473 ಮಂದಿಗೆ ಕೋವಿಡ್ ಸೋಂಕು
Team Udayavani, Sep 6, 2020, 3:19 PM IST
ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಶನಿವಾರ 473 ಮಂದಿಗೆ ಸೋಂಕು ತಗುಲಿದ್ದು, 331 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.473 ಹೊಸ ಪ್ರಕರಣಗಳಿಂದ 14235 ಸೋಂಕಿತರು ಆಗಿದ್ದು, ಒಂದೇ ದಿನ 331 ಮಂದಿ ಗುಣಮುಖರಾಗಿ ಇಲ್ಲಿಯವರೆಗೆ 10145 ಜನ ಗುಣಮುಖರಾಗಿ ಬಿಡುಗಡೆ ಆದಂತಾಗಿದೆ.
ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್-19 ವಾರ್ಡ್‌ನಲ್ಲಿ ಸದ್ಯ 3887 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿನವರೆಗೆ 1,08,624 ಜನರ ಮೇಲೆ ನಿಗಾ ಇಡಲಾಗಿದೆ. ಇದುವರೆಗೆ 26,960 ಜನರು 14 ದಿನಗಳ ಕಾಲ ಗೃಹ ನಿಗಾದಲ್ಲಿದ್ದರೆ, ಒಟ್ಟು 31,915 ಜನರು 14 ದಿನಗಳ ಗೃಹ ನಿಗಾ ಪೂರ್ಣಗೊಳಿಸಿದ್ದರೆ, 45,462 ಜನರು 28 ದಿನಗಳ ಗೃಹನಿಗಾ ಅವಧಿ ಮುಕ್ತಾಯಗೊಳಿಸಿದ್ದಾರೆ. ಇಂದಿನವರೆಗೆ 1,07,328 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 90,728 ವರದಿ ನಕಾರಾತ್ಮಕವಾಗಿದೆ. ಇನ್ನೂ 1352 ಜನರ ವರದಿ ಬರುವುದು ಬಾಕಿ ಇದೆ. ಸೋಂಕಿನಿಂದ 203 ಜನ ಬಲಿಯಾದಂತಾಗಿದೆ ಎಂದು ಜಿಲ್ಲಾ ವೈದ್ಯಕೀಯ ವರದಿ ತಿಳಿಸಿದೆ.
23 ಜನರಿಗೆ ಸೋಂಕು : ಗೋಕಾಕ: ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಶನಿವಾರ 23 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಗೋಕಾಕ ನಗರದಲ್ಲಿ-5, ಅಕ್ಕತಂಗೇರಹಾಳ-6, ಯಾದವಾಡ-5, ಮಲ್ಲಾಪೂರ-2, ಗೊಡಚಿನಮಲ್ಕಿ, ಮಮದಾಪುರ, ಬೆಣಚಿನಮರಡಿ, ಘಟಪ್ರಭಾದೇವೇಗೌಡನಹಟ್ಟಿ, ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ಆಯಾ ಸಮೀಪದ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಂದು ಡಾ.ಜಗದೀಶ ತಿಳಿಸಿದ್ದಾರೆ.
ಖಾನಾಪುರ : ತಾಲೂಕಿನಲ್ಲಿ ಶನಿವಾರ 27 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಪಟ್ಟಣದಲ್ಲಿ 18 ಜನರಿದ್ದು, ಗಾಂಧಿನಗರ 1, ವಿಠೊಬಾ ಗಲ್ಲಿ 4, ಶಿವಾಜಿನಗರ 4, ಚುರಮುರಕರ ಗಲ್ಲಿ 3, ರೈಲ್ವೆ ಸ್ಟೇಶನ್ ರಸ್ತೆ 1, ವಿಠ್ಠಲ ರುಕ್ಮಾಯ್ ಗಲ್ಲಿ 1, ಲಕ್ಷ್ಮೀ ಗಲ್ಲಿ 1, ಬಿರ್ಜೆ ಗಲ್ಲಿ 1, ಕೆಎಸ್‌ಆರ್‌ಪಿ ರಸ್ತೆ1, ದುರ್ಗಾ ನಗರ 1, ಹಲಕರ್ಣಿ 1, ಬಾಂದೇವಾಡಕರ 1, ಪ್ರಭುನಗರ 2, ಲೋಂಡಾ 2, ಖೈರವಾಡ 1,ಹಡಲಗಾ 1, ಕೊರವಿನಕೊಪ್ಪದ 1 ಪ್ರಕರಣ ಕಂಡು ಬಂದಿದೆ.
