ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ
Team Udayavani, Sep 11, 2020, 4:34 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹಿಮಾಚಲ ಎಂದರೆ, ತತ್‌ಕ್ಷಣ ನೆನಪಿಗೆ ಬರುವುದು ಸೇಬು, ಅಲ್ಲಿನ ಹಿಮದಿಂದ ಕೂಡಿದ ಪರ್ವತಗಳು, ದೇವದಾರು ಮರ, ಕಾಡು. ಒಟ್ಟಿನಲ್ಲಿ ಇದು ದೇವಭೂಮಿ ಎಂದೇ ಪ್ರಚಲಿತವಾಗಿದೆ. ಅನೇಕ ತೊರೆಗಳು, ನದಿಗಳ ಉಗಮ ಸ್ಥಾನವಾಗಿದೆ. ನದಿಗಳು ಹಿಮ ಕರಗಿದ ನೀರುಂಡು ತುಂಬಿ ಹರಿಯುತ್ತದೆ.
ಈ ರಾಜ್ಯದ ಒಂದೊಂದು ಸ್ಥಳ ವಿಶಿಷ್ಟ ಸ್ಥಳವೂ ಹೌದು. ‘ಚಮ’ ಎಂಬ ಸ್ಥಳದ ಚಂಪಾವತಿ ದೇವಸ್ಥಾನ, ಕಾಂಗ್ರಾ ಕಣಿವೆಯ ಕೋಟೆ, ಭ್ರಜೇಶ್ರವರಿ ದೇವಸ್ಥಾನ ಮತ್ತು ಸುಂದರವಾದ ಕಣಿವೆ. ಇವುಗಳನ್ನು ಏಪ್ರಿಲ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಇಲ್ಲಿಯ ಹವಾಮಾನ ಪ್ರವಾಸಿಗರಿಗೆ ಅನೂಕಲವಾದದ್ದು.
ಬ್ರಿಟಿಷರ ಬೇಸಗೆಯ ತಾಣವೆಂದು ಹೆಸರುವಾಸಿಯಾದ ಸಿಮ್ಲಾ, ಇಲ್ಲಿನ ರಿಡ್ಜ, ಮಾಲ್, ಔಕೂ ದೇವಸ್ಥಾನ, ಇಲ್ಲಿನ ಮ್ಯೂಸಿಯಮ್ ಮತ್ತು ವಿಶ್ವವಿದ್ಯಾಲಯವನ್ನು ನೋಡಬೇಕು. ಅದಲ್ಲದೆ ಇಲ್ಲಿನ ವಾತಾವರಣ ಮನ ಸೋಲುವಂಥದು. ಲಾಹೋಲ್ ಮತ್ತು ಸೋಲಾನ್, ಸಿಟಿ ಕಣಿವೆ ನೋಡಲು ಬಲು ಸುಂದರ, ಜೂನ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಇಲ್ಲಿಯ ಹವಾಮಾನ ಪ್ರವಾಸಿಗರಿಗೆ ಅನುಕೂಲವಾದ್ದು
ಕುಲು ಎಂದರೆ, ಅಲ್ಲಿನ ಅತ್ಯುತ್ತಮ ಸಾಲುಗಳು, ರತ್ನಗಂಬಳಿಗಳು ನೆನಪಿಗೆ ಬರುತ್ತದೆ. ಇಲ್ಲಿ ಅತೀ ಸುಂದರವಾದ ಮೂಲಗಳ ಒಂದು ಫಾರ್ಮ್ ಇದೆ. ಅದನ್ನು ನೋಡಿಯೇ ತೀರಬೇಕು. ‘ಮಂಡಿ’ ಎನ್ನುವ ಸ್ಥಳ ಬಿಯಾಸ್ ನದಿಯ ತಟದಲ್ಲಿದೆ. ಇಲ್ಲಿ ಕಲ್ಲಿನಲ್ಲಿ ಕಟ್ಟಿದ 80 ವರ್ಷಕ್ಕಿಂತ ಹಳೆಯ ದೇವಸ್ಥಾನವಿದೆ. ಇಲ್ಲಿಗೆ ಮಾರ್ಚ್ ತಿಂಗಳಿಂದ ಜೂನ್ ತಿಂಗಳವರೆಗೆ ಭೇಟಿ ಕೊಟ್ಟರೆ ಉತ್ತಮ.
