸರಕಾರ ನೇಮಕಾತಿ ನಡೆಸಿದಾಗ ಸಮಸ್ಯೆ ನಿವಾರಣೆಯಾಗಲಿದೆ.
-ರುಥ್ರನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವಿಭಾಗ ಕುದುರೆಮುಖ
ದ.ಕ. ಮತ್ತು ಉಡುಪಿ ಜಿಲ್ಲೆ
ಚೆಕ್‌ಪೋಸ್ಟ್-3
ದಂಡ ಶುಲ್ಕ (ರೂ.) 5,01,00,200
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್ ವಶ
Manipal: ಅಪಾಯಕಾರಿ ರೀತಿಯಲ್ಲಿ ಬೈಕ್ ಚಾಲನೆ; ಪ್ರಕರಣ ದಾಖಲು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.