ನಿಮಗೆ ಈ ವಾಮನಮೂರ್ತಿ ಬಗ್ಗೆ ಗೊತ್ತಾ…? ಹಳ್ಳಿಯ ಟೈಲರ್ ಹಾಸ್ಯ ನಟನಾಗಿ ಬೆಳೆದಿದ್ದ

ಸಿಐಡಿ ಉನ್ನಿಕೃಷ್ಣನ್ ಬಿಎ, ಬಿಎಡ್ ಸಿನಿಮಾ ಇಂದ್ರನ್ಸ್ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.  

ನಾಗೇಂದ್ರ ತ್ರಾಸಿ, Sep 5, 2020, 5:00 PM IST

ನಿಮಗೆ ಈ ವಾಮನಮೂರ್ತಿ ಬಗ್ಗೆ ಗೊತ್ತಾ…? ಹಳ್ಳಿಯ ಟೈಲರ್ ಹಾಸ್ಯ ನಟನಾಗಿ ಬೆಳೆದಿದ್ದ

ಹಾಸ್ಯ ಯಾರಿಗೆ ತಾನೇ ಇಷ್ಟವಿಲ್ಲ. ಸಿನಿಮಾಗಳನ್ನು ಪ್ರೇಕ್ಷಕ ಹೆಚ್ಚಾಗಿ ಎರಡು ಕಾರಣಗಳಿಗಾಗಿ ತುಂಬಾ ಇಷ್ಟಪಡುತ್ತಾನೆ. ಮೊದಲನೆಯದು ಕಥಾಹಂದರ, ಎರಡನೇಯದು ಹಾಸ್ಯ ನಟನೆಗಾಗಿ. ಹೀಗೆ ನಟನೊಬ್ಬ ತನ್ನ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ಮೂಲಕ ಅದಕ್ಕೊಂದು ಜೀವ ತುಂಬುವ ಮೂಲಕ ಪ್ರೇಕ್ಷಕ ಮಹಾಶಯನ ಮನಸ್ಸನ್ನು ಗೆದ್ದಿರುತ್ತಾರೆ. ಕನ್ನಡದಲ್ಲಿಯೂ ಡಿಂಗ್ರಿ ನಾಗರಾಜ್, ಉಮೇಶ್, ದೊಡ್ಡಣ್ಣ ಎರಡನೇ ಕಾಲಘಟ್ಟದ ಹಾಸ್ಯ ನಟರು, ತೀರಾ ಇತ್ತೀಚೆಗೆ ಚಿಕ್ಕಣ್ಣ ಹಾಸ್ಯದ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದಾರೆ. ನಾನು ಈ ವಾರ ಪರಿಚಯಿಸಲು ಹೊರಟಿರುವ ಹಾಸ್ಯ ನಟ ಬೇರಾರು ಅಲ್ಲ ಮಲಯಾಳಂ ಚಿತ್ರರಂಗದ “ಇಂದ್ರನ್ಸ್”.

ಹೌದು ನೀವು ಮಲಯಾಳಂ ಸಿನಿಮಾ ಪ್ರಿಯರಾಗಿದ್ದರೆ ನಿಮಗೆ ಈ ಹಾಸ್ಯ ನಟನ ನೆನಪು ಮರೆಯಾಗಲು ಸಾಧ್ಯವೇ ಇಲ್ಲ. ಈ ನಟನ ಮುಖ ಬೆಳ್ಳಿ ಪರದೆ ಮೇಲೆ ಬರುತ್ತಿದ್ದಂತೆಯೇ ನಗುವೂ ನಮ್ಮ ಮುಖದ ಮೇಲೆ ಅರಳದಿರಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಇಂದ್ರನ್ಸ್ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ನೋಡಲು ವಾಮನ ಮೂರ್ತಿಯಂತಿರುವ ಇಂದ್ರನ್ಸ್ 1956ರಲ್ಲಿ ತಿರುವನಂತಪುರಂನ ಕುಮಾರಪುರಂನಲ್ಲಿ ಜನಿಸಿದ್ದರು. ಇವರ ನಿಜವಾದ ಹೆಸರು ಸುರೇಂದ್ರನ್ ಕೋಚುವೇಲು ಅಂತ.  ಕುಮಾರಪುರಂನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ನಂತರ ಎಂಎಸ್ಸಿ ಪದವಿ ಪಡೆದಿದ್ದರು.