ಧರ್ಮಶಾಲಾ, ಮನಾಲಿ ಮತ್ತು ಕುಫ್ರಿ ಇವು ಅತೀ ಸುಂದರವಾದ ಜಾಗಗಳು. ಹಿಡಿಂಬೆ ದೇವಸ್ಥಾನ (ಇದು ಬೇರೆ ಎಲ್ಲೂ ಇಲ್ಲ), ಮನು ದೇವಸ್ಥಾನ, ಕ್ಲಬ್ ಹೌಸ್, ಟಿಬೆಟಿಯನ್ನರ ಮೊನೆಸ್ಟಿ, ವಶಿಷ್ಟರ ಸಿಹಿ ನೀರಿನ ಬುಗ್ಗೆ ಇವುಗಳನ್ನು ಮನಾಲಿಯಲ್ಲಿ ಕಾಣಬಹುದು. ರೋತಂಗ್ ಪಾಸ್, ಹಿಮದಿಂದ ಆವೃತವಾದ ಜಾಗ ಇಲ್ಲಿ ಹಿಮದಲ್ಲಿ ಆಡುವ ಅನುಭವ ಅದ್ಭುತ ಕುಫ್ರಿ ಇದು ಅತಿ ಎತ್ತರದ ಪರ್ವತ ಪ್ರದೇಶ, ಇವುಗಳನ್ನು ಸಂದರ್ಶಿಸಲು ಮೇ ತಿಂಗಳಿಂದ ಅಕ್ಟೋರ್ಬ ತಿಂಗಳ ಪ್ರಶಸ್ತ. ಈ ರಾಜ್ಯದ ಪ್ರಜೆಗಳು ಸ್ನೇಹಪರ, ಶ್ರಮ ಜೀವಿಗಳು,
ಚನ್ನ ಮಾದ್ರ
ಬೇಕಾಗುವ ಸಾಮಗ್ರಿ: ಮೊಸರು ಮೂರು ಕಪ್, ಬೇಯಿಸಿದ ಕಾಬೂಲಿ ಚೆನ್ನ (ಬಿಳಿ ಕಡಲೆ) ಎರಡು ಕಪ್, ತುಪ್ಪ ಕಾಲು ಕಪ್, ಒಣದ್ರಾಕ್ಷಿ ಮೂರು ಟೀ ಚಮಚ, ಏಲಕ್ಕಿ ನಾಲ್ಕು, ಲವಂಗ ಐದು, ದೊಡ್ಡ ಏಲಕ್ಕಿ ಪುಡಿ ಒಂದು ಚಿಟಿಕೆ, ಲವಂಗ ಪುಡಿ ಒಂದು ಚಿಟಿಕೆ ಅರಸಿನ ಪುಡಿ ಅರ್ಧ ಟೀ ಚಮಚ, ಜೀರಿಗೆ ಪುಡಿ ಮುಕ್ಕಾಲು ಟೀ ಚಮಚ, ಉಪ್ಪು ಅರ್ಧ ಟೀ – ಚಮಚ.
ವಿಧಾನ: ಮೇಲಿನ ಎಲ್ಲ ಸಾಮಗ್ರಿಗಳನ್ನು ಬೆರೆಸಿ, ಸಣ್ಣ ಉರಿಯಲ್ಲಿ 30 ನಿಮಿಷ ಬೇಯಿಸಿ, ಚನ್ನು ಮಾದ್ರ ರೆಡಿ.
