ಕಿಚ್ಚನ ಜೊತೆ ಪ್ರೇಮ್ ಸಿನ್ಮಾ
ವಿಲನ್ ನಂತರ ಮತ್ತೆ ಹೊಸ ಅವತಾರ
Team Udayavani, Sep 4, 2020, 3:40 PM IST
ನಟ ಸುದೀಪ್ ಹಾಗೂ ನಿರ್ದೇಶಕ ಪ್ರೇಮ್ “ದಿ ವಿಲನ್’ ಚಿತ್ರದ ಮೂಲಕ ಜೊತೆಯಾಗಿದ್ದು ನಿಮಗೆ ಗೊತ್ತೇ ಇದೆ. ಈಗ ಈ ಜೋಡಿ ಮತ್ತೂಮ್ಮೆ ಒಟ್ಟಾಗಿ ಸಿನಿಮಾ ಮಾಡಲಿದೆ. ಈ ವಿಷಯವನ್ನು ಸ್ವತಃ ನಿರ್ದೇಶಕ ಪ್ರೇಮ್ ಸ್ಪಷ್ಟಪಡಿಸಿದ್ದಾರೆ. ಸುದೀಪ್ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರೇಮ್, ಈ ಸಂದರ್ಭದಲ್ಲಿ, ಮುಂದಿನ ಸಿನಿಮಾ ಸುದೀಪ್ ಜೊತೆ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರೇಮ್, ನನ್ನ ಮುಂದಿನ ಚಿತ್ರ ಯಾವುದು ಸುದೀಪ್ ಅವರ ಜೊತೆಗೆ ಮತ್ತೆ ಯಾವಾಗ ಕೆಲಸ ಮಾಡುತ್ತೀರಿ ಎಂದು ಅನೇಕರು ಕೇಳುತ್ತಲೇ ಇದ್ದರು. ಸುದೀಪ್ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅವರ ಜೊತೆ ಮತ್ತೂಂದು ಚಿತ್ರ ಮಾಡುವುದನ್ನು ಅನೌನ್ಸ್ ಮಾಡುತ್ತಿದ್ದೇನೆ. ಈ ಹೊಸ ಚಿತ್ರದಲ್ಲಿ ಸುದೀಪ್ ಅವರು ಇದುವರೆಗೆ ಕಾಣಿಸಿಕೊಳ್ಳದ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಪ್ರೇಮ್ ಮಾಹಿತಿ ನೀಡಿದ್ದಾರೆ. ಈಗಾಗಲೇ ಸುದೀಪ್ ಹಾಗೂ ಪ್ರೇಮ್ “ದಿ ವಿಲನ್’ ಚಿತ್ರದಲ್ಲಿ ಒಂದಾಗಿದ್ದಾರೆ. ಆ ಚಿತ್ರದಲ್ಲೂ ಸುದೀಪ್ ಅವರ ಹೇರ್ಸ್ಟೈಲ್ ಗೆಟಪ್ ಭಿನ್ನವಾಗಿತ್ತು. ಸಾಕಷ್ಟು ಮಂದಿ ಅಭಿಮಾನಿಗಳು ಅದನ್ನು ಫಾಲೋ ಮಾಡಿದ್ದರು. ಈಗ ಹೊಸ ಚಿತ್ರದಲ್ಲೂ ಭಿನ್ನ ಗೆಟಪ್ ಇರುತ್ತದೆ ಎಂದು ಪ್ರೇಮ್ ಹೇಳುವ ಮೂಲಕ ಈಗಲೇ ಆಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದಾರೆ.
ಸದ್ಯ ಪ್ರೇಮ್ “ಏಕ್ ಲವ್ ಯಾ’ ಚಿತ್ರದಲ್ಲಿ ಬಿಝಿ. ಈ ಚಿತ್ರದಲ್ಲಿ ರಾಣಾ ನಾಯಕರಾಗಿ ನಟಿಸುತ್ತಿದ್ದಾರೆ. ರೀಷಾ ಹಾಗೂ ರಚಿತಾ ನಾಯಕಿಯರು. ಈ ಚಿತ್ರವನ್ನು ರಕ್ಷಿತಾ ಅವರು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮುಗಿದ ಬಳಿಕ ಪ್ರೇಮ್, ಸುದೀಪ್ ಜೊತೆಗಿನ ಸಿನಿಮಾ ಮಾಡುವ ಸಾಧ್ಯತೆ ಇದೆ. ಸದ್ಯ ಸುದೀಪ್ “ಫ್ಯಾಂಟಮ್’ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ.
– ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.