ಚಿಂತನೆ: ಶಾಲೆ ಆರಂಭವಾಗುವ ಹೊತ್ತಿನಲ್ಲಿ ಮಕ್ಕಳು, ಪೋಷಕರ ಮನಃಸ್ಥಿತಿ


Team Udayavani, Sep 6, 2020, 5:59 AM IST

School-re-openಚಿಂತನೆ: ಶಾಲೆ ಆರಂಭವಾಗುವ ಹೊತ್ತಿನಲ್ಲಿ ಮಕ್ಕಳು, ಪೋಷಕರ ಮನಃಸ್ಥಿತಿ

ಸಾಂದರ್ಭಿಕ ಚಿತ್ರ

ಶಾಲೆಗಳ ಆರಂಭದ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದೆಡೆ ಮಕ್ಕಳನ್ನು ನಿಭಾಯಿಸಿ ಸಾಕಾಗಿರುವ ಪೋಷಕರು ಆತಂಕದಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿ ಸಡೆಸುತ್ತಿದ್ದಾರೆ. ಒಂದು ಬಹುದೊಡ್ಡ ಅಂತರದ ಅನಂತರ ಶಾಲೆ ಆರಂಭವಾಗಬೇಕಿರುವ ಅನಿವಾರ್ಯ ಎದುರಾ ಗಿದೆ. ಒಂದಡೆ ಮಕ್ಕಳ ಶೈಕ್ಷಣಿಕ ಜೀವನ ಇನ್ನೊಂದಡೆ ಬೌದ್ಧಿಕ ಸಾಮರ್ಥ್ಯ ಕುಂಠಿತವಾಗಬಾರದು ಎನ್ನುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಹೊಸ ಶಿಕ್ಷಣ ನೀತಿಗೆ ರಾಷ್ಟ್ರ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳನ್ನು ಮಾನಸಿಕವಾಗಿ ಸಜ್ಜುಗೊಳಿಸಿ ಹೊಸ ಶಿಕ್ಷಣ ನೀತಿಗೆ ಮಕ್ಕಳನ್ನು ಬದಲಾಯಿ ಸುವುದರ ಜತೆ ಜತೆಗೆ ಬದಲಾಗಿರುವ ಮಕ್ಕಳ ಮನಸ್ಥಿತಿ ಯನ್ನೂ ಪರಿವರ್ತಿಸಬಹುದಾದ ಸನ್ನಿವೇಶದಲ್ಲಿ ನಾವಿದ್ದೇವೆ.

ಒಂದು ಮಗುವಿನ ಬೆಳವಣಿಗೆ ಕೇವಲ ಶಾಲೆಯಿಂದಾಗಲಿ ಪಠ್ಯದಿಂದಾಗಲೇ ಆಗುವುದಿಲ್ಲ. ಶಿಕ್ಷಣ ಎನ್ನುವುದು ಒಂದು ಪರಿಪೂರ್ಣ ಪ್ರಜ್ಞೆ. ಅದೊಂದು ಅರಿವು. ಮಕ್ಕಳ ಪಠ್ಯ ಕೇವಲ ಕಾಲು ಭಾಗದಷ್ಟೇ. ವಿದ್ಯಾರ್ಥಿಗೆ ಶೈಕ್ಷಣಿಕವಲ್ಲದ ಪರಿಸರದಿಂದ, ಪಠ್ಯೇತರ ಚಟುವಟಿಕೆಗಳಿಂದ ಕಲಿಯುವಂತಹದ್ದು ಬಹಳ ಇರುತ್ತದೆ. ಪ್ರಸ್ತುತ ಕೋವಿಡ್‌ನಿಂದ ಶಾಲೆ ವಿಚಾರವಾಗಿ ಸಿಕ್ಕಿರುವ ಬಿಡುವು ಮಕ್ಕಳನ್ನು ಸಾಕಷ್ಟು ಬದಲಾಯಿಸಿದೆ.