ಮಾದ್ರ
ಬೇಕಾಗುವ ಸಾಮಗ್ರಿ: ಬಟಾಣಿ ಒಂದು ಕಪ್, ಆಲೂಗಡ್ಡೆ ಎರಡು, ಮೊಸರು ಎರಡು ಕಪ್, ಹೆಚ್ಚಿದ ಹಸಿ ಶುಂಠಿ ಒಂದು ಟೀ ಚಮಚ, ಜೀರಿಗೆ ಒಂದು ಟೀ ಚಮಚ, ಕೊತ್ತಂಬರಿ ಬೀಜದ ಪುಡಿ ಒಂದು ಟೀ ಚಮಚ, ಅರಸಿನ ಪುಡಿ ಅರ್ಧ ಟೀ ಚಮಚ, ಮೆಣಸಿನಪುಡಿ ಒಂದು ಟೀ ಚಮಚ, ಕಾಳುಮೆಣಸು ಐದು, ಏಲಕ್ಕಿ ನಾಲ್ಕು ದಾರಿ ಒಂದು ಇಂಚು ತುಂಡು, ಲವಂಗ ಐದು, ತುಪ್ಪ ಒಂದು ದೊಡ್ಡ ಚಮಚ, ಎಣ್ಣೆ ಕರಿಯಲು ಉಪ್ಪು ರುಚಿಗೆ ತಕ್ಕಂತೆ.
ವಿಧಾನ: ಆಲೂಗಡ್ಡೆ ತೊಳೆದು ಮಧ್ಯಮ ಗಾತ್ರದ ಹೋಳುಗಳಾಗಿ ಕತ್ತರಿಸಿ, ಅರ್ಧ ಬೇಯುವವರೆಗೆ ಎಣ್ಣೆಯಲ್ಲಿ ಕರಿಯಿರಿ. ಎರಡು ದೊಡ್ಡ ಚಮಚ ಎಣ್ಣೆ ಬಿಸಿಮಾಡಿ, ಜೀರಿಗೆ, ಕೊತ್ತಂಬರಿ ಪುಡಿ, ಅರಸಿನ ಪುಡಿ, ಮೆಣಸಿನ ಪುಡಿ ಹಾಕಿ ಒಂದು ನಿಮಿಷ ಕೈಯಾಡಿಸಿ. ಮೊಸರು ಸೇರಿಸಿ ಚೆನ್ನಾಗಿ ಕದಡಿ. ಕುದಿ ಬಂದ ಒಡನೆ ಕಾಳುಮೆಣಸು, ಲವಂಗ, ಏಲಕ್ಕಿ ಮತ್ತು ದಾನಿ ಬೆರೆಸಿ ಕುದಿಸಿ, ಅರೆಬೆಂದ ಆಲೂಗೆಡ್ಡೆಯನ್ನು ಸೇರಿಸಿ ಬೇಯಿಸಿ ಮೊಸರಿನ ಮಿಶ್ರಣ ಇಂಗುವವರೆಗೆ ಕೈಯಾಡಿಸಿ. ಈಗ ಬಟಾಣಿ ಮತ್ತು ಅರ್ಧ ಕಪ್ ನೀರನ್ನು ಮೊಸರಿನ ಮಿಶ್ರಣಕ್ಕೆ ಬೆರೆಸಿ ಬೇಯಿಸಿ, ತಯಾರಾದ ಮಾದನ ತುಷವನ್ನು ಸೇರಿಸಿ ತಿನ್ನಲು ಕೊಡಿ.
ಖಡಿ
ಬೇಕಾಗುವ ಸಾಮಗ್ರಿ: ಲವಂಗ ನಾಲ್ಕು, ಮೆಂತೆ, ಅರ್ಧ ಟೀ ಚಮ ಹಿಂಗು ಅರ್ಧ ಟೀ ಚಮಚ, ಒಣ ಮೆಣಸಿನಕಾಯಿ ನಾಲ್ಕು ಅರಸಿನ ಪುಡಿ ಕಾಲು ಟೀ ಚಮಚ, ಈರುಳ್ಳಿ ಎರಡು, ಮೆಣಸಿನಪುಡಿ ಒಂದು ಟೀ ಚಮಚ, ಕೊತ್ತಂಬರಿ ಬೀಜದ ಪುಡಿ ಒಂದು ಟೀ ಚಮಚ, ಎಣ್ಣೆ ಎರಡು ದೊಡ್ಡ ಚಮಚ, ಕಡಲೆ ಹಿಟ್ಟು ಅರ್ಧ ಕಪ್, ಮೊಸರು ಅರ್ಧ ಕಪ್, ನೀರು ಮೂರು ಕಪ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಒಂದು ದೊಡ್ಡ ಚಮಚ, ಬೂಂದಿ ಅರ್ಧ ಕಪ್, ಉಪ್ಪು ರುಚಿಗೆ ತಕ್ಕಂತೆ.
