ಕೇವಲ 3000 ರೂ.ಕ್ಕಾಗಿ ಸ್ನೇಹಿತನ ಬರ್ಬರ ಕೊಲೆ
Team Udayavani, Sep 6, 2020, 4:09 PM IST
ಕಲಬುರಗಿ: ಕೇವಲ ಮೂರು ಸಾವಿರ ರೂಪಾಯಿಗಾಗಿ ಸ್ನೇಹಿತನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಂದ ಘಟನೆ ಶುಕ್ರವಾರ ತಡರಾತ್ರಿ ನಗರದ ಸೈಯದ್ ಗಲ್ಲಿಯಲ್ಲಿ ನಡೆದಿದೆ.
ರೋಜಾ ಬಡಾವಣೆಯ ಅಬ್ದುಲ್ ಇಮಶಾದ್ (32) ಕೊಲೆಯಾದ ದುರ್ದೈವಿ. ಅದೇ ಬಡಾವಣೆಯ ರವಿ, ಭೀಮಾ, ಅರುಣ್ ಮತ್ತು ಶರಣು ಎಂಬುವರೇ ಕೊಲೆಗೈದ ಆರೋಪಿಗಳು. ಇಮಶಾದ್ ತನ್ನ ಮನೆ ಬಳಿ ಕಿರಾಣಿ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ರವಿ, ಭೀಮಾ, ಅರುಣ್, ಶರಣು ಈ ನಾಲ್ವರ ಜತೆಗೂ ಇಮಶಾದ್ ಉತ್ತಮ ಸ್ನೇಹ ಹೊಂದಿದ್ದ. ನಿತ್ಯ ಐವರು ಸೇರಿ ಹರಟೆ ಹೊಡೆಯುತ್ತಿದ್ದರು. ಇವರ ಮನೆಗೆ ಅವರು, ಅವರ ಮನೆಗೆ ಇವರು ಹೋಗಿ ಬಂದು ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಇಮಶಾದ್ ಸ್ನೇಹಿತರ ಬಳಿ ಮೂರು ಸಾವಿರ ರೂ. ಹಣ ಪಡೆದಿದ್ದ. ನಂತರ ಇದೇ ವಿಷಯವಾಗಿ ಜಗಳವಾಗಿ ಇಮಾಶಾದ್‌ನೊಂದಿಗೆ ವೈಷಮ್ಯ ಬೆಳೆಯಲು ಕಾರಣವಾಗಿತ್ತು. ಶುಕ್ರವಾರ ರಾತ್ರಿ ಮನೆ ಬಳಿಯಿದ್ದ ಇಮಶಾದ್‌ನನ್ನು ಮಾತನಾಡೋದಿದೆ ಎಂದು ಹೇಳಿ ಕರೆದುಕೊಂಡು ಬಂದು ರಾತ್ರಿ 12.30ರ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಟ್ಟೆ ಮತ್ತು ದೇಹದ ವಿವಿಧ ಭಾಗಗಳಿಗೆ ಇರಿದು ಕೊಲೆ ಮಾಡಲಾಗಿದೆ. ಘಟನೆಯ ವಿಷಯ ತಿಳಿದು ರೋಜಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಸ್ಲಂ ಬಾಷಾ ಮತ್ತು ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Belve: ಸ್ನಾನಕ್ಕೆಂದು ನದಿಗಿಳಿದಿದ್ದ ಇಬ್ಬರು ಬಾಲಕರು ನೀರುಪಾಲು
Bengaluru: ಚಕ್ರ ವಾಹನಗಳು, ಮನೆ ಕಳ್ಳತನ: ಮೂವರು ಆರೋಪಿಗಳ ಬಂಧನ
Bellary; ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರ್.ಅಶೋಕ್
Belagavi: ವಕ್ಫ್ ಹೋರಾಟ ಮಾಡುವುದು ತಪ್ಪಾ..: ವಿಜಯೇಂದ್ರ ದೂರಿನ ಬಗ್ಗೆ ಯತ್ನಾಳ್ ಮಾತು
Koppala: ತೊಗರಿ ಬೆಳೆ ಕಟಾವಿಗೆ ಬಂತು ಯಂತ್ರ; 14 ಕ್ವಿಂಟಲ್ ಸಾಮರ್ಥ್ಯದ ಕಂಟೇನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.