ಶಿಕ್ಷಕರ ದಿನಾಚರಣೆ 2020: ಸಹಜವಾಗಿ ಬದುಕುವ ಪಾಠ ಕಲಿಸಿದೆ….ಸತ್ಯದ ಕಡೆಗೆ ಮರಳಬೇಕಾಗಿದೆ
ಆರ್ಟಿಫಿಷಿಯಲ್ ಲೋಕದಲ್ಲಿದ್ದ ಮಕ್ಕಳಿಗೂ, ಹಿರಿಯರಿಗೂ ಸಹಜವಾಗಿ ಬದುಕುವ ಪಾಠ ಕಲಿಸಿದೆ
Team Udayavani, Sep 4, 2020, 5:32 PM IST
ಪಕ್ವಗೊಂಡ ಹಣ್ಣು ತಾನಾಗಿಯೇ ಮರದಿಂದ ಉದುರುವುದು. ಅದನ್ನು ಅನ್ಯಾಯ ದಿಂದ ಕಲ್ಲು ಹೊಡೆದು ಬೀಳಿಸುವ ಅಗತ್ಯವಿಲ್ಲ. ಅದೇ ರೀತಿ ಇಂದು ಕುಟುಂಬ ಸಂಬಂಧ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಕಲಿಯುವ ಅಗತ್ಯವಿಲ್ಲದೇ ಕುಟುಂಬದೊಂದಿಗಿದ್ದು ಹಿರಿಯರನ್ನು ನೋಡಿ ಕಲಿಯುವ ಅವಕಾಶ ದೊರೆತಿದೆ.ಅದರೊಂದಿಗೆ ಶೈಕ್ಷಣಿಕ ವರ್ಷದ ಕಲಿಕೆಯಿಂದಲೂ ವಿದ್ಯಾರ್ಥಿಗಳು ವಂಚಿತರಾಗಬಾರದೆಂದು ಆನ್ ಲೈನ್ ತರಗತಿಯಂತೆ ಹಲವಾರು ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇದರಿಂದ ಶ್ರೀಮಂತರಂತೆ, ಮಾಧ್ಯಮವರ್ಗದವರ ಮಕ್ಕಳೂ ಶಿಕ್ಷಣ ಮುಂದುವರಿಸಲು ಸಹಕಾರಿಯಾಗಿದೆ. ಆದರೆ ಬಡವರ ಮಕ್ಕಳು……?
ಕಾರ್ಮಿಕ ವರ್ಗದವರಿಗೆ, ಗ್ರಾಮೀಣಭಾಗದಲ್ಲಿ ನೆಟ್ ವರ್ಕ್ ಇಲ್ಲದ ಸ್ಥಳಗಳಲ್ಲಿ ಬದುಕುವ ವಿದ್ಯಾರ್ಥಿಗಳಿಗೆ ಹಾಗೂ ಅಂತಃಕಡೆಗಳಲ್ಲಿ ವಾಸ್ತವ್ಯವಿರುವ ಶಿಕ್ಷಕರ ಪಾಡು…..ಇದು ಹೀಗೇ ಮುಂದುವರಿದಲ್ಲಿ…. ವಿದ್ಯಾರ್ಥಿಗಳ, ಶಿಕ್ಷಕರ ಈ ಮೂಲಕ ವಿದ್ಯಾಸಂಸ್ಥೆಗಳ ಅವಸ್ಥೆಯೇನಾದೀತು…