ವಿಧಾನ: ಕಡಲೆ ಹಿಟ್ಟು ಮತ್ತು ಮೊಸರನ್ನು ನೀರಿನೊಂದಿಗೆ ಬೆರೆಸಿ ಕೊಳ್ಳಿ. ಹದ ನೀರಾಗಿರಲಿ. ಮೆಂತೆ, ಲವಂಗ, ಹಿಂಗು, ಒಣ ಮೆಣಸಿನಕಾಯಿ ಯನ್ನು ಒಗ್ಗರಣೆ ಮಾಡಿ. ಹೆಚ್ಚಿದ ಈರುಳ್ಳಿಯನ್ನು ಒಗ್ಗರಣೆ ಹಾಕಿ ಹೊಂಬಣ್ಣಕ್ಕೆ ಹುರಿದುಕೊಳ್ಳಿ. ಹುರಿದ ಈರುಳ್ಳಿ ಅರಸಿನ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಬೀಜದ ಪುಡಿ ಸೇರಿಸಿ ಹುರಿಯಿರಿ. ಈಗ ಬೆರೆಸಿದ ಕಡಲೆಹಿಟ್ಟಿಗೆ, ಉಪ್ಪನ್ನು ಸೇರಿಸಿ ಕುದಿಸಿ, ಸಣ್ಣನೆ ಉರಿಯಲ್ಲಿ 20 ನಿಮಿಷ ಕುದಿಸಿ, ಬಡಿಸುವ ಮುನ್ನ ಬೂಂದಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
ಬೇಡವಾನ್ಸ್
ಬಗೆ – ಒಂದು ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು ಒಂದು ಕೆ.ಜಿ., ಅಡುಗೆ ಸೋಡಾ ಅರ್ಧ ಟೀ ಚಮಚ, ಯೀಸ್ಟ್ ಎರಡು ಟೀ ಚಮಚ, ಹಾಲು ಮುಕ್ಕಾಲು ಕಪ್, ತುಪ್ಪ ಅರ್ಧ ಕಪ…, ಸಕ್ಕರೆ ಅರ್ಧ ಟೀ ಚಮಚ,
ಬಗೆ – ಎರಡು
ಉದ್ದು ಎರಡು ಕಪ್, ಕೊತ್ತಂಬರಿ ಬೀಜ ಒಂದು ಟೀ ಚಮಚ, ಜೀರಿಗೆ ಒಂದು ಟೀ ಚಮಚ, ಹಿಂಗುಣಂದು ಚಿಟಿಕೆ, ಮೆಣಸಿನಕಾಯಿ ಎರಡು, ಉಪ್ಪು ರುಚಿಗೆ ತಕ್ಕಂತೆ.
ವಿಧಾನ: ಗೋಧಿಹಿಟ್ಟು ಅಡುಗೆ ಸೋಡಾ, ಯೀಸ್ಟ್, ಹಾಲು, ತುಪ್ಪವನ್ನು ಸೇರಿಸಿ ಕಲಸಿ,ನಾದಿ ಮುಚ್ಚಿಡಿ. ಯೀಸ್ಟನ್ನು ಸಕ್ಕರೆಯೊಂದಿಗೆ ಬಿಸಿನೀರಿನಲ್ಲಿ 10 ನಿಮಿಷ ನೆನೆಸಿಡಿ. ನಂತರ ಉಪಯೋಗಿಸಬೇಕು. ಉದ್ದಿನ ಬೇಳೆಯನ್ನು