4-5 ತಿಂಗಳಿನಿಂದ ಸಿಗುತ್ತಿಲ್ಲ ಸಾಮಾಜಿಕ ಭದ್ರತಾ ಪಿಂಚಣಿ; ಅನೇಕ ಫಲಾನುಭವಿಗಳ ಖಾತೆಯೇ ಸ್ಥಗಿತ
ತಂತ್ರಾಂಶ ನ್ಯೂನತೆಯಿಂದ ವಿಳಂಬ ಎನ್ನುವ ಅಧಿಕಾರಿಗಳು, ಆರ್ಥಿಕ ಸಂಕಷ್ಟದಿಂದ ಹಣ ಜಮೆ ಪ್ರಕ್ರಿಯೆ ವಿಳಂಬ?
Team Udayavani, Sep 9, 2020, 6:15 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ಸಾಮಾಜಿಕ ಭದ್ರತಾ ಯೋಜನೆ ಸಹಿತ ವಿವಿಧ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಕಳೆದ 4-5 ತಿಂಗಳಿನಿಂದ ಹಣ ಸಿಗುತ್ತಿಲ್ಲ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸಹಿತ ರಾಜ್ಯಾದ್ಯಂತ ಈ ಸಮಸ್ಯೆ ಯಿದ್ದು, ಸಾವಿರಾರು ಮಂದಿ ಸಂಕಷ್ಟಪಡುವಂತಾಗಿದೆ. ಈ ಬಗ್ಗೆ ವಿಚಾರಿಸಲು ಬಂದ ಫಲಾನುಭವಿಗಳಿಗೆ ತಮ್ಮ ಖಾತೆಯೇ ಕೆ-2 (ಖಜಾನೆ -2) ತಂತ್ರಾಂಶದಲ್ಲಿ ಸ್ಥಗಿತಗೊಂಡಿರುವ ಆತಂಕಕಾರಿ ಸಂಗತಿ ತಿಳಿದು ಬಂದಿದೆ. ವಿವಿಧ 9 ಪಿಂಚಣಿ ಯೋಜನೆಗಳಡಿ ಉಡುಪಿಯಲ್ಲಿ 1,29,479ಕ್ಕೂ ಹೆಚ್ಚು ಮತ್ತು ದ.ಕ.ದಲ್ಲಿ 1,47,950ಕ್ಕೂ ಅಧಿಕ ಮಂದಿ ಫಲಾನುಭವಿಗಳಿದ್ದಾರೆ.
ಫಲಾನುಭವಿಗಳು ತಾಲೂಕು ಕಚೇರಿಯಲ್ಲಿ ಕೇಳಿದರೆ ಸೂಕ್ತ ದಾಖಲೆ ಸಲ್ಲಿಸಿಲ್ಲ, ಬ್ಯಾಂಕ್ ಖಾತೆ ಸರಿಯಿಲ್ಲ, ವಿಳಾಸ ಸರಿಯಿಲ್ಲ, ವಿಳಂಬವಾಗ ಬಹುದು ಎನ್ನುವ ಕಾರಣ ನೀಡುತ್ತಾರೆ. ಮತ್ತೆ ಕೆಲವರದು ಖಾತೆ ಸ್ಥಗಿತಗೊಂಡಿದೆ ಎನ್ನುವುದಾಗಿ ಕೆ-2 ತಂತ್ರಾಂಶದಲ್ಲಿ ಕಾಣುತ್ತಿದೆ. ಜನವರಿಯಲ್ಲಿ ಕೆ-1 (ಖಜಾನೆ-1)ರಿಂದ ಕೆ-2ಕ್ಕೆ ಫಲಾನುಭವಿಗಳ ದಾಖಲೆ ವರ್ಗಾಯಿಸಲಾಗಿತ್ತು. ಆ ಬಳಿಕ ಈ ತರಹದ ಪ್ರಕರಣಗಳು ಕಾಣಿಸಿಕೊಂಡಿವೆ.
ಸರಕಾರಕ್ಕೆ ಆರ್ಥಿಕ ಸಂಕಷ್ಟವೇ?
ಆರ್ಥಿಕ ಸಂಕಷ್ಟಗಳಿಂದ ಸರಕಾರದ ಖಜಾನೆ ಖಾಲಿ ಯಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಆರೋಪವನ್ನು ಅಧಿಕಾರಿಗಳು ಅಲ್ಲಗಳೆದಿದ್ದಾರೆ.
