ಆ್ಯಪಲ್, ಗೂಗಲ್ ಸ್ಟೋರ್ ನಿಂದ PUBG ಔಟ್: ಈಗಾಗಲೇ Install ಆಗಿರುವ ಆ್ಯಪ್ ಕಥೆಯೇನು ?
Team Udayavani, Sep 4, 2020, 2:36 PM IST
ನವದೆಹಲಿ: ಭಾರತ ಸರ್ಕಾರ ಪಬ್ ಜಿ ಸೇರಿದಂತೆ 118 ಚೀನಾ ಮೂಲದ ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಿತ್ತು. ಇದೀಗ ನಿಷೇಧವಾದ ಎರಡು ದಿನಗಳ ನಂತರ ಪಬ್ ಜಿ ಮೊಬೈಲ್ ಅಧಿಕೃತವಾಗಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೊರ್ ನಿಂದ ರಿಮೂವ್ ಆಗಿದೆ.
ಪಬ್ ಜಿ ಭಾರತದಲ್ಲಿ ಅತ್ಯಂತ ಜನಪ್ರಿಯ ಗೇಮಿಂಗ್ ಆ್ಯಪ್ ಆಗಿತ್ತು. ಇದೀಗ ಆ್ಯಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಈ ಆ್ಯಪ್ ಅನ್ನು ಅಧಿಕೃತವಾಗಿ ತೆಗೆದುಹಾಕಲಾಗಿದ್ದು, ಅದಾಗ್ಯೂ ಈಗಾಗಲೇ ಇನ್ ಸ್ಟಾಲ್ ಆಗಿರುವ ಸ್ಮಾರ್ಟ್ ಪೋನ್ ಗಳಲ್ಲಿ ಆಡಬಹುದಾಗಿದೆ. ಇನ್ನು ಕೆಲವು ದಿನಗಳಲ್ಲಿ ಇದಕ್ಕೂ ಕೂಡ ಬ್ರೇಕ್ ಬೀಳಲಿದ್ದು ಇಂಟರ್ ನೆಟ್ ಸರ್ವಿಸ್ ಪ್ರೊವೈಡರ್ ಗಳು ಟಿಕ್ ಟಾಕ್ ಮಾದರಿಯಲ್ಲೇ ಬ್ಲಾಕ್ ಮಾಡಲಿದ್ದಾರೆ ಎನ್ನಲಾಗಿದೆ.
ಏತನ್ಮಧ್ಯೆ ಗೂಗಲ್ ಸರ್ಚ್ ನಲ್ಲಿ ಪಬ್ ಜಿ ಲಭ್ಯವಿದ್ದು ಕೆಲವು ದಿನಗಳ ನಂತರ ಕ್ಲಿಯರ್ ಆಗುವ ಸಾಧ್ಯತೆಯಿದೆ. ಪಬ್ ಜಿಯೊಂದಿಗೆ ಪಬ್ ಜಿ ಲೈಟ್ ಕೂಡ ಪ್ಲೇ ಸ್ಟೋರ್ ನಿಂದ ರಿಮೂವ್ ಆಗಿದೆ.
ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುವ ಕಾರಣದಿಂದ ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ 59 ಮತ್ತು ಎರಡನೇ ಹಂತದಲ್ಲಿ 118 ಜನಪ್ರಿಯ ಆ್ಯಪ್ ಗಳನ್ನು ನಿಷೇಧ ಮಾಡಿತ್ತು ಈ ಎಲ್ಲಾ ಆಪ್ಲಿಕೇಷನ್ ಗಳು ಬಳಕೆದಾರರ ಡೇಟಾ ಕದ್ದು ಇತರ ದೇಶಗಳ ಸರ್ವರ್ ಗಳಿಗೆ ರವಾನಿಸುತ್ತಿದ್ದವು ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.