![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 9, 2020, 12:06 AM IST
ಸ್ಯಾನ್ ಫ್ರಾನ್ಸಿಸ್ಕೋದ ಅರಣ್ಯದಲ್ಲಿ ಕಾಣಿಸಿಕೊಂಡಿರುವ ಬೆಂಕಿ.
ಶೇವರ್ ಲೇಕ್: ಈ ವರ್ಷ ಕ್ಯಾಲಿಫೋರ್ನಿಯಾದಲ್ಲಿ ಉಂಟಾದ ಕಾಳ್ಗಿಚ್ಚು ಈವರೆಗೆ ದಾಖಲೆಯ 20 ಲಕ್ಷ ಎಕರೆ ಪ್ರದೇಶವನ್ನು ಸುಟ್ಟು ಕರಕಲಾಗಿಸಿದೆ. ಕಾಳ್ಗಿಚ್ಚಿನ ವ್ಯಾಪಿಸುವಿಕೆ ಮುಂದುವರಿದಿದ್ದು, ಅದು ಇನ್ನಷ್ಟು ಪ್ರದೇಶಗಳಿಗೆ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾದ ದಕ್ಷಿಣ ಭಾಗದಲ್ಲಿರುವ ಎಲ್ಲ 8 ರಾಷ್ಟ್ರೀಯ ಅರಣ್ಯಗಳನ್ನು ಮುಚ್ಚಲು ಅಮೆರಿಕದ ಅರಣ್ಯ ಸೇವಾ ವಿಭಾಗ ನಿರ್ಧರಿಸಿದೆ.
ಕ್ಯಾಲಿಫೋರ್ನಿಯಾದ ಇತಿಹಾಸದಲ್ಲೇ ಭೀಕರ ಎನ್ನಬಹುದಾದ ಕಾಳ್ಗಿಚ್ಚಿನಲ್ಲಿ ಇದೂ ಒಂದಾಗಿದ್ದು, ಸ್ಯಾನ್‌ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶವನ್ನು ದಹಿ ಸಿದೆ. 14 ಸಾವಿರಕ್ಕೂ ಅಧಿಕ ಅಗ್ನಿಶಾಮಕ ಸಿಬಂದಿ ಬೆಂಕಿ ಆರಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕಾಳ್ಗಿಚ್ಚಿಗೆ ಕಾರಣವಾದ ಸಾಧನ ಯಾವುದು?
ಲಾಸ್ ಏಂಜಲೀಸ್‌ನ ಪೂರ್ವ ಭಾಗದ ನಗರದಲ್ಲಿ ಕಾಳ್ಗಿಚ್ಚು ಉಂಟಾಗಿ ಸಾವಿರಾರು ಎಕರೆ ಭೂಮಿ ನಾಶವಾಗಲು ಹಾಗೂ ನೂರಾರು ಮಂದಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಕಾರಣವಾದ ಸಾಧನದ ಬಗ್ಗೆ ತಿಳಿದರೆ ಎಲ್ಲರಿಗೂ ಅಚ್ಚರಿ ಆಗೇ ಆಗುತ್ತದೆ. ತಮಗೆ ಹುಟ್ಟಿರುವ ಮಗು ಗಂಡೋ, ಹೆಣ್ಣೋ ಎಂಬುದನ್ನು ಘೋಷಿಸಲೆಂದು ಇಲ್ಲಿನ ದಂಪತಿ ಬಳಸಿದ ಸಾಧನವೇ ಬೆಂಕಿಗೆ ಮೂಲ ಕಾರಣ. ಪರ್ವತಗಳಿಂದ ಸುತ್ತುವರಿದ ಒಣ ಹುಲ್ಲುಗಾವಲಿಗೆ ಸ್ನೇಹಿತರೊಂದಿಗೆ ಆಗಮಿಸಿದ ದಂಪತಿ ತಾವು ತಂದಿದ್ದ ಸಾಧನದ ಮೂಲಕ ಫೈರ್ ಮಾಡಿದ್ದಾರೆ. ಈ ಮೂಲಕ ಮಗುವಿನ ಲಿಂಗವನ್ನು ಘೋಷಿಸುವುದು ಅವರ ಉದ್ದೇಶವಾಗಿತ್ತು. ಆದರೆ, ಆ ಸಾಧನದಿಂದ ಹೊಮ್ಮಿದ ಕಿಡಿಯಿಂದಾಗಿ ಹುಲ್ಲುಗಾವಲಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿತು. ಕೂಡಲೇ ಅಲ್ಲಿದ್ದವರು ನೀರಿನ ಬಾಟಲಿಗಳ ಮೂಲಕ ಬೆಂಕಿ ಆರಿಸಲು ಯತ್ನಿಸಿದರಾದರೂ, ಬೆಂಕಿಯ ಕೆನ್ನಾಲಿಗೆ ವಿಸ್ತರಿಸುತ್ತಲೇ ಹೋಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.