ವರ್ಷದಲ್ಲಿ ಕೆರೆಗಳಿಗೆ ಹೇಮೆ ನೀರು: ಶಾಸಕ
Team Udayavani, Sep 8, 2020, 1:59 PM IST
ಮಾಗಡಿ: “ತಾಲೂಕಿನ ಕೆರೆಕಟ್ಟೆಗಳಿಗೆ ಹೇಮಾವತಿ ನದಿಯಿಂದ ನೀರು ತಂದೇ ತರುತ್ತೇವೆ ಎಂದು ಸಂಕಲ್ಪ ಮಾಡಿದ್ದೆ. ಅದೇ ರೀತಿ ಇನ್ನೊಂದು ವರ್ಷದಲ್ಲಿ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಶಾಸಕ ಎ.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚುವರಿ ಎರಡು ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಎಂಎಲ್ಸಿ ಎಚ್.ಎಂ.ರೇವಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ತಾನು ಹೆಚ್ಚು ಅನುದಾನಕ್ಕೆ ಹಲವು ಬಾರಿ ಮನವಿ ಮಾಡಿ ಒತ್ತಾಯ ಮಾಡಿದ್ದೆವು. ಕೊನೆಗೂ ಬಿಜೆಪಿ ಸರ್ಕಾರ ಸಚಿವ ಸಂಪುಟದಲ್ಲಿ 173 ಕೋಟಿ ರೂ. ಹಣ ನೀಡಲು ಒಪ್ಪಿಗೆ ನೀಡಿದೆ. ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುತ್ತಾರೆ ಎಂಬ ಭರವಸೆ ನೀಡಿದೆ. ಇದಕ್ಕಾಗಿ ಸಿಎಂ ಬಿ.ಎಸ್.ಯಡಿ ಯೂರಪ್ಪ, ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾ ಯಣ, ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದರು.
25 ಲಕ್ಷ ರೂ.ವೆಚ್ಚದಲ್ಲಿ ಕೊಠಡಿ ನಿರ್ಮಾಣ: ಪದವಿ ಕಾಲೇಜಿಗೆ ಹೆಚ್ಚವರಿ 2 ಕೊಠಡಿ ನಿರ್ಮಾಣಕ್ಕೆ ಹೌಸಿಂಗ್ ಬೋರ್ಡ್ 25 ಲಕ್ಷ ರೂ., ಬಿಡುಗಡೆ ಮಾಡಿದೆ. ಗುಣಮಟ್ಟದ ಕಾಮಗಾರಿಯನ್ನು ಬೋರ್ಡ್‌ನವರೇ ನಿರ್ಮಿಸಿ ಕಾಲೇಜಿಗೆ ಸಮರ್ಪಣೆ ಮಾಡಲಿದ್ದಾರೆ. ಶುದ್ಧ ನೀರಿನ ಘಟಕ, ಶೌಚಾಲಯ, ಕ್ಯಾಂಟಿನ್, ವಾಹನ ನಿಲುಗಡೆ ಸಮಸ್ಯೆ ಗಳಿವೆ. ಹಳೇ ಕಟ್ಟಡಕ್ಕೆ ವಿದ್ಯುತ್ ಸೌಕರ್ಯದ ಪುನರ್ ಜೋಡಣೆ, ಶಿಥಿಲ ಟೈಲ್ಸ್‌ಗಳ ಬದಲಾವಣೆ ಸೇರಿ ಮೂಲಭೂತವಾಗಿ ಏನೇನು ಸಮಸ್ಯೆಗಳಿವೆ ಎಂದು ಮಾಹಿತಿ ಪಡೆದು ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವುದಾಗಿ ತಿಳಿಸಿದರು.
ನ್ಯಾಯ ಸರ್ಕಾರದ ಪರ: ಭೈರಮಂಗಲ ಕೆರೆ ವಿಚಾರದಲ್ಲಿ ಬೇರಡೆ ಮೂಲಕ ಶುದ್ಧೀಕರಣ ಮಾಡಲು ಹೋಗಿದ್ದೆವು. ಈ ಸಂಬಂಧ ಕೆಲವರು ನ್ಯಾಯಾಲಯಕ್ಕೆ ಪಿಟಿಷನ್ ಹಾಕಿಕೊಂಡಿದ್ದಾರೆ. ಅವರು ಸಮಂಜಸವಾದ ಕಾರ್ಯಕ್ರಮದ ಯೋಜನೆ ಅರಿವಿಲ್ಲದೆ ನ್ಯಾಯಾಲಯಕ್ಕೆ ಹೋಗಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಂಜಿನಿಯರ್ ನ್ಯಾಯಾಲಯಕ್ಕೆ ಮಾಹಿತಿ ನೀಡಲಿದ್ದಾರೆ. ನ್ಯಾಯ ಸರ್ಕಾರದ ಪರವಾಗಿ ಬರುವ ವಿಶ್ವಾಸವನ್ನು ಶಾಸಕರು ವ್ಯಕ್ತಪಡಿಸಿದರು. ಪುರಸಭಾ ಸದಸ್ಯರಾದ ಹೇಮಾವತಿ, ರೇಖಾ, ವಿಜಯಾ, ಎಂ.ಎನ್.ಮಂಜುನಾಥ್, ಕಾಂತರಾಜು, ಅಶ್ವತ್ಥ, ರಮೇಶ್, ಎಪಿಎಂಸಿ ನಿರ್ದೇಶಕ ಮಂಜು ನಾಥ್, ರವಿಕುಮಾರ್, ವೆಂಕಟೇಶ್, ಜಯ ರಾಂ, ಶಿವಪ್ರಕಾಶ್, ಪ್ರಥಮ ದರ್ಜೆ ಕಾಲೇಜು ಪ್ರಾಂಶು ಪಾಲರಾದ ಶೈಲಜಾ, ಉಪನ್ಯಾಸಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.