ಪರಿಸರ ಪ್ರಜ್ಞೆ ಮತ್ತು ಸಹಾನುಭೂತಿ


Team Udayavani, Sep 7, 2020, 12:47 PM IST

ಪರಿಸರ ಪ್ರಜ್ಞೆ ಮತ್ತು ಸಹಾನುಭೂತಿ

ನಶಿಸಿ ಹೋಗುತ್ತಿರುವ ಪ್ರಕೃತಿಯನ್ನು ಸಂರ ಕ್ಷಿಸಬೇಕು, ಮಲಿನವಾಗಿರುವ ನದಿಗಳನ್ನು ರಕ್ಷಿಸಬೇಕು, ವಾಯು ಮಾಲಿನ್ಯವನ್ನು ತಡೆಯ ಬೇಕು ಎಂಬೆಲ್ಲ ಕೂಗುಗಳನ್ನು ಬಹಳ ಹಿಂದಿನಿಂದಲೂ ನಾವು ಕೇಳುತ್ತ ಬಂದಿದ್ದೇವೆ. ಯಾರು ಈ ಕೆಲಸವನ್ನು ಮಾಡಬೇಕು, ಹೇಗೆ ಮಾಡಬೇಕು, ಪರಿಸರವನ್ನು ಚೆನ್ನಾಗಿ ಕಾಪಾಡಿ ಕೊಳ್ಳುವ ಕಳಕಳಿ ನಮ್ಮಲ್ಲಿ ಹೇಗೆ ಮೂಡುತ್ತದೆ ಎಂಬೆಲ್ಲ ಪ್ರಶ್ನೆಗಳಿವೆ. ನಾವು ಪರಿಸರದ ಒಂದು ಭಾಗ ಎಂಬುದನ್ನು ನಾವು ಅದರ ನಿಜಾರ್ಥದಲ್ಲಿ ಮನದಟ್ಟು ಮಾಡಿ ಕೊಳ್ಳದೆ ಇರುವುದೇ ಎಲ್ಲ ಸಮಸ್ಯೆಗೆ ಮೂಲ ಕಾರಣ ಎನ್ನುತ್ತಾರೆ ಜಿಡ್ಡು ಕೃಷ್ಣಮೂರ್ತಿ.

ನಮ್ಮ ಸುತ್ತಮುತ್ತ ಇರುವ ಮರಗಿಡ, ಪ್ರಾಣಿ, ಪಕ್ಷಿಗಳ ಜತೆಗೆ ನಮ್ಮನ್ನೂ ಒಂದಾಗಿ ಗುರುತಿಸಿಕೊಂಡು ಸುಖೀಸುವುದನ್ನು ಕಲಿಸು ವುದು ನಮ್ಮ ಶಿಕ್ಷಣ ಪದ್ಧತಿಯ ಭಾಗವಾಗ ಬೇಕು ಎನ್ನುವುದು ಜಿಡ್ಡು ಕೃಷ್ಣಮೂರ್ತಿ ಯವರ ಪ್ರತಿಪಾದನೆ. ಅದು ಬದುಕನ್ನು ಹೆಚ್ಚು ಸುಂದರ ವಾಗಿಸುತ್ತದೆ, ಜೀವನಕ್ಕೆ ಧನಾತ್ಮಕ ಒಳತೋಟಿಯನ್ನು ಒದಗಿಸುತ್ತದೆ ಎನ್ನುತ್ತಾರೆ ಅವರು.

