ಶ್ವಾನ ನಿರ್ವಹಣೆಗೆ ದಿಲ್ಲಿ ಐಐಟಿಯ ಜಾಹೀರಾತು; ಎಲ್ಲೆಡೆ ವ್ಯಾಪಕ ಟೀಕೆ
ಬಿ.ಟೆಕ್ ಪದವಿ, ಕಾರು ಇದ್ದರೆ ಶ್ವಾನ ನಿರ್ವಹಣೆಗಾರ ಹುದ್ದೆ!
Team Udayavani, Sep 7, 2020, 6:56 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ (ದಿಲ್ಲಿ ಐಐಟಿ) ಶ್ವಾನ ನಿರ್ವಹಣೆಗಾರ ಹುದ್ದೆ ನೇಮಕಾತಿಗೆ ನೀಡಿರುವ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ.
ಈ ಜಾಹೀರಾತು ವಿವಾದಕ್ಕೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವ್ಯಂಗ್ಯಕ್ಕೀಡಾಯಿತು.
ದೋಷಪೂರಿತ ಜಾಹೀರಾತು ಉನ್ನತ ಅಧಿಕಾರಿಗಳ ಗಮನಕ್ಕೆ ಬಂದ ಬಳಿಕ ಈ ಶ್ವಾನ ನಿರ್ವಹಣೆಗಾರ ಹುದ್ದೆಗೆ ನೇಮಕಾತಿಯನ್ನು ರದ್ದುಪಡಿಸಲಾಗಿದೆ.
ಏನಿತ್ತು ಜಾಹೀರಾತಿನಲ್ಲಿ?: ಐಐಟಿ ಕ್ಯಾಂಪಸ್‌ನಲ್ಲಿ ಶ್ವಾನ ನಿರ್ವಹಣೆಗಾರ ಹುದ್ದೆ ಭರ್ತಿಗಾಗಿ ಆ.25ರಂದು ಜಾಹೀರಾತು ನೀಡಿದ್ದು, ಬಿ.ಟೆಕ್ ಅಥವಾ ಬಿಎಸ್ಸಿ, ಬಿ.ಎ. ಬಿ.ಕಾಂ. ಪದವಿ ಹಾಗೂ ಸ್ವಂತ ಕಾರು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 45 ಸಾವಿರ ರೂ. ವೇತನ ನೀಡಲಾಗುವುದು ಎಂದು ತಿಳಿಸಿದೆ.
ಮೂಲಗಳ ಪ್ರಕಾರ, ದಿಲ್ಲಿ ಪೊಲೀಸರಿಗೆ 20 ಸಾವಿರ ರೂ. ವೇತನ ನೀಡಲಾಗುತ್ತದೆ. ಆದರೆ ಶ್ವಾನ ನಿರ್ವಹಣೆಗಾರ ಹುದ್ದೆಗೆ ಇದಕ್ಕಿಂತ ದುಪ್ಪಟ್ಟು ವೇತನವನ್ನು ನೀಡುವುದಾಗಿ ಘೋಷಿಸಲಾಗಿತ್ತು.
ಸಾಮಾನ್ಯವಾಗಿ ಇಂತಹ ಹುದ್ದೆಗಳಿಗೆ 10, 12ನೇ ತರಗತಿ ವಿದ್ಯಾರ್ಹತೆಯನ್ನು ನಿಗದಿಪಡಿಸಿರಲಾಗಿರುತ್ತದೆ. ಆದರೆ ದಿಲ್ಲಿ ಐಐಟಿ ಪ್ರಕಾರ, ಈ ಹುದ್ದೆಗೆ ಯಾವುದಾದರೂ ಪದವಿ ಹಾಗೂ ಕಾರು ಹೊಂದಿರಬೇಕು. 21-35 ವರ್ಷ ವಯಸ್ಸಿನ ಮಹಿಳೆಯರು ಹಾಗೂ ಪುರುಷರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿತ್ತು.
ಅಲ್ಲದೆ, ಕಾರು ಹೊಂದಿದ್ದರೆ ಶ್ವಾನವನ್ನು ಪಶು ಚಿಕಿತ್ಸಾಲಯಕ್ಕೆ ಕರೆದೊಯ್ಯಲು ನೆರವಾಗುತ್ತದೆ. ನಾಯಿಗೆ ಲಸಿಕೆ ಹಾಕಿಸುವುದು, ಆರೈಕೆ ಮಾಡುವುದು, ವೈದ್ಯಕೀಯ ದಾಖಲೆ ಪತ್ರಗಳ ನಿರ್ವಹಣೆ, ಪಿಪಿಟಿ, ಎಕ್ಸೆಲ್ ಪ್ರದರ್ಶನ, ಕ್ರಿಮಿನಾಶಕ ಬಳಕೆ ಮತ್ತಿತರ ವಿಷಯಗಳಿಗಾಗಿ ಎನ್‌ಜಿಒ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲು ಕೆಲಸವನ್ನು ಮಾಡಬೇಕಿದೆ ಎಂದು ಐಐಟಿ ವಿವರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.