ಆದರೆ ಸಾಮಾಜಿಕವಾಗಿ ಇನ್ನೊಂದು ಮಗ್ಗುಲಲ್ಲಿ ಯೋಚಿಸಿದಾಗ……ಸಮಯಕೊಡಲಾಗದ ಹಿರಿಯರು ಮಕ್ಕಳ ಕೈಗೊಂದು ಮೊಬೈಲ್ ಕೊಟ್ಟು ಕೂರಿಸದೇ, ಅವರನ್ನು ಚಟುವಟಿಗೆಗಳಲ್ಲಿ ತೊಡಗಿಸಬೇಕು. ತಮ್ಮ ಮಕ್ಕಳ ಬಗ್ಗೆ ಸಿನೆಮಾ, ಧಾರಾವಾಹಿಗಳ ಪಾತ್ರಗಳನ್ನು ನೋಡಿ ಕನಸು ಕಾಣುತ್ತಿದ್ದ ಹಿರಿಯರ ಮೌನದ ಮೋಡಗಳು ಇಂದು…ಪೋಷಕರನ್ನೇ ಶಿಕ್ಷಕರಾಗಿ ಬಳಸುತ್ತಾ ಪ್ರಜ್ಞಾವಂತ ಮಕ್ಕಳ ಕೂಗಿಗೊಮ್ಮೆ ಕಿವಿಗೊಡೋಣ ಎಂಬಂತೆ ಮನೆಯಲ್ಲೇ ಇರುವ ಮಕ್ಕಳ ಮನಸ್ಸಿಗೆ ಆ ಮೂಲಕ ಸಮಾಜದ ಭ್ರಷ್ಟಾಚಾರದ ಧಗೆಗೆ ಮಳೆಯಾಗಿ ಸುರಿಯಬೇಕಾಗಿದೆ.
ವ್ಯಕ್ತಿ ಮತ್ತು ರಾಷ್ಟ್ರದ ಏಳಿಗೆ ಪರಸ್ಪರ ಗಾಢವಾದ ಸಂಬಂಧ ಹೊಂದಿದೆ. ಕೆಲವು ತಿಂಗಳುಗಳ ಹಿಂದೆ ಕನಸ್ಸಿನಲ್ಲೂ ಯೋಚಿಸಿರದ ಕಾಯಿಲೆ ಇಂದು ಮಾನವನ ಯೋಜನೆ, ಆಕಾಂಕ್ಷೆ, ಕನಸುಗಳನ್ನೆಲ್ಲಾ ನಿರ್ಲಕ್ಷಿಸುವಂತೆ ಮಾಡಿತ್ತು.. !ಲಾಕ್ಡೌನ್… ಆರ್ಟಿಫಿಷಿಯಲ್ ಲೋಕದಲ್ಲಿದ್ದ ಮಕ್ಕಳಿಗೂ, ಹಿರಿಯರಿಗೂ ಸಹಜವಾಗಿ ಬದುಕುವ ಪಾಠ ಕಲಿಸಿದೆ ತುತ್ತು ಬಾಯಿಗಿಡುವುದಕ್ಕಿಂತ.. ಅದು ಭೂಮಿಯ ಹೊಟ್ಟೆಯಿಂದ ಹೊರಬಂದು ನಮ್ಮ ಹೊಟ್ಟೆ ಸೇರುವವರೆಗೆ ಹಾದುಬಂದ ಎಲ್ಲಾ ಮಗ್ಗುಲುಗಳೂ ಮಡಿಲ ಮಕ್ಕಳಿಗೆ ಅರ್ಥವಾಗುವ ಸಮಯ ಇದಾಗಿದೆ.. !
