ವಾಹನಗಳ ವಿಮೆ ನವೀಕರಣ: ಮಾಲಿನ್ಯ ತಪಾಸಣೆ ಪ್ರಮಾಣ ಪತ್ರ ಕಡ್ಡಾಯ
Team Udayavani, Sep 6, 2020, 6:16 AM IST
ಸಾಂದರ್ಭಿಕ ಚಿತ್ರ
ಮಣಿಪಾಲ: ವಾಹನಗಳ ವಿಮೆ ನವೀಕರಿಸುವ ಸಂದರ್ಭದಲ್ಲಿ ನಿಗದಿಪಡಿಸಲಾದ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪರಿಶೀಲಿಸುವಂತೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಎಲ್ಲ ವಿಮಾ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಈ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಕಠಿನ ಮಾರ್ಗಗಳನ್ನು ಅನುಸರಿಸಲು ಸರಕಾರ ಮುಂದಾಗಿದೆ. ವಿಮೆ ಪಾಲಿಸಿ ಮಾಡಿಸುವ ಸಂದರ್ಭದಲ್ಲಿ ಎಲ್ಲ ಮಾದ ರಿಯ ಮೋಟಾರು ವಾಹನಗಳ ಹೊಗೆ ತಪಾಸಣೆ ಪ್ರಮಾಣ ಪತ್ರವನ್ನು ಪರಿಶೀಲಿಸುವಂತೆ ಸೂಚಿಸಿದೆ. ಆಗಸ್ಟ್ 20ರಂದು ಐಆರ್‌ಡಿಎಐ ಈ ಸುತ್ತೋಲೆ ಹೊರಡಿಸಿದೆ.
ವಾಯು ಮಾಲಿನ್ಯ ಆತಂಕ
ದಿಲ್ಲಿ ಮಹಾನಗರದಲ್ಲಿ ವಾಯು ಮಾಲಿನ್ಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದು ಅಪಾಯಕಾರಿ ಮಟ್ಟದಲ್ಲಿದೆ. ವಾಯುಮಾಲಿನ್ಯದಿಂದಾಗಿ ವಾತಾವರಣ ಹದಗೆಡುತ್ತಿದ್ದು ಜನರು ಉಸಿರಾಡಲೂ ಪರದಾಟ ಅನುಭವಿಸುವಂತಾಗಿದೆ. ಇದು ಲಕ್ಷಾಂತರ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿದೆ. ಈ ನಿಟ್ಟಿನಲ್ಲಿ ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕಲು ಮೋಟಾರು ವಿಮೆ ಸಂದರ್ಭ ಪಿಯುಸಿ ಪ್ರಮಾಣ ಪತ್ರ ಅಥವಾ pollution under control certificate P ಕಡ್ಡಾಯವಾಗಿ ಪಡೆಯಬೇಕು.
ಸುಪ್ರೀಂ ಕೋರ್ಟ್ ಹೇಳಿಕೆ
ಹೆಚ್ಚುತ್ತಿರುವ ವಾಹನ ಮಾಲಿನ್ಯದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಮೋಟಾರು ವಿಮಾ ಪಾಲಿಸಿಯನ್ನು ನವೀಕರಿಸುವ ದಿನಾಂಕದಂದು ಮಾನ್ಯತೆ ಪಡೆದ ಪ್ರಮಾಣಪತ್ರವನ್ನು ಹೊಂದಿಲ್ಲದಿದ್ದರೆ ವಾಹನವನ್ನು ವಿಮೆ ಮಾಡದಂತೆ ವಿಮೆದಾರರಿಗೆ ನಿರ್ದೇಶನ ನೀಡಿತ್ತು.
ಏನಿದು ಪಿಯುಸಿ ಪ್ರಮಾಣಪತ್ರ?
ವಾಹನಗಳಿಂದ ಹೊರಸೂಸುವಿ ಕೆಯು ಮಾಲಿನ್ಯವನ್ನು ಪರಿಶೀಲಿಸುವ ಪ್ರಮಾಣಪತ್ರ ಇದಾಗಿದೆ. ಎಲ್ಲ ರೀತಿಯ ಮೋಟಾರು ವಾಹನಗಳಿಗೆ ಮಾಲಿನ್ಯ ಮಾನದಂಡಗಳು ಮತ್ತು ಹೊರಸೂಸುವಿಕೆಯ ಮಟ್ಟವನ್ನು ನಿಗದಿಪಡಿಸಲಾಗಿದೆ. ವಾಹನವು ಹೊರಸೂಸುವ ಮಾಲಿನ್ಯದ ಪ್ರಮಾಣವು ನಿಗದಿತ ಪ್ರಮಾಣದಲ್ಲಿದ್ದರೆ ಮಾತ್ರವೇ ಪಿಯುಸಿ ವಾಹನ ಮಾಲಕರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಹೊಸ ವಾಹನಕ್ಕೂ ಅನ್ವಯವೇ?
ಹೊಸದಾಗಿ ಖರೀದಿಸಿದ ವಾಹನಗಳಿಗೆ ಒಂದು ವರ್ಷದ ಮಟ್ಟಿಗೆ ಪಿಯುಸಿ ಹೊಂದುವ ಅಗತ್ಯವಿಲ್ಲ. ನಿಯಮಗಳ ಪ್ರಕಾರ ವಾಹನ ನೋಂದಣಿಯ 1 ವರ್ಷದ ಬಳಿಕ ಕಡ್ಡಾಯವಾಗಿ ಪಿಯುಸಿ ಪ್ರಮಾಣಪತ್ರ ಪಡೆಯಬೇಕು. ಇದನ್ನು ಹೊಂದಿಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ವಿವಿಧ ಅವಧಿಗಳಿಗೆ ಪಿಯುಸಿ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ.
ಅಧಿಕ ಮಾಲಿನ್ಯ ಇದ್ದರೆ ಪ್ರಮಾಣ ಪತ್ರ ಇಲ್ಲ
ನಿಗದಿಪಡಿಸಿದ ಮಾನದಂಡಗಳಿಗಿಂತ ಹೆಚ್ಚಿನ ಪ್ರಮಾಣದ ಮಾಲಿನ್ಯವನ್ನು ಹೊರಸೂಸುತ್ತಿದ್ದರೆ ಪಿಯುಸಿ ಪ್ರಮಾಣಪತ್ರವನ್ನು ನೀಡಲಾಗುವುದಿಲ್ಲ. ಪ್ರಮಾಣ ಪತ್ರ ಇಲ್ಲದ ವಾಹನಗಳನ್ನು ಓಡಿಸುವಂತಿಲ್ಲ. ವಾಹನವನ್ನು ದುರಸ್ತಿ ಮಾಡಿಸಿ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.