ಭಾರತದಲ್ಲಿ ಐಸಿಸ್ ಟೆರರ್ ನೆಟ್ ವರ್ಕ್ ಗೆ ಟರ್ಕಿ ಆರ್ಥಿಕ ನೆರವು, ಗುಪ್ತಚರ ಇಲಾಖೆ: ವರದಿ
ಭಾರತದಲ್ಲಿರುವ ಐಸಿಸ್ ಸಂಘಟನೆಗೆ ಟರ್ಕಿ ಆರ್ಥಿಕ ನೆರವು ನೀಡಲು ಪ್ರಯತ್ನಿಸಿತ್ತು.
Team Udayavani, Sep 5, 2020, 1:34 PM IST
Representative Image
ನವದೆಹಲಿ: ಭಾರತದಲ್ಲಿ ಐಸಿಸ್ ಗೆ ಹಾಗೂ ಭಾರತ ವಿರೋಧಿ ಭಯೋತ್ಪಾದಕ ಚಟುವಟಿಕೆಗಳಿಗೆ ಟರ್ಕಿ ಆರ್ಥಿಕ ನೆರವು ಮತ್ತು ಬೆಂಬಲ ನೀಡುತ್ತಿರುವುದಾಗಿ ಭಾರತದ ಗುಪ್ತಚರ ತನಿಖಾ ಸಂಸ್ಥೆ ಕಳವಳ ವ್ಯಕ್ತಪಡಿಸಿರುವುದಾಗಿ ವರದಿಯೊಂದು ತಿಳಿಸಿದೆ.
ಭಾರತೀಯ ಭದ್ರತಾ ಏಜೆನ್ಸಿ ಕಲೆಹಾಕಿರುವ ಮಾಹಿತಿ ಪ್ರಕಾರ, ಟರ್ಕಿ ಮೂಲದ ಹ್ಯಾಂಡ್ಲರ್ಸ್ ಗಳು ಉಗ್ರರಿಗೆ ಬೆಂಬಲ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಭಾರತದ ಉಗ್ರರು ಸಿರಿಯಾ ತೆರಳಲು ಅವಕಾಶ ಮಾಡಿಕೊಟ್ಟಿದ್ದು, ಅಲ್ಲಿ ಐಸಿಸ್ ಜತೆ ಸೇರಿ ಜಾಗತಿಕ ಉಗ್ರರ ಜಾಲದ ಜತೆ ಸೇರಿ ದುಷ್ಕೃತ್ಯ ಎಸಗಲು ಟರ್ಕಿ ಅವಕಾಶ ಮಾಡಿಕೊಟ್ಟಿರುವುದಾಗಿ ವರದಿ ಹೇಳಿದೆ.
ಇತ್ತೀಚೆಗೆ ಬಂಧಿಸಲ್ಪಟ್ಟಿದ್ದ ಐಸಿಸ್ ಉಗ್ರರು ವಿಚಾರಣೆ ವೇಳೆ ಈ ಸತ್ಯವನ್ನು ಹೊರಹಾಕಿದ್ದು, ಟರ್ಕಿ ಮೂಲಕ ಸಿರಿಯಾವನ್ನು ತಲುಪಿದ್ದು, ಅದೇ ಮಾರ್ಗವಾಗಿ ವಾಪಸ್ ಬಂದಿರುವ ಬಗ್ಗೆಯೂ ತಪ್ಪೊಪ್ಪಿಕೊಂಡಿದ್ದಾರೆ. ಟರ್ಕಿಯಲ್ಲಿರುವ ಹ್ಯಾಂಡ್ಲರ್ ಗಳಿಂದಾಗಿ ಐಸಿಸ್ ಒಳಪ್ರವೇಶಿಸಲು ಅನುಕೂಲ ಕಲ್ಪಿಸಿಕೊಟ್ಟಿರುವುದಾಗಿ ವಿವರಿಸಿದ್ದಾರೆ.
ಭಾರತದಲ್ಲಿರುವ ಐಸಿಸ್ ಸಂಘಟನೆಗೆ ಟರ್ಕಿ ಆರ್ಥಿಕ ನೆರವು ನೀಡಲು ಪ್ರಯತ್ನಿಸಿತ್ತು. ಇದರ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳೊಂದಿಗೆ ನಂಟು ಹಾಗೂ ಲಾಭ ರಹಿತ ಸಂಘಟನೆಗಳ ಜತೆ ಸಖ್ಯ ಹೊಂದಿರುವ ವಿಚಾರ ಭಾರತಕ್ಕೆ ದೊಡ್ಡ ಆಘಾತಕಾರಿಯಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಭಾರತೀಯ ಭದ್ರತಾ ಏಜೆನ್ಸಿ ಹಲವು ಗುಪ್ತಚರ ಸಂಸ್ಥೆಗಳ ಜತೆ ಕಾರ್ಯನಿರ್ವಹಿಸುತ್ತಿರುವುದಾಗಿ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘New Phase’ of War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅಣ್ವಸ್ತ್ರ ದಾಳಿ ಎಚ್ಚರಿಕೆ!
Copper: ಕಾಂಗೋದಲ್ಲಿ ಕುಸಿದ ಪರ್ವತ: ಸಾವಿರಾರು ಟನ್ ತಾಮ್ರ ಪ್ರತ್ಯಕ್ಷ!
bomb cyclone: ಶೀಘ್ರ ಅಮೆರಿಕ ಕರಾವಳೀಲಿ “ಬಾಂಬ್ ಸೈಕ್ಲೋನ್’ ಸ್ಫೋಟ!
ಯುದ್ಧ ಸನ್ನದ್ಧರಾಗಿ: ನಾಗರಿಕರಿಗೆ ಸ್ವೀಡನ್, ಫಿನ್ ಲ್ಯಾಂಡ್ ಎಚ್ಚರಿಕೆ!
Viral Video: ಟಿಕ್‌ಟಾಕ್ ಸ್ಟಾರ್ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.