2 ಸಾವಿರ ಮಂದಿಗೆ ಉಚಿತ ತುಳು ಲಿಪಿ ಪಾಠ

"ಜೈ ತುಳುನಾಡು' ಸಂಘಟನೆ: ಸಾಮಾಜಿಕ ಜಾಲತಾಣದ ಮೂಲಕ ಕಲಿಕೆ

Team Udayavani, Sep 10, 2020, 5:35 AM IST

Free Tulu script lesson for 2 thousand people

ಮಹಾನಗರ: ತುಳು ಲಿಪಿ ಪ್ರೋತ್ಸಾಹಕ್ಕಾಗಿ ರಾಜ್ಯ ಸರಕಾರ ಆಸಕ್ತಿ ತೋರುತ್ತಿರುವ ಮಧ್ಯೆಯೇ “ಜೈ ತುಳುನಾಡು’ ಸಂಘಟನೆ ದ.ಕ., ಉಡುಪಿ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸುಮಾರು 2,000 ಮಂದಿಗೆ ತುಳು ಲಿಪಿಯನ್ನು ಉಚಿತವಾಗಿ ಬೋಧಿಸಿದೆ. ತುಳು ಲಿಪಿ ಕಲಿಕೆಗೆ ಸಂಘಟನೆ ವತಿಯಿಂದ 35 ಪುರುಷರ ಮತ್ತು 20 ಮಹಿಳೆಯರ ವಾಟ್ಸಾಪ್‌ ಗ್ರೂಪ್‌ಗ್ಳನ್ನು ರಚಿಸಲಾಗಿದೆ. ಈ ಗ್ರೂಪ್‌ಗ್ಳಲ್ಲಿ ಸುಮಾರು 75ಕ್ಕೂ ಹೆಚ್ಚು ತುಳು ಲಿಪಿ ಶಿಕ್ಷಕರಿದ್ದಾರೆ. ಅವರು ಯಾವುದೇ ಸಂಭಾವನೆಯಿಲ್ಲದೆ ಉಚಿತವಾಗಿ ತುಳು ಲಿಪಿ ಕಲಿಸುತ್ತಿರುವುದು ಗಮನಾರ್ಹ.

ಸಂಘಟನೆಯು ತುಳು ಲಿಪಿ ಕಲಿಕೆಯ ಜತೆಗೆ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡುತ್ತಿದೆ. ಸದ್ಯ 100ಕ್ಕೂ ಅಧಿಕ ಮಂದಿ ಆನ್‌ಲೈನ್‌ ಮೂಲಕ ನಡೆಯುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಪ್ರಸ್ತುತ 800 ವಿದ್ಯಾರ್ಥಿಗಳು ತುಳು ಲಿಪಿ ತರಗತಿಯಲ್ಲಿ ಕಲಿಯುತ್ತಿದ್ದಾರೆ ಎನ್ನುತ್ತಾರೆ ಸಮಿತಿಯ ಪ್ರ. ಕಾರ್ಯದರ್ಶಿ ಸದಾಶಿವ ಮುದ್ರಾಡಿ.

ಹೇಗೆ ನಡೆಯುತ್ತದೆ ಕ್ಲಾಸ್‌?
ವಾಟ್ಸಾಪ್‌ನಲ್ಲಿ ದಿನದ ಒಂದು ಗಂಟೆ ಕಾಲ ನಡೆಯುವ ಈ ತರಗತಿಯು ಗ್ರಾಫಿಕ್ಸ್‌ ಹಾಗೂ ಬರವಣಿಗೆ ಮೂಲಕ ಐದು ಅಕ್ಷರಗಳಂತೆ ಅಭ್ಯಾಸ ನಡೆಸಲಾಗುತ್ತದೆ. ಅದೇ ರೀತಿ ವಾಯ್ಸ ನೋಟ್‌ ಮೂಲಕ ಯಾವ ರೀತಿ ಬರೆಯಬೇಕೆಂಬ ತರಬೇತಿ ನೀಡಲಾಗುತ್ತದೆ. ಪ್ರತಿ ಗ್ರೂಪ್‌ಗೆ
ಮೂವರು ಶಿಕ್ಷಕರು ತರಬೇತಿ ನೀಡುತ್ತಾರೆ. ಬಳಿಕ ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಅದೇ ಗ್ರೂಪ್‌ನಲ್ಲಿ ಪೋಸ್ಟ್‌ ಮಾಡುತ್ತಾರೆ. ತಪ್ಪಿದಲ್ಲಿ ಶಿಕ್ಷಕರು ಅದನ್ನು ತಿದ್ದಿ ಮತ್ತೆ ವಿದ್ಯಾರ್ಥಿಗಳಿಗೆ ಕಲಿಸುವ ವ್ಯವಸ್ಥೆ ಮಾಡುತ್ತಾರೆ.
ಆಸಕ್ತರು ಆನ್‌ಲೈನ್‌ ತುಳು ಕಲಿಕೆ ತರಗತಿಗೆ ಸೇರಲು ಅರ್ಜಿ ಭರ್ತಿ ಮಾಡಿ ನೀಡಿದರೆ, ಸಂಘಟನೆಯ ಸದಸ್ಯರು ಅವರನ್ನು ವಾಟ್ಸಾಪ್‌ ಗ್ರೂಪ್‌ನಲ್ಲಿ ಸೇರಿಸಿ ತುಳು ಲಿಪಿ ಕಲಿಸುವ ವ್ಯವಸ್ಥೆ ಮಾಡುತ್ತಾರೆ.