ನೇರ ಶಿಕ್ಷಣಕ್ಕಿಂತ ಪರ್ಯಾಯ ಶಿಕ್ಷಣದ ಬಗ್ಗೆ ಯೋಚಿಸುವಾಗ ಆನ್‌ಲೈನ್‌ ಶಿಕ್ಷಣ ಶುರುವಾಗಿದೆ. ಯಾವ ಮಕ್ಕಳಿಗೆ ಮೊಬೈಲ್‌ ಕೊಟ್ಟರೆ ದಾರಿತಪ್ಪುತ್ತಾರೆ ಎನ್ನುವ ಮಾತಿತ್ತೋ ಈಗ ಅದೇ ಮಕ್ಕಳಿಗೆ ಸಾಲ ಮಾಡಿಯಾದರೂ ಮೊಬೈಲ್‌ ಕೊಡಿಸಿ ಪೋಷಕರು ತೆಪ್ಪಗೆ ಕುಳಿತುಕೊಳ್ಳುತ್ತಿದ್ದಾರೆ.

ತಂದೆ-ತಾಯಿಗಳಿಗೇ ಅರಿವಿಲ್ಲ
ಶಾಲೆಗೆ ಮಕ್ಕಳನ್ನು ಕಳುಹಿಸುವುದನ್ನು ಬಿಟ್ಟು ಬೇರೆ ಪರ್ಯಾಯ ಆನ್‌ಲೈನ್‌ ಶಿಕ್ಷಣ ಎಂದಾಗ ಪೋಷಕರು ಕೂಡ ಅರೆ ಮನಸ್ಸಿನಿಂದ ಒಪ್ಪಿದ್ದಾರೆ. ಹೇಗಾದರೂ ಸರಿ ಮಕ್ಕಳ ಶಿಕ್ಷಣ ಹಾಳಾಗಬಾರದು ಎನ್ನುವ ಮನಸ್ಥಿತಿಯಲ್ಲಿಯೇ ಪೋಷಕರಿದ್ದಾರೆ. ಹಾಗಾಗಿ ಈಗ ಆನ್‌ಲೈನ್‌ಗೆ ಮಕ್ಕಳ ಜತೆಗೆ ಪೋಷಕರೂ ಕೂಡ ಹೊಂದಿಕೊಳ್ಳಲು ಶುರುಮಾಡಿದ್ದಾರೆ. ಆದರೆ ಬಹುತೇಕ ಪೋಷಕರಿಗೆ ಆನ್‌ಲೈನ್‌ ಶಿಕ್ಷಣದ ಒಳಹೊರಗು ಗೊತ್ತಿಲ್ಲ. ಈಗೀಗ ಮಕ್ಕಳಿಗೆ ಮೊಬೈಲ್‌ ಕೊಟ್ಟ ಪರಿಣಾಮ ಈಗ ಪೋಷಕರಿಗೆ ಅರಿವಾಗಲು ಶುರುವಾಗಿದೆ.

ಆನ್‌ಲೈನ್‌ನಲ್ಲಿ ಪಾಠ ನಡೆಯುತ್ತಿದ್ದರೆ ಮಕ್ಕಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಾ, ಮತ್ತೆನೋ ಮಾಡುತ್ತಿರುತ್ತಾರೆ. ಮೊಬೈಲ್‌ನಲ್ಲಿ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಪೋಷಕರು ನೋಡುವಾಗ ಮಾತ್ರ ಶಿಸ್ತಾಗಿ ಕಾಣುವ ಮಕ್ಕಳು ಆನ್‌ಲೈನ್‌ನಲ್ಲಿ ಬೇಕಿದ್ದಕ್ಕಿಂತಲೂ ಬೇಡದ್ದ‌ನ್ನೇ ಹೆಚ್ಚು ಕಲಿಯುತ್ತಿದ್ದಾರೆ ಎನ್ನುವ ದೂರುಗಳೂ ಇವೆ. ತಂದೆ ತಾಯಿ ಮೊಬೈಲ್‌ ಬಗ್ಗೆ ಎ,ಬಿ,ಸಿ,ಡಿ ಕಲಿಯುವ ವೇಳೆಗಾಗಲೇ ಮಕ್ಕಳಾಗಲೇ ಹೊಸ ಹೊಸ ಅಪ್‌ಗ್ರೇಡ್‌ಗಳ ಬಗ್ಗೆ ಪೋಷಕರಿಗೆ ಹೇಳಿ ಕೊಡುತ್ತಿರುತ್ತಾರೆ.

