ಬಿರುಗಾಳಿ: ಡಿಂಗಿ ಸಹಿತ ಮೀನುಗಾರ ನಾಪತ್ತೆ
Team Udayavani, Sep 8, 2020, 1:32 AM IST
ಸಾಂದರ್ಭಿಕ ಚಿತ್ರ
ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟ್ ರವಿವಾರ ತಡರಾತ್ರಿ ಬಿರುಗಾಳಿಗೆ ಸಿಲುಕಿದ್ದು ಬೋಟ್ನ ಡಿಂಗಿ(ಸಣ್ಣ ದೋಣಿ)ಯಲ್ಲಿ ಕುಳಿತಿದ್ದ ಓರ್ವ ಮೀನುಗಾರ ಡಿಂಗಿ ಸಮೇತ ನಾಪತ್ತೆಯಾಗಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ಹೊಗೆ ನಿವಾಸಿ ಆರ್ಥರ್ ಸುನಿಲ್ ಕುವೆಲ್ಲೋ (45) ನಾಪತ್ತೆಯಾದವರು. ಪರ್ಸಿನ್ ಬೋಟ್ನಲ್ಲಿ ಉಳ್ಳಾಲ ಉಳಿಯದ 29 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಬೆಳಗ್ಗೆ ಸುಮಾರು 11.30ಕ್ಕೆ ಬೋಟ್ನ ಬೆಲ್ಟ್ ತುಂಡಾಗಿದ್ದು, ಈ ಸಂದರ್ಭದಲ್ಲಿ ಸಮುದ್ರಕ್ಕೆ ಬೀಸಿದ್ದ ಬಲೆ ಸಂಪೂರ್ಣ ಮುದ್ದೆಯಾಗಿತ್ತು. ಮೀನುಗಾರರು ರಾತ್ರಿ ವರೆಗೆ ಬಲೆಯನ್ನು ಬಿಡಿಸುವ ಕಾಯಕದಲ್ಲಿ ತೊಡಗಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಗಾಳಿ ಮಳೆ ಹೆಚ್ಚಾಗಿ ಬೋಟ್ಗೆ ಕಟ್ಟಿದ್ದ ಡಿಂಗಿ ಹಗ್ಗ ತುಂಡಾಗಿ ಸಮುದ್ರಪಾಲಾಯಿತು. ಸುನಿಲ್ ಅವರು ಬಲೆ ಎಳೆಯಲೆಂದು ಡಿಂಗಿಯಲ್ಲಿ ಕುಳಿತಿದ್ದರು.
ಬೋಟ್ನ ತಾಂತ್ರಿಕ ತೊಂದರೆಯಿಂದಾಗಿ ರಕ್ಷಿಸಲು ಸಾಧ್ಯವಾಗಿಲ್ಲ. ಸೋಮವಾರ ಹಗಲಿಡೀ ಸಮುದ್ರದಲ್ಲಿ ಹುಡುಕಾಡಿದ್ದು ರಾತ್ರಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ. ಕರಾವಳಿ ಕಾವಲು ಪಡೆಗೂ ಮಾಹಿತಿ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.