ಎಂಟು ಗಂಟೆ ನೀರಿನಲ್ಲಿ ನೆನೆಸಿ, ಬಸಿದಿಡಿ. ಬಸಿದ ಬೇಳೆಯನ್ನು ಗಟ್ಟಿಯಾಗಿ ರುಬ್ಬಿಕೊಳ್ಳಿ. ಹೆಚ್ಚು ನೀರನ್ನು ಉಪಯೋಗಿಸುವುದು ಬೇಡ, ಕಾಳುಮೆಣಸು, ಹಸುರು ಮೆಣಸಿನಕಾಯಿ, ಹಿಂಗು, ಕೊತ್ತಂಬರಿ ಬೀಜ ಮತ್ತು ಜೀರಿಗೆಯನ್ನು ರುಬ್ಬಿಕೊಳ್ಳಿ. ಅದನ್ನು ರುಬ್ಬಿದ ಬೆಳೆಗೆ ಬೆರೆಸಿ. ಗೋಧಿ ಹಿಟ್ಟಿನ ಮಿಶ್ರಣ ಒಂದು ಉಂಡೆಯನ್ನು ತೆಗೆದು ಅಂಗೈಯಲ್ಲಿ ಚಿಕ್ಕ ಪೂರಿಯಂತೆ ತಟ್ಟಿಕೊಳ್ಳಿ ಒಂದು ಚಮಚ ರುಬ್ಬಿದ ಬೇಳೆಯ ಮಿಶ್ರಣವನ್ನು ತಟ್ಟಿದ ಹಿಟ್ಟಿನ ಮಧ್ಯೆ ಇಟ್ಟು ಮಡಚಿ, ತಟ್ಟಿ ಹತ್ತು ನಿಮಿಷ ಇಡಿ. ಅನಂತರ ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕರಿಯಿರಿ. ಹೊಂಬಣ್ಣಕ್ಕೆ ಕರಿದು, ತುಪ್ಪದಲ್ಲಿ (ಉರಿ ಹೆಚ್ಚಾದಲ್ಲಿ ಒಳಗಿನ ಹೂರಣದ ಬೇಳೆ ಬೇಯುವುದಿಲ್ಲ) ಅದ್ದಿ ಕೊಡಿ.
ಪಟೀಡ್ ಕಾ ಪಕೋಡೆ
ಬೇಕಾಗುವ ಸಾಮಗ್ರಿ: ಟಾಕೊ ಎಲೆಗಳು (ಕೆಸುವಿನೆಲೆ) ಎಂಟು, ಕಡಲೇ ಹಿಟ್ಟು ಎರಡು ಕಪ್, ಈರುಳ್ಳಿ ಮೂರು, ಬೆಳ್ಳುಳ್ಳಿ ಐದು ಎಸಳು, ಹಸಿಶುಂಠಿ ಎರಡು ಇಂಚು ತುಂಡು, ಹಸುರು ಮೆಣಸಿನಕಾಯಿ ಮೂರು, ಹುಣಿಸೇಹಣ್ಣಿನ ರಸ ಒಂದು ದೊಡ್ಡ ಚಮಚ, ಅರಸಿನ ಪುಡಿ ಅರ್ಧ ಟೀಚಮಚ, ಕೊತ್ತಂಬರಿ ಬೀಜದ ಪುಡಿ ಒಂದು ಟೀ ಚಮಚ, ಮೇಣಸಿನಪುಡಿ ಅರ್ಧ ಟೀ ಚಮಚ, ದಾಳಿಂಬೆ ಬೀಜ (ಅನಾರ ದಾನಾ) ಒಂದು ಟೀ ಚಮಚ ನೀರು ಒಂದೂವರೆ ಕಪ್, ದಾರ ಅಥವಾ ನಾರು, ಎಣ್ಣೆ ಕರಿಯಲು, ಉಪ್ಪು ರುಚಿಗೆ ತಕ್ಕಂತೆ.