ಕುಮಾರಪುರಂನ ಟೈಲರ್ ಹಾಸ್ಯ ನಟನಾಗಿ ಬೆಳೆದಿದ್ದ!

ತಿರುವನಂತಪುರಂನ ಕುಮಾರಪುಂನಲ್ಲಿನ ಮುರಿನಂಜಪಾಲಂ ರಸ್ತೆ ಸಮೀಪ “ ಇಂದ್ರನ್ಸ್ ಬ್ರದರ್ಸ್” ಹೆಸರಿನ ಟೈಲರ್ ಅಂಗಡಿಯೊಂದನ್ನು ಪ್ರಾರಂಭಿಸಿದ್ದರು. ಬಟ್ಟೆ ಹೊಲಿದು ಕೊಡುವ ಮೂಲಕ ಜೀವನ ಸಾಗಿಸುತ್ತಿದ್ದ ಸುರೇಂದ್ರನ್ ಸ್ಥಳೀಯವಾಗಿ ಜನಪ್ರಿಯರಾಗಿದ್ದರು. ನವಿರಾದ ಹಾಸ್ಯ ಮಾಡುತ್ತಿದ್ದ ಇವರು ನಂತರ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಅಮೆಚೂರ್ ಆರ್ಟ್ ಕ್ಲಬ್ ಗೆ ಸೇರಿಕೊಂಡು ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದ್ದರು.

ಅಂತೂ ಒಮ್ಮೆ ನಿರ್ಮಾಪಕ ಟಿಎಂಎನ್ ಚಾರ್ಲಿ 1981ರಲ್ಲಿ ತಮ್ಮ ನಿರ್ಮಾಣದ ಚೂ(ಜೂ)ಟಾಟ್ಟಂ ಸಿನಿಮಾದಲ್ಲಿ ಕಾಸ್ಟ್ಯೂಮ್ ಡಿಸೈನರ್ (ವಸ್ತ್ರ ವಿನ್ಯಾಸಕಾರ) ಆಗಿ ಸಹಾಯ ಮಾಡುವಂತೆ ಆಫರ್ ನೀಡಿದ್ದರು. ಹೀಗೆ ಚಿತ್ರರಂಗಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಎಂಟ್ರಿ ಕೊಟ್ಟ ಇಂದ್ರನ್ ಹಲವು ಸಣ್ಣ, ಪುಟ್ಟ ಪಾತ್ರಗಳಲ್ಲಿ ಅಭಿನಯಿಸತೊಡಗಿದ್ದರು.

ಇದಕ್ಕೂ ಮುನ್ನ ಇಂದ್ರನ್ಸ್ ಅವರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕಾಲಿವೀಡು ಎಂಬ ಧಾರವಾಹಿಯಲ್ಲಿ ನಟಿಸುವ ಮೂಲಕ ತಮ್ಮ ಬಣ್ಣದ ಬದುಕನ್ನು ಆರಂಭಿಸಿದ್ದರು. ಆದರೆ ಇದ್ಯಾವುದು ಅವರನ್ನು ದೊಡ್ಡ ಮಟ್ಟದಲ್ಲಿ ಗುರುತಿಸುವಲ್ಲಿ ವಿಫಲವಾಗಿದ್ದವು. 1993ರಲ್ಲಿ ಜಯರಾಂ, ಶೋಭನಾ ನಟನೆಯ ಮೇಲೆಪಾರಂಬಿಲ್ ಅನ್ವೀಡು ಸಿನಿಮಾದಲ್ಲಿ ಮದುವೆ ಬ್ರೋಕರ್ ಪಾತ್ರ ಇಂದ್ರನ್ಸ್ ಅವರ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗಿ ಪರಿಣಮಿಸಿತ್ತು!