ಶಾಲೆ ತೆರೆಯುವುದು ಬೇಡವೇ ಬೇಡ ಅನ್ನುವುದು ಬೇಡ
ಮೊಬೈಲ್‌ ಅಡಿಕ್ಷನ್‌ನಿಂದ ಮಕ್ಕಳು ಹೊರಬಾರದ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ಮೊಬೈಲ್‌ನಲ್ಲಿ ಪಾಠ ಮೊಬೈಲ್‌ನಲ್ಲೇ ಆಟವಾ ಗುತ್ತಿದೆ. ಮನೆಯ ಒಳಗೆ ರೂಮಿನ ಕೋಣೆಯೊಳಗೆ ಬಂಧಿಯಾಗುತ್ತಿದ್ದಾರೆ. ಪೋಷಕರಿಗೆ ಆತಂಕವಾಗುತ್ತಿದೆ ಆದರೆ ಏನೂ ಮಾಡಲಾಗದ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ನಾನು ಹೇಳುವುದೇನೆಂದರೆ ಶಾಲೆ ತೆರೆಯು ವುದು ಬೇಡವೇ ಬೇಡ ಅನ್ನೋ ಮನಃಸ್ಥಿತಿಯಿಂದ ಪೋಷಕರು ಹೊರ ಬರಬೇಕು. ಯೂರೋಪಿ ಯನ್‌ ದೇಶಗಳಲ್ಲಿ ಈಗ ಶಾಲೆಗಳನ್ನು ಆರಂಭಿಸಲು ಶುರು ಮಾಡಿದ್ದಾರೆ.

1. ಮಕ್ಕಳಿಗೆ ಮನೆಯಲ್ಲಿ ಶುಚಿತ್ವದ ಪಾಠ ಮಾಡಲು ಪೋಷಕರು ಶುರುಮಾಡಿದ್ದಾರೆ.
2. ಮಕ್ಕಳಿಗೆ ಆಸ್ಪತ್ರೆಯಲ್ಲಿ ಇಮ್ಯುನಿಟಿ ಪರೀಕ್ಷೆ ಮಾಡಿಸುತ್ತಿದ್ದಾರೆ. ಮಕ್ಕಳ ದೈಹಿಕ ಸಾಮರ್ಥ್ಯದ ಬಗ್ಗೆ ಪ್ರಮಾಣಪತ್ರ ಪಡೆದುಕೊಳ್ಳುತ್ತಿದ್ದಾರೆ.
3. ಮಕ್ಕಳ ಜತೆಗೆ ಪೋಷಕರು ಕೂಡ ಸೆಲ್ಫ್ ಮಾನಿಟರಿಂಗ್‌ ಮಾಡಿಕೊಳ್ಳುತ್ತಿದ್ದಾರೆ. ತಾವು ಕೂಡ ಕೋವಿಡ್‌ ಪರೀಕ್ಷೆ ಮಾಡಿಸಿ ಅದರ ಸರ್ಟಿಫಿಕೇಟ್‌ ಶಾಲಾ ಆಡಳಿತ ಮಂಡಳಿಗೆ ಕಳುಹಿಸಲು ಅಣಿಯಾಗಿದ್ದಾರೆ.
4. ಶಾಲೆಗಳನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಿ ಶಿಕ್ಷಕರು ಕಡ್ಡಾಯ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಸುರಕ್ಷಿತ ಕ್ರಮಗಳೊಂದಿಗೆ ಪಾಠ ಮಾಡುವ ವ್ಯವಸ್ಥೆಯಾಗುತ್ತಿದೆ. ಶಿಕ್ಷಕರಿಗೂ ಕೂಡ ಪ್ರತ್ಯೇಕ ತರಬೇತಿ ನೀಡಲಾಗುತ್ತಿದೆ.

ನಮ್ಮಲ್ಲಿ ಮೊದಲು ಏನಾಗಬೇಕು
ನಮ್ಮ ಭಾರತೀಯ ಶಿಕ್ಷಣ ಪದ್ಧತಿ ಒಂದು ಶಿಸ್ತಿಗೆ ಒಳಪಡಲು ಇನ್ನೂ ಕೂಡ ಪಡಿಪಾಟಲು ಪಡುತ್ತಿದೆ. ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿಯು ಹೊಸ ಭರವಸೆಯನ್ನು ಹುಟ್ಟುಹಾಕಿದೆ. ಅದರ ಜಾರಿ ಯಾವಾಗ ಆಗುತ್ತದೆ ಎನ್ನುವ ಬಗ್ಗೆ ಅನೇಕ ಗೊಂದಲಗಳಿವೆ. ಸದ್ಯ ನಾವು ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗಬೇಕು.

