ಭಾರತದಲ್ಲಿ ರಷ್ಯಾ ಲಸಿಕೆ ಪ್ರಯೋಗ ಶೀಘ್ರ ಶುರು
ಭಾರತ ಸೇರಿದಂತೆ, ಸೌದಿ,ಯುಎಇ, ಫಿಲಿಪ್ಪೀನ್ಸ್ ಹಾಗೂ ಬ್ರೆಜಿಲ್ ಗಳಲ್ಲಿಯೂ ಈ ಪ್ರಯೋಗಗಳು ನಡೆಯಲಿವೆ
Team Udayavani, Sep 8, 2020, 12:20 PM IST
ಮಾಸ್ಕೋ: ರಷ್ಯಾ ತಯಾರಿಸಿರುವ “ಸುತ್ನಿಕ್’ ಹೆಸರಿನ ಕೋವಿಡ್ ಲಸಿಕೆಯ ಪ್ರಯೋಗಗಳು ಭಾರತದಲ್ಲಿ ಇದೇ ತಿಂಗಳು ಆರಂಭವಾಗಲಿವೆ ಎಂದು ರಷ್ಯನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಫಂಡ್ನ ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್ ತಿಳಿಸಿದ್ದಾರೆ.
“ಈ ತಿಂಗಳು ಮಾನವರ ಮೇಲಿನ ಪ್ರಯೋಗಗಳು ಶುರುವಾಗಲಿದ್ದು, ನವೆಂಬರ್ ವೇಳೆಗೆ ಲಸಿಕೆಯ ನಿಖರ ಫಲಿತಾಂಶಗಳು ಲಭ್ಯವಾಗಲಿದ್ದು, ಅವನ್ನು ನವೆಂಬರ್-ಡಿಸೆಂಬರ್ ವೇಳೆಗೆ ಅಧಿಕೃತವಾಗಿ ಪ್ರಕಟಿಸಲಾಗುವುದು’ ಎಂದು ಅವರು ಹೇಳಿದ್ದಾರೆ.
ಭಾರತ ಸೇರಿದಂತೆ, ಸೌದಿ,ಯುಎಇ, ಫಿಲಿಪ್ಪೀನ್ಸ್ ಹಾಗೂ ಬ್ರೆಜಿಲ್ ಗಳಲ್ಲಿಯೂ ಈ ಪ್ರಯೋಗಗಳು ನಡೆಯಲಿವೆ ಎಂದು ಕಿರಿಲ್ ತಿಳಿಸಿದ್ದಾರೆ.
ಮೊದಲ ಬಾರಿಗೆ ದೇಸೀ ವ್ಯಾಕ್ಸಿನ್ ಪ್ರದರ್ಶಿಸಿದ ಚೀನಾ
ಕೊರೊನಾಕ್ಕೆ ಜನ್ಮಕೊಟ್ಟು ಜಾಗತಿಕ ಕಣ್ಣಿನಲ್ಲಿ ವಿಲನ್ ಆದ ಚೀನಾ ಇದೇ ಮೊದಲ ಬಾರಿಗೆ ತಾನು ಕಂಡುಹಿಡಿದ ಲಸಿಕೆಗಳನ್ನು ಪ್ರದರ್ಶಿಸಿದೆ. ಚೀನಾದ ಔಷಧ ಕಂಪನಿಗಳಾದ ಸಿನೋವ್ಯಾಕ್ ಬಯೋಟೆಕ್ ಮತ್ತು ಸಿನೋಫಾರ್ಮ್ ಅಭಿವೃದ್ಧಿ ಪಡಿಸಿದ 2 ಕೊರೊನಾ ಲಸಿಕೆಗಳನ್ನು ಬೀಜಿಂಗ್ ವ್ಯಾಪಾರ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಸಣ್ಣ ಬಾಟಲ್ಗಳ ಮೇಲೆ ಹೆಚ್ಚಿನ ವಿವರಗಳು ಇಲ್ಲವಾದರೂ, ಇವೆರಡೂ ಲಸಿಕೆಗಳು ಇನ್ನೂ ಮಾರುಕಟ್ಟೆ ಪ್ರವೇಶಿಸಿಲ್ಲ. 3 ಪ್ರಯೋಗ ಹಂತಗಳನ್ನು
ಮುಗಿಸಿ, ವರ್ಷಾಂತ್ಯದಲ್ಲಿ ಲಸಿಕೆಗಳು ಜನತೆಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಲಸಿಕೆ ತಯಾರಕಾ ಸಂಸ್ಥೆಗಳು ಹೇಳಿಕೊಂಡಿವೆ. ವ್ಯಾಪಾರ ಮೇಳದಲ್ಲಿ
ಲಸಿಕೆ ಪ್ರದರ್ಶನದ ಬೂತ್ನ ಸುತ್ತ ಜನ ಎವೆಯಿಕ್ಕದೆ ನೋಡುತ್ತಿರುವ ದೃಶ್ಯ ಕಂಡುಬಂದಿತ್ತು ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.