ಹಾಗಾದಲ್ಲಿ ಮಾತ್ರ ಕಲಿಸುವ ಶಿಕ್ಷಕರಿಗೆ, ಕಲಿಯುವ ಮನಸ್ಸಿಗೆ ಎಂದೂ ಕೊರೊನ (ಅಬ್ಬರ ) ಬಾಧಿಸದು. ಮತ್ತು ಹಿರಿಯರ ಕನಸಿನ ಉತ್ಥಾನಕ್ಕೆ ಎಂದೂ ಬಾಧಿಸದು, ಪ್ರಗತಿಯ ನಭದಲ್ಲಿ ವಿಹರಿಸುವ ನಮ್ಮ ಯುವಜನಾಂಗಕ್ಕೆ ಯಾವುದೂ ತಡೆಯಾಗದು.. ವಾಸ್ಕೊಡಗಾಮನ ಬಗ್ಗೆ ಓದಿ ಅರಗಿಸಿದ ಮಕ್ಕಳಿಗೆ ರೈತರ ಪರಿಶ್ರಮದ ಬಗ್ಗೆ ಅರಿವಿಲ್ಲ. ದೊಡ್ಡ ದೊಡ್ಡ ಪದವಿ ಪರೀಕ್ಷೆಗಳನ್ನು ಎದುರಿಸುವ ಮಕ್ಕಳಿಗೆ ಜೀವನದ ಸಣ್ಣ ಸಮಸ್ಯೆಯನ್ನೂ ಎದುರಿಸಲು ಸಾಧ್ಯವಾಗದ ಇಂದಿನ ಶಿಕ್ಷಣ ಪದ್ಧತಿ, ಭಾರತೀಯ ಇತಿಹಾಸ, ಆಧುನಿಕ ವಿಜ್ಞಾನಕ್ಕೆ ಅಂದರೆ ಸತ್ಯಕ್ಕೆ ತೇಪೆಹಾಕಿರುವಂತೆ ಕಾಣುವ ಇಂದಿನ ಶಿಕ್ಷಣದ ಬದಲಿಗೆ ಭಾರತೀಯ ಪರಂಪರೆಯ ಬಗ್ಗೆ ಅಭಿಮಾನಪಡುವ ಇತಿಹಾಸ ಪಾರದರ್ಶಕವಾಗಿ ಪೋಷಕರಿಂದಲೂ ಪಡೆಯಲಿ….
ಮೂಗುದಾರ ಇಲ್ಲದೇ ಮುನ್ನುಗ್ಗುತ್ತಿದ್ದ ಈ ವಿಶ್ವವನ್ನು ಕಾಣದ ವೈರಸ್ಸೊಂದು ನಿಯಂತ್ರಣಕ್ಕೆ ತಂದಿರುವುದು ಜಗತ್ತಿನ ಚಿತ್ರಣವನ್ನೇ ಬದಲಿಸಿದೆ. ಇದರಿಂದ ಕಲಿಯುವ ಪಾಠ ಅಧಿಕಾರದಲ್ಲಿರುವವರು ಸ್ವಾರ್ಥಕ್ಕಾಗಿ ಸ್ಥಾಪಿಸಿದ ಹಲವಾರು ಅಡಿ ಎತ್ತರದ ಪುತ್ಥಳಿಗಳನ್ನು ನೋಡಿ ಹುಬ್ಬೇರಿಸುವುದಕ್ಕಿಂತ, ಯುವಜನಾಂಗವು ಪೋಷಕರ ತ್ಯಾಗ, ಶಿಕ್ಷಕರ ಸಹನೆ, ವೈದ್ಯರ ಸೇವೆ, ರೈತರ ಪರಿಶ್ರಮಗಳನ್ನು ಈ ಸಂದರ್ಭಗಳಲ್ಲಿ ಅರಿತು ಗೌರವಿಸುವಂತಾದಾಗಲಿ, ಭವಿಷ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳು, ತೃಪ್ತ ತಂದೆತಾಯಿಗಳು, ಗೌರವಯುತ ಶಿಕ್ಷಕರೇ ಕಾಣುವಂತಾದಾಗಲು, ಬದುಕಿನ ಉದ್ದೇಶ ಅರಿಯಬೇಕಾಗಿದೆ, ಸತ್ಯದ ಕಡೆಗೆ ಮರಳಬೇಕಾಗಿದೆ…
ಕೂಲ್ಸೂಮ್ ಅಬೂಬಕ್ಕರ್, ಪ್ರಾಂಶುಪಾಲೆ
ಸಾಲಿಹಾತ್ ಅರೇಬಿಕ್ ಕಾಲೇಜು ಹೂಡೆ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ ಅನುಭವ
ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ
ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ
ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!
ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹರು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.