ಮಾಡುವ ವಿಧಾನ: ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸುರು ಮೆಣಸಿನಕಾಯಿ, ದಾಳಿಂಬೆ ಒಣ ಬೀಜವನ್ನು ರುಬ್ಬಿಕೊಳ್ಳಿ, ರುಬ್ಬಿದ ಮಸಾಲೆಯೊಂದಿಗೆ ಕಡಲೆಹಿಟ್ಟು ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಹುಣಸೆಹಣ್ಣು ರಸ, ಉಪ್ಪನ್ನು ಬೆರೆಸಿ. ಕೆಸುವಿನೆಲೆ ಯನ್ನು ತೊಳದು, ದಂಟಿನ ನೀರನ್ನು ತೆಗೆದು, ಒಳಗಿನ ಭಾಗಕ್ಕೆ ಮೇಲಿನ ಹಿಟ್ಟನ್ನು ಹಚ್ಚಿ ಮೇಲೆ ಇನ್ನೊಂದು ಎಲೆಯನ್ನು ಹೇಗೆ ಇಟ್ಟು ಪುನಃ ಹಿಟ್ಟು ಮಿಶ್ರಣವನ್ನು ಹಚ್ಚಿ (ಪತ್ರೋಡೆ ಮಾಡಿದ ಹಾಗೆ). ಹಂಗೆ ಹೆಚ್ಚಿದ ಎಲೆಗಳನ್ನು ಹಾಸಿಗೆ ಸುತ್ತಿದಂತೆ ಸುತ್ತಿ, ಒಂದು ಇಂಚಿನ ಅಂತರದಲ್ಲಿ ದಾರದಿಂದ ಅಥವಾ ನಾರಿನಿಂದ ಕಟ್ಟಿ ತುಂಡುಗಳನ್ನಾಗಿ ಮಾಡಿ, ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದ, ಪುದೀನಾ ಚಟ್ನಿಯೊಂದಿಗೆ ಸವಿಯಲು ಕೊಡಿ.
ಆಲೂಗಡ್ಡೆ ಪಲ್ಯ
ಬೇಕಾಗುವ ಸಾಮಗ್ರಿ: ಆಲೂಗಡ್ಡೆ ಆರು, ಸಕ್ಕರೆ ಒಂದೂವರೆ ಕಪ್, ತುಪ್ಪ ಮುಕ್ಕಾಲು ಕಪ್ಪು, ಒಣದ್ರಾಕ್ಷಿ ಒಂದು ದೊಡ್ಡ ಚಮಚ, ಬಾದಾಮಿ ಮತ್ತು, ಏಲಕ್ಕಿ ಪುಡಿ ಎರಡು ಟೀ ಚಮಚ, ಕಾಯಿತುರಿ ಅರ್ಧ ಕಪ್, ನೀರು ಕಾಲು ಕಪ್,
ವಿಧಾನ: ಆಲೂಗಡ್ಡೆ ತೊಳೆದು ಬೇಯಿಸಿ, ಸಿಪ್ಪೆ ಸುಲಿದು ಪುಡಿ ಮಾಡಿಕೊಳ್ಳಿ, ತುಪ್ಪ ಬಿಸಿ ಮಾಡಿ, ಬೆಂದ ಆಲೂಗಡ್ಡೆಯನ್ನು ಹೊಂಬಣ್ಣಕ್ಕೆ ಹುರಿದುಕೊಳ್ಳಿ. ಸಕ್ಕರೆಯನ್ನು ಆಲೂಗೆಡ್ಡೆಗೆ ಬೆರೆಸಿ ಕದಡಿ, ದ್ರಾಕ್ಷಿ ಕಾಯಿತುರಿ, ಬಾದಾಮಿಯನ್ನು ಬೆರೆಸಿ ಕೈಯಾಡಿಸಿ. ಏಲಕ್ಕಿ ಪುಡಿಯನ್ನು ಬೆರೆಸಿ, ನೀರನ್ನು ಸೇರಿಸಿ ಎರಡು ನಿಮಿಷ ಚೆನ್ನಾಗಿ ಕದಡಿ. ಆಲೂಗಡ್ಡೆ ಪಲ್ಯ ರೆಡಿ.