ಸಾಂಬ್ರಾ : ಬೆಳಗಾವಿ ತಾಲೂಕಿನ ಗೋಜಗೆ, ಕಿಣಯೆ, ಕಂಗ್ರಾಳಿ, ಬಡಸ್, ಹುದಲಿ, ಕೆ.ಕ.ಕೊಪ್ಪ, ಮಜಗಾಂವ, ಹಾಲಗಾ, ಕಾಕತಿ ಸಾಂಬ್ರಾ, ಕಣಬರ್ಗಿ ಸೇರಿದಂತೆ ತಾಲೂಕಿನಲ್ಲಿ 167 ಜನರಿಗೆ ಶನಿವಾರ ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಸಾಂಬ್ರಾ ವಾಯುಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ 70ಕ್ಕೂ ಹೆಚ್ಚು ತರಬೇತುದಾರರಿಗೆ ಸೋಂಕು ದೃಢಪಟ್ಟಿದೆ. ಕಂಗ್ರಾಳಿ ಗ್ರಾಮದ 36, 39 ಮತ್ತು 56 ವರ್ಷದ ವ್ಯಕ್ತಿಗೆ ಮತ್ತು 29 ಮತ್ತು 49 ವರ್ಷದ ಮಹಿಳೆಗೆ, ಹುದಲಿ ಗ್ರಾಮದ ಯಲ್ಲಮ್ಮ ಓಣಿ ನಿವಾಸಿ 22 ವರ್ಷದ ಮಹಿಳೆಗೆ, ಬಡಸ್ ಗ್ರಾಮದ 38 ವರ್ಷದ ವ್ಯಕ್ತಿಗೆ ಮತ್ತು 32 ವರ್ಷದ ಮಹಿಳೆಗೆ, ಕೆ.ಕೆ.ಕೊಪ್ಪ ಗ್ರಾಮದ 60 ವರ್ಷದ ವ್ಯಕ್ತಿಗೆ, ಮಜಗಾಂವ ಗ್ರಾಮದ 44 ಮತ್ತು 42 ವರ್ಷದ ವ್ಯಕ್ತಿಗೆ ಮತ್ತು 42 ವರ್ಷದ ಮಹಿಳೆಗೆ, ಹಾಲಗಾ ಗ್ರಾಮದ 40 ವರ್ಷದ ವ್ಯಕ್ತಿಗೆ, ಸಾಂಬ್ರಾ ಗ್ರಾಮದ 52 ವರ್ಷದ ಮಹಿಳೆಗೆ, ಕಣಬರ್ಗಿ ಗ್ರಾಮದ 62 ವರ್ಷದ ಮಹಿಳೆಗೆ, 32 ವರ್ಷದ ವ್ಯಕ್ತಿಗೆ, ಕಾಕತಿ ಗ್ರಾಮದ ದೇಸಾಯಿ ಗಲ್ಲಿ 40 ವರ್ಷದ ವ್ಯಕ್ತಿಗೆ, ಮಠ ಗಲ್ಲಿಯ 34 ವರ್ಷದ ವ್ಯಕ್ತಿಗೆ, ಗಣೇಶಪುರದ 29 ವರ್ಷದ ವ್ಯಕ್ತಿಗೆ, ಗೋಜಗೆ ಗ್ರಾಮದ 36 ವರ್ಷದ ಮಹಿಳೆಗೆ, ಕೊರೊನಾ ಸೋಂಕು ದೃಢಪಟ್ಟಿದೆ
ಬೈಲಹೊಂಗಲ : ಪಟ್ಟಣದ ಒಂದು ಸೇರಿದಂತೆ ತಾಲೂಕಿನಲ್ಲಿ 14 ಕೋವಿಡ್ ಪಾಸಿಟಿವ್ ಕೇಸ್ ಶನಿವಾರ ಪತ್ತೆಯಾಗಿವೆ. ಪಟ್ಟಣದ ಪೊಲೀಸ್ ಕ್ವಾರ್ಟರ್ಸ್‌ನ 26 ವರ್ಷದ ಯುವಕ ಹಾಗೂ ತಾಲೂಕಿನ ಕೊರಿಕೊಪ್ಪ 3, ಉಡಿಕೇರಿ 3, ಬೆಳವಡಿ 2, ನಿಚ್ಚಣಕಿ, ಎಂ.ಕೆ.ಹುಬ್ಬಳ್ಳಿ, ಆನಿಗೋಳ, ದೊಡವಾಡ, ದೇವರಶೀಗಿಹಳ್ಳಿ ಗ್ರಾಮಗಳಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿವೆ. ತಾಲೂಕಿನಲ್ಲಿ ಒಟ್ಟು 951 ಪ್ರಕರಣ ಕಂಡು ಬಂದಿದ್ದು, 197 ಸಕ್ರಿಯ ಪ್ರಕರಣ ಇವೆ. ಚಿಕಿತ್ಸಾ ಕೇಂದ್ರದಿಂದ ಶನಿವಾರ 31 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಸ್. ಸಿದ್ದನವರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.