ಆಗ ಬರುತ್ತಿತ್ತು, ಈಗಿಲ್ಲ…
ಕುಂದಾಪುರದ ವೃದ್ಧ ಫಲಾನುಭವಿಯೊಬ್ಬರು ಹೇಳುವಂತೆ ಫೆಬ್ರವರಿವರೆಗೆ ಪ್ರತೀ ತಿಂಗಳ 10ಕ್ಕೆ ಪಿಂಚಣಿ ಅವರ ಖಾತೆಗೆ ಜಮೆಯಾಗುತ್ತಿತ್ತು. ಕಳೆದ 6 ತಿಂಗಳಿನಿಂದ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ವಿಳಾಸ ಸರಿಯಿಲ್ಲ, ಬ್ಯಾಂಕ್ ಖಾತೆ ಮತ್ತು ಆಧಾರ್ ತಾಳೆಯಾಗುತ್ತಿಲ್ಲ ಎನ್ನುತ್ತಾರೆ. ಆದರೆ ಫೆಬ್ರವರಿಯ ವರೆಗೆ ಅದೇ ದಾಖಲೆ, ಅದೇ ವಿಳಾಸ ಹೊಂದಿದ್ದ ನನ್ನ ಖಾತೆಗೆ ಹಣ ಜಮೆಯಾದದ್ದು ಹೇಗೆ ಎನ್ನುವುದು ಈ ಫಲಾನುಭವಿಯ ಪ್ರಶ್ನೆ.
ಸಮಸ್ಯೆಗಳೇನು?
ಅನೇಕ ಫಲಾನುಭವಿಗಳ ಬ್ಯಾಂಕ್/ ಅಂಚೆ ಖಾತೆ ಸಂಖ್ಯೆ ಸಂಗ್ರಹಿಸಿ ಕೆ-2 ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡಿ, ಅದರ ಪ್ರತಿಯನ್ನು ಅಪ್‌ಲೋಡ್ ಮಾಡಿ ದರೂ ಖಾತೆ ಸಂಖ್ಯೆ ಸರಿಯಾಗಿಲ್ಲ ಎಂದು ಪಿಂಚಣಿ ಸ್ಥಗಿತಗೊಳಿಸಲಾಗಿದೆ. ಅವರ ಖಾತೆ ಈಗ ತಾತ್ಕಾಲಿಕವಾಗಿ ಸ್ಥಗಿತ ಪಟ್ಟಿಯಲ್ಲಿ ಕಾಣುತ್ತಿದೆ. ಸರಿಯಾದ ಖಾತೆ ಸಂಖ್ಯೆ ನಮೂದಿಸಿದ್ದರೂ ಇದೇ ಸಮಸ್ಯೆ. ಖಾತೆಗೆ ಹಣ ಜಮೆಯಾಗಿದೆ ಎಂದು ತೋರಿಸಿದರೂ ಪಿಂಚಣಿ ಸಿಗದಿರುವ ಪ್ರಕರಣಗಳಿವೆ. ಕೆಲವರ ಪಿಂಚಣಿ ಸ್ಥಿತಿಯು ಅನುಮೋದನೆಗೆ ಬಾಕಿ ಇದೆ ಎಂದು ತೋರಿಸುತ್ತದೆ. ಆದರೆ ಇದು ತಂತ್ರಾಂಶದಲ್ಲಿ ಕಾಣಿಸದೆ ಐಡಿ ನಂಬರ್ ಹಾಕಿ ಪರಿಶೀಲಿಸಿದಾಗ ಕಾಣುತ್ತದೆ.
ಸಂಬಂಧಪಟ್ಟ ಅಧಿಕಾರಿಗಳಿಂದ ವಿಸ್ತೃತವಾದ ವಿವರ
ಪಡೆದು, ಮೇಲಧಿಕಾರಿಗಳಿಗೆ ಕಳುಹಿಸ ಲಾಗಿದೆ. ಈ ವೇಳೆ ಕೆಲವರ ಹೆಸರಲ್ಲಿ 2-3 ಖಾತೆಗಳಿದ್ದುದು ಬೆಳಕಿಗೆ ಬಂದಿದೆ. ಅದಕ್ಕಾಗಿ ಕೆಲವರ ಖಾತೆ ಸ್ಥಗಿತಗೊಂಡಿರಬಹುದು. ಈ ಸಮಸ್ಯೆ ತಿಂಗಳೊಳಗೆ ಪರಿಹಾರವಾಗಲಿದೆ.
-ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.
ಕೆ-2 ತಂತ್ರಾಂಶದಲ್ಲಿ
ಅಪ್‌ಲೋಡ್ ಮಾಡಿದ ಬಳಿಕ ಫಲಾನುಭವಿಗಳಿಗೆ ತಾಂತ್ರಿಕ ಸಮಸ್ಯೆಗಳಾಗಿದ್ದರೆ ತಹಶೀಲ್ದಾರ್‌ಗೆ ಪರಿಹರಿಸಲು ಸೂಚನೆ ನೀಡಿದ್ದೇನೆ. ಆಧಾರ್ ಲಿಂಕ್ ಆಗದಿದ್ದರೆ ಹಣ ಪಾವತಿ ಕಷ್ಟ. ಈ ತರಹ ಏನೇ ಸಮಸ್ಯೆಯಿದ್ದರೂ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.