ಕುಲ್ಲು ಟೊವ್ರು
ಬೇಕಾಗುವ ಸಾಮಗ್ರಿ: ಸಿಹಿ ನೀರಿನ ಮೀನು ಅರ್ಧ ಕೆ.ಜಿ., ಕೊತ್ತಂಬರಿ ಪುಡಿ ಒಂದು ಟೀ ಚಮಚ, ಒಣ ಮೆಣಸಿನಕಾಯಿ ಚೂರು ಒಂದು ಟೀ ಚಮಚ, ನಿಂಬೆ ಸಿಪ್ಪೆ ಅರ್ಧ ಟೀ ಚಮಚ (ನಿಂಬೆ ಹಣ್ಣನ್ನು ಕ್ಯಾರೆಟ್ ತುರಿಯುವ ಮನೆಯಲ್ಲಿ ತುರಿಯಿರಿ.), ಲಿಂಬೇರಸ ಎರಡು ದೊಡ್ಡ ಚಮಚ, ಎಲ್ಲಿ ಎರಡು ದೊಡ್ಡ ಚಮಚ, ಸಬ್ಬಸಿಗೆ ಸೊಪ್ಪು (ಹೆಚ್ಚಿದ) ಒಂದು ದೊಡ್ಡ ಚಮಚ, ಎಣ್ಣೆ ಹುರಿಯಲು,
ಸಾಸ್‌ಗೆ ಬೇಕಾಗುವ ಸಾಮಗ್ರಿ: ಹಚ್ಚಿದ ಈರುಳ್ಳಿ ನಾಲ್ಕು ದೊಡ್ಡ ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು ಒಂದು ದೊಡ್ಡ ಚಮಚ ಸಾಸಿವೆ ಅರ್ಧ ಟೀ ಚಮಚ, ನಿಂಬೆ ರಸ ಎರಡು ದೊಡ್ಡ ಚಮಚ, ಎಣ್ಣೆ ಮೂರು ದೊಡ್ಡ ಚಮಚ, ಉಪ್ಪು ರುಚಿಗೆ ತಕ್ಕಂತೆ.
ವಿಧಾನ: ಮೀನನ್ನು ತೊಳೆದು, ಕೊತ್ತಂಬರಿ ಪುಡಿ, ಮೆಣಸಿನ ಕಾಯಿ ಚೂರು, ನಿಂಬೆ ಸಿಪ್ಪೆ ಲಿಂಬೆಹಣ್ಣಿನ ರಸ, ಸಬ್ಬಸಿಗೆ ಸೊಪ್ಪು ಒಂದು ಚಮಚ, ಎಣ್ಣೆ ಉಪ್ಪಿನೊಂದಿಗೆ ಬೇರೆಸಿ ಅರ್ಧ ಗಂಟೆ ಇಡಿ. ಅನಂತರ ಮೀನನ್ನು ಸಣ್ಣನೆ ಉರಿಯಲ್ಲಿ ಹುರಿಯಿರಿ. ಒಂದು ದೊಡ್ಡ ಚಮಚ ಎಣ್ಣೆ ಬಿಸಿಮಾಡಿ, ಸಾಸಿವೆ ಒಗ್ಗರಣೆ ಮಾಡಿ, ಅದರಲ್ಲಿ ಹೆಚ್ಚಿದ ಈರುಳ್ಳಿಯನ್ನು ಹುರಿಯಿರಿ. ನಸುಗೆಂಪು ಬಣ್ಣಕ್ಕೆ ಹುರಿಯಿರಿ. ಉರಿಯಿಂದ ಕೆಳಗಿಳಿಸಿದ ಈರುಳ್ಳಿಗೆ ಕೊತ್ತಂಬರಿ ಸೊಪ್ಪು ನಿಂಬೆರಸ, ಎಣ್ಣೆ ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ಕದಡಿ, ಮೀನಿನ ಮೇಲೆ ಸುರಿಯಿರಿ. ಅನ್ನದೊಂದಿಗೆ ಬಡಿಸಿ.
ಮುಂದುವರಿಯುವುದು…
(ಮುಂದೆ: ಖಾದ್ಯ ಪ್ರಿಯರ ನಾಡು ಸಿಖ್ಖರ ಊರಿನ ಬಾಯಿ ನೀರೂರಿಸುವ ಖಾದ್ಯ ವೈವಿಧ್ಯ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಂಜಾಬ್ ಫುಡ್ ಸ್ಪೆಷಲ್ : ಸಾಹಸವಂತರ ನಾಡಿನ ಆಹಾರ ಪದ್ಧತಿಯೂ ಹೃದಯಂಗಮ
ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ
ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ
ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು
ರುದ್ರಾಕ್ಷಿಗಳಲ್ಲಿರುವ ಪ್ರಬೇಧಗಳು ಮತ್ತು ಇವುಗಳ ಧಾರಣೆಯಿಂದ ಆಗುವ ಪ್ರಯೋಜನಗಳ Full Details
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Udupi: ವಾಹನ ದಟ್ಟಣೆ ನಿಯಂತ್ರಣ ಕ್ರಮ ಎಷ್ಟು ಫಲಪ್ರದ?
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.