ತುಳು ಭಾಷೆ ಕಲಿಕೆಗೆ ಪ್ರತ್ಯೇಕ ಗ್ರೂಪ್‌
ತುಳು ಲಿಪಿ ಮಾತ್ರವಲ್ಲದೆ, ಉಚಿತ ವಾಗಿ ತುಳು ಭಾಷೆ ಕಲಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯಪ್ರವೃತ್ತವಾಗಿದೆ. ತುಳು ಲಿಪಿ ಮೇಲ್ವಿಚಾರಕರಾದ ಶರತ್‌ ಕೊಡವೂರು ಮತ್ತು ಕಿರಣ್‌ ತುಳುವೆ ಅವರು ಹೇಳುವಂತೆ, “ತುಳು ಭಾಷೆ ಕಲಿಯಲು ಆಸಕ್ತಿ ಇರುವ ಮಂದಿಗೆ ಭಾಷೆ ಕಲಿಸಲಾಗುತ್ತಿದೆ. ಕುಂದಾಪುರ, ಬೆಂಗಳೂರು ಸಹಿತ ಹೊರ ಜಿಲ್ಲೆಯ ಮಂದಿ ಮತ್ತು ಗುಜರಾತ್‌, ನಾಗಾಲ್ಯಾಂಡ್‌, ತಮಿಳುನಾಡು ರಾಜ್ಯಗಳ ಆಸಕ್ತರೂ ತುಳು ಕಲಿಯುತ್ತಿದ್ದಾರೆ. ಇದೇ ಕಾರಣಕ್ಕೆ “ಬಲೇ ತುಳು ಭಾಷೆ ಕಲ್ಪುಗ’ ಎಂಬ ವಾಟ್ಸಾಪ್‌ ಗ್ರೂಪ್‌ ಕೂಡ ರಚನೆ ಮಾಡಲಾಗಿದೆ’ ಎನ್ನುತ್ತಾರೆ.

ತುಳು ಲಿಪಿ ಪಠ್ಯ ಪುಸ್ತಕಕ್ಕೆ ಮನವಿ
ಶೈಕ್ಷಣಿಕ ದೃಷ್ಟಿಯಿಂದ ತುಳು ಲಿಪಿಯ ಕುರಿತಾಗಿ ಶಾಲೆಗಳಲ್ಲಿ ಪ್ರತ್ಯೇಕ ಪಠ್ಯಪುಸ್ತಕ ಇಡಬೇಕು ಎಂಬುದಾಗಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. 6ನೇ ತರಗತಿಯಿಂದ 10ನೇ ತರಗತಿ ವರೆಗಿನ ತೃತೀಯ ಐಚ್ಛಿಕ ಭಾಷೆಯ ತುಳು ಪಠ್ಯದಲ್ಲಿ ತುಳು ಲಿಪಿಯ ಬಗ್ಗೆ ಪರಿಚಯವಿದೆ. ಪ್ರತ್ಯೇಕ ಪಠ್ಯಪುಸ್ತಕದ ಕುರಿತು ಕೆಲಸಗಳು ನಡೆಯುತ್ತಿವೆ.
-ದಯಾನಂದ ಕತ್ತಲ್‌ಸಾರ್‌,  ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ಅನ್ಯ ಭಾಷೆಯಲ್ಲಿ ಕಲಿಕೆ
ರಾಜ್ಯ ಸಹಿತ ಹೊರ ರಾಜ್ಯದ ಮಂದಿಗೂ ತುಳು ಲಿಪಿ ಕಲಿಸ ಲಾಗುತ್ತಿದೆ. ಮುಂಬಯಿ ಕಲಿಕಾಸಕ್ತರಿಗೆ ಕನ್ನಡ ಬಾರದ ಹಿನ್ನೆಲೆಯಲ್ಲಿ ಹಿಂದಿಯಲ್ಲಿಯೇ ತುಳುಲಿಪಿಯನ್ನು ಕಲಿಸುವ ವ್ಯವಸ್ಥೆ ಮಾಡುತ್ತಿದೆ. ಅದೇ ರೀತಿ ಕಾಸರಗೋಡಿನ ಕಲಿಕಾಸಕ್ತರಿಗೆ ಮಲಯಾಳ ಭಾಷೆ ಮೂಲಕ ತುಳು ಲಿಪಿ ಕಲಿಸಲಾಗುತ್ತಿದೆ.
-ಸುದರ್ಶನ್‌ ಸುರತ್ಕಲ್‌, ಜೈ ತುಳುನಾಡ್‌ ಸಂಘಟನೆ ಅಧ್ಯಕ್ಷ

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

9

Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗ‌ಳಲ್ಲೇ ಬಸ್‌ ನಿಲುಗಡೆ; ಅನಾಹುತಕ್ಕೆ ಎಡೆ

8(1)

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

7(1)

Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.