1. ಮಕ್ಕಳಲ್ಲಿ ಸಣ್ಣ ಪುಟ್ಟ ಆನಾರೋಗ್ಯಗಳು ಉಂಟಾದಾಗ ಅದನ್ನು ಅವಗಣಿಸುವುದನ್ನು ಮೊದಲು ಬಿಡಬೇಕು. ಅವರಿಗೆ ಚಿಕಿತ್ಸೆ ಕೊಡಿಸಬೇಕು. ನಿಗದಿತ ಸಮಯಕ್ಕೆ ನೀಡಬೇಕಿರುವ ಲಸಿಕೆಗಳನ್ನು, ನಿಯಮಿತವಾದ ಪರೀಕ್ಷೆಗಳನ್ನು ಮಾಡಿಸಬೇಕು.

2.ಮಕ್ಕಳನ್ನು ನೇರ ಶಾಲೆಗೆ ಕಳುಹಿಸುವ ಮುನ್ನ ಅವರಿಗೆ ಮಾನಸಿ ಕವಾಗಿ ಸಿದ್ಧತೆ ಮಾಡುವಂತಹ ಕಾರ್ಯಾಗಾರ ಗಳನ್ನು ಶಾಲೆಗಳು ಆರಂಭಿಸಬೇಕು. ಮಕ್ಕಳಿಗೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಬೇಕು.

3.ಮಕ್ಕಳಿಗೆ ಸ್ಯಾನಿಟೈಸರ್‌, ಮಾಸ್ಕ್ ಬಳಸಲು ಸಲಹೆ ಮಾಡ ಬಹುದು ಆದರೆ ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಮಾಡುವುದು ತುಸು ಕಷ್ಟವೇ, ಹಾಗಾಗಿ ಮಕ್ಕಳಿಗೆ ಬಿಡುವಿನ ಅವಧಿಯನ್ನು ಕಡಿಮೆ ಮಾಡಬೇಕು.

4. ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ದಿನದ ಬೇರೆ ಬೇರೆ ಅವಧಿಗಳಲ್ಲಿ ತರಗತಿ ನಡೆಸಲು ಸಮಯ ಬದಲಾವಣೆ ಮಾಡಬೇಕು.

ಇನ್ನು ಕಾಲೇಜುಗಳ ವಿಷಯಕ್ಕೆ ಬರುವುದಾದರೆ, ಕಾಲೇಜು ವಿದ್ಯಾರ್ಥಿಗಳು ಶಾಲಾ ಮಕ್ಕಳಿ ಗಿಂತ ಭಿನ್ನ. ಅವರಲ್ಲಿ ಸಾಮಾಜಿಕ ಹೊಣೆಗಾರಿಕೆ ಮೂಡಿಸುವುದು ಅಗತ್ಯ. ಮಕ್ಕಳ ಬಗ್ಗೆ ತೀರಾ ಪೊಸೆಸಿವ್‌ ಆಗಿ ಯೋಚಿಸಿ ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುವುದು ಬೇಡ. ಮಕ್ಕಳನ್ನು ಮಕ್ಕಳಾಗಲು ಬಿಡಿ. ನಿಮ್ಮ ಒತ್ತಡ ಅವರಿಗೆ ಹಿಂಸೆ ಅನ್ನಿಸಬಾರದು. ಅಂತಿಮವಾಗಿ ಮಕ್ಕಳ ಭವಿಷ್ಯ ನಿರ್ಮಾಣ ಇಡೀ ಸಮಾಜದ ಜವಾಬ್ದಾರಿ. ಪ್ರಸ್ತುತ ಸಂದರ್ಭ ದಲ್ಲಿ ಅದಕ್ಕೆ ಬೇಕಿರುವ ಪೂರಕ ವಾತಾವರಣ ಸೃಷ್ಟಿಯಾಗಬೇಕು.

ಡಾ| ಗಿರೀಶ್‌ ಚಂದ್ರ

ಟಾಪ್ ನ್ಯೂಸ್

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.