ನಿಸರ್ಗ ಅಂದರೆ ಏನು? ಅದು ದೂರದ ಕಾಡು, ಬೆಟ್ಟ, ನದಿ ಅಥವಾ ಸಮುದ್ರವಲ್ಲ. ಅದನ್ನು ಹುಡುಕುತ್ತ ನಾವು ಎಲ್ಲೆಲ್ಲೊ ಅಲೆದಾಡಬೇಕಿಲ್ಲ. ನಮ್ಮ ಕಾಲ ಕೆಳಗೆ ಹರಿದಾಡುವ ಇರುವೆ, ಗೋಡೆಯಲ್ಲಿ ಜಿಗಿದಾಡುವ ಜೇಡ, ಮನೆಯ ಮುಂದಿನ ಮರ, ಹುಲ್ಲು ಎಲ್ಲವೂ ಪರಿಸರವೇ. ಈ ಎಲ್ಲವುಗಳ ಬಗೆಗೂ ಸಹಾನುಭೂತಿ, ಅವುಗಳಲ್ಲೊಂದಾಗುವ ಸಹ-ಅನುಭೂತಿಯೇ ನಿಜವಾದ ಪರಿಸರ ಪ್ರಜ್ಞೆ. ಸಹ-ಅನುಭೂತಿ ಎಂಬುದು ಬಹಳ ವಿಶೇಷವಾದ ಪದ. ಅದರ ಅರ್ಥವೂ ಬಹಳ ಸುಂದರವಾದದ್ದು ಮತ್ತು ಮುಖ್ಯವಾದದ್ದು. ಒಂದು ಮರ ಇದೆ ಎಂದುಕೊಳ್ಳಿ. ಅದರ ಭಾವನೆಗಳನ್ನು ನಾವೂ ಅನುಭವಿಸುವುದೇ ಸಹ-ಅನುಭೂತಿ. ಮರದ ಗೆಲ್ಲಿಗೆ ಕತ್ತಿಯೇಟು ಬಿದ್ದಾಗ ಅದಕ್ಕೆ ನೋವಾಗುತ್ತದೆ. ತನ್ನ ಪಾಡಿಗೆ ತಾನು ಹರಿದುಹೋಗುವ ಇರುವೆಯ ಮೇಲೆ ನಾವು ಕಾಲಿರಿಸಿದರೆ ಅದು ಬೇನೆ ಅನುಭವಿಸುತ್ತದೆ. ಅದನ್ನು ನಾವೂ ಅನುಭವಿಸಲು ಸಾಧ್ಯವಾಗುವುದೇ ಸಹ -ಅನುಭೂತಿ. ಇದು ಸಾಧ್ಯವಾದರೆ ಅತ್ಯಂತ ಅಗತ್ಯ ಸಂದರ್ಭಗಳ ವಿನಾ ನಾವು ಯಾರನ್ನೂ ನೋಯಿಸುವುದಿಲ್ಲ; ಸಣ್ಣ ಕೀಟವನ್ನೂ ಸಹ.
ನಮ್ಮ ಪರಿಸರವು ನಮ್ಮ ಬದುಕಿನ ಭಾಗ, ನಾವು ಪರಿಸರದ ಒಂದು ಭಾಗ ಎಂಬ ಈ ಪ್ರಜ್ಞೆ ನಮ್ಮಲ್ಲಿ ಮೂಡಿದರೆ ಜೀವನಕ್ಕೊಂದು ಹೊಸ ಒಳನೋಟ ಸಿಗುತ್ತದೆ. ನಮ್ಮ ಸಂವೇದನೆಗಳಿಗೆ ಹೊಸ ಅರ್ಥ ಬರುತ್ತದೆ. ಪ್ರತೀ ಗಿಡ, ಕೀಟ, ಸೂರ್ಯ, ಚಂದ್ರ, ತೊರೆಗಳನ್ನು ನಾವು ನೋಡುವ ನೋಟ ಬದಲಾಗುತ್ತದೆ.

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯಂತ ಅಗತ್ಯವಾಗಿ ಮಕ್ಕಳಿಗೆ ಕಲಿಸಿಕೊಡಬೇಕಾದದ್ದು ಇದು. ಶಿಕ್ಷಕರು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಭಾಷಾ ಪಠ್ಯಗಳನ್ನು ಮಾತ್ರ ತರಗತಿಗಳಲ್ಲಿ ಬೋಧಿಸಿದರೆ ಸಾಲದು. ಮಕ್ಕಳಲ್ಲಿ ನಾವು ಪರಿಸರದ ಭಾಗ ಎಂದು ಬದುಕುವ ಸಹಾನುಭೂತಿಯನ್ನು ಹುಟ್ಟಿಸುವುದು ಬಹಳ ಶ್ರೇಷ್ಠ ಕಾರ್ಯ. ಶಿಕ್ಷಣದಲ್ಲಿ ಅತೀ ಅಗತ್ಯವಾಗಿ ಆಗಬೇಕಾದದ್ದು ಇದು. ಈ ಪ್ರಜ್ಞೆಯು ಎಳೆಯದ ರಿಂದಲೇ ವ್ಯಕ್ತಿತ್ವದ ಭಾಗವಾಗಿ ಬೆಳೆದು ಬಂದರೆ ಪರಿಸರ ಸಂರಕ್ಷಣೆ ಎಂಬುದು ರಕ್ತಗತವಾಗುತ್ತದೆ. ಪರಿಸರ ಎಂಬುದು ನಮ್ಮದು, ನಾವು ಅದರ ಭಾಗ ಎಂಬುದೇ ನೈಜ ಪರಿಸರ ಪ್ರಜ್ಞೆ. ಆಗ ಪರಿಸರ ಎಂಬುದು “ಅನ್ಯ’ ವಾಗಿ ದೂರ ಉಳಿಯುವುದಿಲ್ಲ; ನಮ್ಮೊಳಗೆ ಒಂದಾಗುತ್ತದೆ.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.