1994ರಲ್ಲಿ ತೆರೆ ಕಂಡಿದ್ದ ಸಿಐಡಿ ಉನ್ನಿಕೃಷ್ಣನ್ ಬಿಎ, ಬಿಎಡ್ ಸಿನಿಮಾ ಇಂದ್ರನ್ಸ್ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.  1990ರ ದಶಕದ ನಂತರ ನೂರಾರು ಸಿನಿಮಾಗಳಲ್ಲಿ ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಇಂದ್ರನ್ಸ್ ಮಿಂಚಿದ್ದರು. 2018ರಲ್ಲಿ ಆಲೋರುಕ್ಕಂ ಸಿನಿಮಾದಲ್ಲಿನ ನಟನೆಗಾಗಿ ಕೇರಳ ರಾಜ್ಯದ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.

ಒಬ್ಬ ಸಾಮಾನ್ಯ ಟೈಲರ್ ಆಗಿದ್ದ ವ್ಯಕ್ತಿ, ಯಾವುದೇ ಸ್ಟಾರ್ ಡಮ್ ಇಲ್ಲದೇ, ಯಾವುದೇ ಗಾಡ್ ಫಾದರ್ ಇಲ್ಲದೇ ಸುಕುಮಾರನ್ ಸಿನಿಮಾ ಜಗತ್ತಿನೊಳಗೆ ಪ್ರವೇಶಿಸಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಎಲ್ಲರ ಮುಖದಲ್ಲಿ ನಗುವಿನ ಗೆರೆ ಮೂಡಿಸಿ ಗೆದ್ದಿರುವುದು ಸಣ್ಣ ಸಾಧನೆಯಲ್ಲ. ಕಾಸ್ಟ್ಯೂಮ್ ಡಿಸೈನರ್ ಆಗಿ ಬೆಳ್ಳಿ ತೆರೆಗೆ ಕಾಲಿಟ್ಟು ನಂತರ ಹಾಸ್ಯ ನಟನಾಗಿ ಬೆಳೆದ ಇಂದ್ರನ್ಸ್ ಇಂದಿಗೂ ತಮ್ಮ ಸಿನಿ ಪಯಣದ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾರೆ.

ಇಂದ್ರನ್ಸ್ ಹಾಸ್ಯ ನಟನೆಯಿಂದ ಹೊರಳಿ ಗಂಭೀರ ಪಾತ್ರವನ್ನು ನಿರ್ವಹಿಸಿದ್ದರು. ಮಲಯಾಳಂ ಸಿನಿಮಾ ಇಂಡಸ್ಟ್ರಿ ಇಂದ್ರನ್ಸ್ ಅವರ ಪ್ರತಿಭೆಯನ್ನು “ಶಯನಂ, ದೃಷ್ಟಾಂತಂ, ಕಥಾವಾಶೇಷನ್ ಮತ್ತು ರಮಣಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಗುರುತಿಸಿತ್ತು. ಮಲಯಾಳಂ ಸ್ಟಾರ್ ನಟರ ಮುಂದೆ ನಾನೇನು ಅಲ್ಲ. ನಾನು ಪ್ರತಿಭಾವಂತ ನಿರ್ದೇಶಕರ ಜತೆ ಕೆಲಸ ಮಾಡಿದ್ದೇನೆ. ಅಲ್ಲದೇ ಹಿರಿಯರಾದ ತಿಲಕನ್ ಚೆಟ್ಟನ್, ಜಗದಿ ಚೆಟ್ಟನ್, ಕಲ್ಪನಾ, ಸುಕುಮಾರಿ, ಲಲಿತಾ ಸೇರಿದಂತೆ ಹಲವರ ಜತೆ ನಟಿಸಿದ್ದೇನೆ. ನನಗೆ ಅವರ ಬೆಂಬಲವೇ ವೃತ್ತಿ ಜೀವನಕ್ಕೆ ಸಹಾಯಕವಾಗಿದ್ದು, ನಾನು ಇಂತಹವರ ಕಾಲದಲ್ಲಿ ಅವರ ಜತೆಗೆ ನಟಿಸಿರುವುದೇ ನನಗೆ ಸಿಕ್ಕ ಭಾಗ್ಯವಾಗಿದೆ ಎಂದು ಇಂದ್ರನ್ಸ್ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

ಟಾಪ್ ನ್ಯೂಸ್

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

Newborn baby’s body found in toilet pit!

Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

4(1

Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.